ದಿಟ್ಟ, ಕೆಚ್ಚೆದೆಯ ಕ್ರಾಂತಿಕಾರ ವಚನಕಾರ ಅಂಬಿಗರ ಚೌಡಯ್ಯ
ವಚನ ಸಾಹಿತ್ಯವು 11-12 ನೇ ಶತಮಾನದಲ್ಲಿ ಅತ್ಯಂತ ಪ್ರಭಾವ ಬೀರಿದ್ದ ವೈಚಾರಿಕತೆ ಮತ್ತು ಸಮಾನತೆ ಸಮಾಜ ಸುಧಾರಣೆಗಾಗಿ ಅರಿವು ಮೂಡಿಸಿ ಚಳುವಳಿ ಸ್ವರೂಪದಲ್ಲಿ ವಚನಕಾರರು ದೇವರದಾಸಿಮಯ್ಯ ಹಾಗೂ ಗುರು ಬಸವಣ್ಣನವರ ಜೊತೆ ಅಂಬಿಗರ ಚೌಡಯ್ಯನಂತಹ 770ಕ್ಕೂ ಹೆಚ್ಚು ಶಿವಶರಣರಿಂದ ರಚಿಸಿ ಪ್ರಚಾರ ಪಡೆದ ಒಂದು ಐತಿಹಾಸಿಕ.
ಇಂತಹ ಅನೇಕ ವಚನಕಾರರಲ್ಲಿ ತನ್ನದೇ ಪ್ರತ್ಯೇಕವಾದ ರೀತಿಯಲ್ಲಿ ಒಬ್ಬ ಸಾಮಾನ್ಯ ದೋಣಿ ಸಾಗಿಸುವ ಅಂಬಿಗ ಕೆಚ್ಚೆದೆಯ ವಚನಕಾರನಾಗಿ ತನ್ನದೇ ಛಾಪನ್ನು ಮೂಡಿಸಿದ್ದಾನೆ.
11ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ 12ನೇ ಶತಮಾನದ ಕಡೆಯವರೆಗೂ ಜನಸಾಮಾನ್ಯರ ಆಂದೋಲನವಾಗಿ ಬೆಳೆದ ಇದು ಸಾಹಿತ್ಯ ಪ್ರಕಾರದಲ್ಲಿ ಒಂದು ವಿಶಿಷ್ಠ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅಧ್ಯಯನ ಮಾಡಿದರೆ ತತ್ವಶಾಸ್ತ್ರವಾಗುವ, ಕನ್ನಡದ ವಿಶೇಷ ಪ್ರಕಾರ ವಚನ ಎಂದರೆ ಪ್ರಮಾಣ ಅಥವಾ ಕೊಟ್ಟಮಾತು, ಸೂಳ್ನುಡಿ ಎನ್ನಬಹುದು.
ವಚನ ಚಳುವಳಿಕಾರರಲ್ಲಿ ಒಂದು ವಿಭಿನ್ನ ವಿಶಿಷ್ಠ ಸಾಲಿಗೆ ನಿಲ್ಲುವ ನಮ್ಮ ಅಂಬಿಗರ ಚೌಡಯ್ಯ ಎಂದು ಅವರ ವಚನಗಳನ್ನು ನೋಡಿದಾಗ ತಿಳಿಯುತ್ತದೆ.
ಕಲ್ಲದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ
ಹುಟ್ಟಿದರು
ಮಣ್ಣದೇವರ ಪೂಜಿಸಿ ಮಾನಹೀನರಾದರು
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು
ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು
ಜಗದ್ಬರಿತವಾದ ಪರಶಿವನೊಳಗೆ ಕಿಂಕರನಾದ
ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ
ಈ ವಚನವು ಮಾನವರು ಮಾಡುವ ಯಾವ ಪೂಜೆಯಿಂದ ಅವರಿಗೆ ಏನು ಫಲ ದೊರೆಯುತ್ತದೆ? ಮತ್ತು ನಿಜ ಭಕ್ತಿ ಎಂದರೇನು? ಎಂಬುದನ್ನು ನಮ್ಮ ಅಂಬಿಗರ ಚೌಡಯ್ಯ ಈ ವಚನದ ಮೂಲಕ ತಿಳಿಸಿದ್ದಾರೆ ಈತನ ಮತ್ತೊಂದು ವಚನ ನೋಡೋದಾದರೇ.....
