ಬೈಲಹೊಂಗಲ

ರೈತರ ಜಮೀನಿಗೆ ನುಗ್ಗಿದ ಮೊಸಳೆ

ರೈತರ ಜಮೀನಿಗೆ ನುಗ್ಗಿದ ಮೊಸಳೆ

ಸಾಹಸ ಮೆರೆದ ಯುವಕರ ತಂಡ: ಮೊಸಳೆ ಕಟ್ಟಿ ಹಾಕುವಲ್ಲಿ ಯಶಸ್ವಿ 

ಬೈಲಹೊಂಗಲ 16: ಸಮೀಪದ ಹೊಸೂರ ಗ್ರಾಮದ ರೈತ ಹುದ್ದಾರ ಅವರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ ಕಂಡು ರೈತರು ಜೀವ ಭಯದಲ್ಲಿ ಕಾಲ ಕಳೆಯುವಂತಾದ ಘಟನೆ ನಡೆದಿದೆ. 

ಎರಡಮೂರು ದಿನಗಳ ಹಿಂದೆ ಬಾರಿ ಮಳೆಯಿಂದ ಗ್ರಾಮದ ಸೇತುವೆ ಮೇಲೆಯಿಂದ ಮಲಪ್ರಭಾ ನದಿಗೆ ನೀರು ಹರಿದ ಪರಿಣಾಮ ನದಿಯಲಿದ್ದ ಮೊಸಳೆ ರೈತರ ಜಮೀನಿಗೆ ಬಂದಿದೆ. 

ಬೆಳಗಿನ ಜಾವ ಗ್ರಾಮದ ರೈತನ ಹೊಲದಲ್ಲಿ ಕಟ್ಟಿದ್ದ ನಾಯಿಯೊಂದು ಬಹಳಷ್ಟು ಕಿರುಚತೊಡಗಿದಾಗ ರೈತ ಹೋಗಿ ನೋಡುವಷ್ಟರಲ್ಲಿ ನಾಯಿ ಮೊಸಳೆಯ ಬಾಯಿಗೆ ಆಹಾರವಾಗಿತ್ತು. ಇದನ್ನು ನೋಡಿದ ರೈತ ಗ್ರಾಮದ ಯುವಕರಿಗೆ ವಿಷಯ ಮುಟ್ಟಿಸಿದ್ದರಿಂದ ಕಬ್ಬು ಗದ್ದೆಗೆ ತೆರಳಿದ ಗ್ರಾಮದ ಯುವಕರ ತಂಡ ಕಬ್ಬು ಬೆಳೆಯಲ್ಲಿ ನಾಯಿಯನ್ನು ತಿಂದ ಮೊಸಳೆ ಕಣ್ಣಿಗೆ ಬಿದ್ದಿದೆ. ಭಯ ಭೀತರಾದ ಯುವಕರು ತಕ್ಷಣ ಪೊಲೀಸ ಹಾಗೂ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. 

ಪೋಲಿಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿದರೆ ಅರಣ್ಯ ಇಲಾಖೆಯ ಸಿಬ್ಬಂದಿಯ ಸುಳಿವೆ ಇರಲಿಲ್ಲ. ಆದರೆ ಮೊಸಳೆ ಮಾತ್ರ ತನ್ನ ದಾರಿಗೆ ಸುಂಕುವಿಲ್ಲ ಎಂದು ಕಬ್ಬು ಬೆಳೆಯಲ್ಲಿ ಹೋಗಲು ಯತ್ನಿಸಿದಾಗ ಯುವಕರ ತಂಡ ಜೀವದ ಹಂಗು ತೊರೆದು ತಡ ಮಾಡದೆ ಕಬ್ಬು ಬೆಳೆ ತಗೆದು ಹಗ್ಗ ಬಳಸಿ ಮೊಸಳೆಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.  

ಗಾಢ ನಿದ್ರೆಯಲ್ಲಿರುವ ಅರಣ್ಯ ಇಲಾಖೆ ಬರಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳುತ್ತ ಅರ್ಧ ದಿನ ಕಳೆದರೂ ಇಲಾಖೆಯ ಸಿಬ್ಬಂದಿ ಮಾತ್ರ ಇತ್ತ ಸುಳಿದಿಲ್ಲ. ಪ್ರಾಣಿಗಳ ರಕ್ಷಣೆಗೆ ಮುಂದಾಗ ಬೇಕಿದ್ದ ಅರಣ್ಯ ಇಲಾಖೆ ಕಾಲಹರಣ ಮಾಡಿ ಬೇಜವಾಬ್ದಾರಿಯಿಂದ ನಡೆದುಕೊಂಡು ನಂತರ ಪ್ರಾಣಿಗಳು ತಪ್ಪಿಸಿಕೊಂಡು ಹೋದ ನಂತರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಳದಲ್ಲಿ ಬೀಡು ಬಿಡುವದೆ ಅರಣ್ಯ ಇಲಾಖೆಯ ಕಾರ್ಯವೆ? ಎಂಬುವದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.  

ಗ್ರಾಮಸ್ಥರು ಇಲಾಖೆ ಸಿಬ್ಬಂದಿಯ ಕಾರ್ಯವೈಖರಿಗೆ, ನಿರ್ಲಕ್ಷ್ಯತನಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಸಳೆಯನ್ನು ಸವದತ್ತಿ ಅರಣ್ಯ ಇಲಾಖೆೆಯವರು ತೆಗೆದುಕೊಂಡು ಹೋಗಿದ್ದಾರೆ. ಗ್ರಾಮಸ್ಥರು ಯುವಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