ಬಯಲು ಕಲ್ಲೇಶ್ವರನಿಗೆ ಹರಿದು ಬಂದ ಭಕ್ತಸಾಗರ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 06: ಹಲವು ವರ್ಷಗಳ ಹಿಂದೆ ಕೋಗಳಿ ಗ್ರಾಮದ ಮುಳ್ಳುಕಂಟಿಗಳ ಪೆಳೆಯಲ್ಲಿ ಅನಾತವಾಗಿದ್ದ ಈಶ್ವರ ಲಿಂಗವೊಂದು ನಮ್ಮ ಕಣ್ಣಿಗೆ ಗೋಚರಿಸಿತು ಎಂದು ಹಿರಿಯ ಗಂಗಣ್ಣ ಹೇಳಿದರು.
ಕೋಗಳಿ ಗ್ರಾಮದಲ್ಲಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಮುಳ್ಳುಕಂಟಿಗಳ ನಡುವೆ ಇದ್ದ ಶಿವಲಿಂಗ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ ವಿಧಿ ವಿಧಾನದಿಂದ ಪೂಜಾ ಕೈಂಕರ್ಯವನ್ನು ನಾವೇ ಮೊದಲಿಗೆ ಆರಂಭಿಸಿದ್ದೆವು. ಆ ಕ್ಷಣ ಈಗಲೂ ನನಗೆ ಚನ್ನಾಗಿ ನೆನಪಿದೆ ಈ ಶಿವಲಿಂಗವನ್ನು ಹೊರತಂದ ತಕ್ಷಣ ಒಂದು ನಾಗರ ಹಾವು ಶಿವಲಿಂಗದ ಕೊರಳಿಗೆ ಸುತ್ತಿಕೊಂಡು ಎಡೆಎತ್ತಿ ನಿಂತಿದ್ದನ್ನು ಕಂಡು ಅಂದಿನ ಜನ ಬೆರಗಾಗಿದ್ದರು. ಅಂದಿನಿಂದ ಇಂದಿನಗರೆಗೂ ಬಯಲಲ್ಲಿಯೇ ನೆಲೆಗೊಂಡಿರುವ ಈ ಈಶ್ವರ ಲಿಂಗಕ್ಕೆ ಕೋಗಳಿ ಬಯಲು ಕಲ್ಲೇಶ್ವರನೆಂದೇ ಹೆಸರು ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಕಲ್ಲೇಶ್ವರನಿಗೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ನಾಡಿನ ನಾನಾ ಕಡೆಯಿಂದ ಭಕ್ತಸಾಗರ ಹರಿದುಬರುತ್ತಿದೆ. ಪ್ರತೀ ವರ್ಷ ಶ್ರಾವಣ ಮಾಸದ ಕಡೇ ಸೋಮವಾರದಂದು ಇಲ್ಲಿ ಭಕ್ತಾದಿಗಳು ಪರವು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸ್ವಾಮಿ ಮರುಳಾರಾಧ್ಯ ಹಾಗೂ ಅಕ್ಕಿ ಕುಮಾರ್, ಎ.ರೇಣುಕಾ ವೈದ್ಯ , ಲೇಖಕ ಜೆ.ಎಂ.ಚಂದ್ರು , ವಿಶ್ವನಾಥ, ರೂಪ, ದೀಪ, ನಂದಿನಿ, ನಿರಂಜನ, ಪವನ್, ಮಂಜುನಾಥ ಸೇರಿದಂತೆ ಕೋಗಳಿ ಗ್ರಾಮದ ಮುಖಂಡರು, ಗ್ರಾಮಸ್ಥರು, ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.