ನಿಜಗಂಡನ ಸಂಗವನೊಲ್ಲದೆ ಭೊಜಗರ ಸಂಗವ
ಮಾಡುವ ಬಜಾರಿ
ತೋತ್ತೆಗೆಲ್ಲಿಯದೂ ನಿಜಮುತೈದೆತನ
ತ್ರಿಜಗವಂದಿತ ಲಿಂಗವ ಕರಕಮಲದಲ್ಲಿ ಹಿಡಿದು ಕೊಂಡಿರ್ದ
ಬಳಿಕ ಅಲ್ಲಿ ನಂಬಿ ಪೂಜಿಸಿ ಮುಕ್ತಿಯ ಪಡೆಯರಿಯದ
ಲೋಕದ ಗಜಿಬಿಜಿ ದೈವಂಗಳಿಗೆರಗುವ ಕುನ್ನಿ
ಮಾನವರ ಕಂಡರೆ
ಯಮನು ಜಿಗಿದೆಳೆದೊಯ್ದು ಕೊಲ್ಲದಿಪನೆ ?
ಹಾಗೆ ಸಾಯಲೆಂದಾತ ನಮ್ಮ ಅಂಬಿಗರ ಚೌಡಯ್ಯ
ಈ ವಚನದಲ್ಲಿ ಒಬ್ಬ ಹೆಂಡತಿ ತನ್ನ ನಿಜವಾದ ಗಂಡನ ಸಂಗವನ್ನು ಬಿಟ್ಟು ಪರ ಪುರುಷನಿಗೆ ಆಕರ್ಷಿತವಾದರೆ ಆಕೆ ನಿಜವಾದ ಮುತೈದೆ ಹೇಗೆ ಆಗುತ್ತಾಳೆ? ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಲಿಂಗವನ್ನು ಕೈಯಲ್ಲಿ ಹಿಡಿದು ನಿಜ ಭಕ್ತಿ ಇಲ್ಲದೆ ಪೂಜಿಸದ ಯಮ ಎಳೆದೊಯ್ದು ಕೊಲ್ಲುತ್ತಾನೆ ಎಂದು ಹೇಳುತ್ತಾರೆ. ಹೀಗೆ ಅವರು ನೇರ, ನಿಷ್ಠುರ ನುಡಿಗಳಿಂದ ಕಂಡಿದ್ದನ್ನು ಕಂಡಹಾಗೆ ಯಾರಿಗೂ ಹೆದರದೆ ಹೇಳುವ ವ್ಯಕ್ತಿತ್ವ ನಮ್ಮ ಅಂಬಿಗರ ಚೌಡಯ್ಯನದ್ದು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗಂಗಾಮತ ಕೂಲಿ ಅಂಬಿಗರ ಗುರುದೈವ ಇವರ ಮೂಲ ಹೆಸರು ಚೌಡೇಶ ಈತ 1160ರಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಶಿವಪುರ ಎಂಬ ಗ್ರಾಮದಲ್ಲಿ ಪಂಪಾದೇವಿ ಮತ್ತು ವಿರೂಪಾಕ್ಷ ದಂಪತಿಗಳ ಹೆಂಡತಿ ಸುಲೋಚನೆ ಪುರವರ ಪುರವಂತ ಮಗನಾಗಿ ಜನಿಸಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಶಿವಪುರ ಎನ್ನುವ ಊರು ಈಗ ಚೌಡಯ್ಯದಾನಪೂರ ಎಂದು ಕರೆಯಲಾಗುತ್ತದೆ.
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ
ಅಂಬಿಗರ ಚೌಡಯ್ಯ (ನಿಜ) ಶರಣನು.
