ಬಳ್ಳಾರಿ

ಯುವತಿ ಕಾಣೆ ಪ್ರಕರಣ ದಾಖಲು

ಯುವತಿ ಕಾಣೆ ಪ್ರಕರಣ ದಾಖಲು

ಬಳ್ಳಾರಿ 05: ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ನಿವಾಸಿಯಾದ ಜ್ಯೋತಿ.ಎನ್ ಎನ್ನುವ 16ವರ್ಷದ ಯುವತಿ ಸೆ.26ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಸಿರಿಗೇರಿ ಪೋಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ. 

ಕಾಣೆಯಾದ ಯುವತಿಯ ಚಹರೆ ಗುರುತು: ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, 4.8ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. 

ಕಾಣೆಯಾದ ಸಂದರ್ಭದಲ್ಲಿ ಕರಿ ಬಣ್ಣದ ಟಾಪ್ ಮತ್ತು ಕರಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. 

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೋಲೀಸ್ ಠಾಣೆಯ ದೂ.08396244426, ಮೊ.9480803056 ಅಥವಾ ಬಳ್ಳಾರಿ ಪೋಲಿಸ್ ಕಂಟ್ರೋಲ್ ರೂಂ.08392258100 ಗೆ ಸಂಪರ್ಕಿಸಬಹುದಾಗಿದೆ. 


ಸುದ್ದಿ ಓದಿ