ಈ ಹೆಸರು ಬರುವುದಕ್ಕೂ ಒಂದು ಕಥೆಯಿದೆ. ಸ್ಥಳೀಯ ಜನರು ಹೇಳುವ ಪ್ರಕಾರ ಗುತ್ತಲ ಗ್ರಾಮದ ರಾಜ ರಾಜಗುತ್ತಲ ಈ ಅರಸನ ಮಗನಿಗೆ ಒಂದು ಗಂಭೀರ ಕಾಯಿಲೆ ಬಂದು ಅನೇಕರು ಚಿಕಿತ್ಸೆ ನೀಡಿದರೂ ಮಗು ಚೇತರಿಕೆ ಕಾಣಲಿಲ್ಲ. ಆಗ ಅಂಬಿಗರ ಚೌಡಯ್ಯ ಬಂದು ತನ್ನ ಶಕ್ತಿ ಮತ್ತು ಚಿಕಿತ್ಸೆಯಿಂದ ಮಗುವು ಚೇತರಿಸಿತು. ಆ ರಾಜ ಚೌಡಯ್ಯನಿಗೆ ಪೂರ್ವ, ಪಶ್ಚಿಮಕ್ಕೆ 7 ಮೈಲು, ಉತ್ತರ, ದಕ್ಷಿಣಕ್ಕೆ 14 ಮೈಲು ಭೂಮಿಯನ್ನು ದಾನವಾಗಿ ನೀಡುತ್ತಾನೆ. ತನಗೆ ದಾನವಾಗಿ ಬಂದದನ್ನು ಚೌಡಯ್ಯ ಕಾಳಾಮುಖಮದಿ ಶಿವದೇವ ಎಂಬ ಗುರುವಿಗೆ ಕೊಟ್ಟು ಬಿಡುತ್ತಾನೆ. ಆಗ ಆ ಶಿವಪುರಕ್ಕೆ ಚೌಡಯ್ಯದಾನಪೂರ ಅಂತ ಹೆಸರು ಬಂದಿತು.
ಇಂತಹ ಮಹಾದಾನಿ ಅಂಬಿಗರ ಚೌಡಯ್ಯ ಕೇವಲ ತುಂಬಿದ ಹೊಳೆಯಲ್ಲಿ ಹುಟ್ಟು ಹಾಕುವ ಅಂಬಿಗನಲ್ಲಿ ಭವಸಾಗರದಲ್ಲೂ ಕೂಡಾ ಹುಟ್ಟು ಹಾಕುವ ಕೌಶಲ್ಯವುಳ್ಳ ವ್ಯಕ್ತಿ ಎಂಬುವುದು ತನ್ನ ಮಾತು ಆಲೋಚನೆ ಮತ್ತು ವಚನಗಳ ಮೂಲಕ ನಾವು ತಿಳಿಯಬಹುದು.
ಚಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೊಂದೆ ಠಾವಿಗೊಯ್ದಿಳುಹುವೆನಂದ ನಂಬಿಗಚೌಡಯ್ಯ
ಅಂಬಿಗರ ಚೌಡಯ್ಯ ಉಳಿದೆಲ್ಲ ವಚನಕಾರರಕ್ಕಿಂತ ಭಿನ್ನ ಹಾಗೂ ವಿಶಿಷ್ಠ ವ್ಯಕ್ತಿತ್ವ ಈತ ವೃತ್ತಿಯಿಂದ ಅಂಬಿಗನಾದರೂ ಪ್ರವೃತ್ತಿಯಿಂದ ಅನುಭಾವಿ ನೇರ ನಿರ್ಭಿತ ನುಡಿಗಳಿಂದ ವಚನಗಳನ್ನು ಬರೆಯುವ ವ್ಯಕ್ತಿ ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಯಲ್ಲಿ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ ಭವ ಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯವುಳ್ಳ ಅವ ಎಂದು ಹೇಳಿಕೊಳ್ಳುವುದರಲ್ಲಿ ಉಳಿದ ವಚನಕಾರರ ವಚನಗಳಲ್ಲಿರುವಂತೆ ಈತನಲ್ಲಿಯೂ ಶಿವಾನುಭವ ಪರವಾದ ವಚನಗಳು ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜದಲ್ಲಿದ್ದ ವಿಡಂಭನೆಯ ವ್ಯಾಗ್ರದೃಷ್ಠಿ ಬೇರೆಯವರಲ್ಲಿ ತುಂಬಾ ವಿರಳವೆಂದೇ ಹೇಳಬಹುದು. ಇವರ ವಚನಗಳ ವಸ್ತು, ಭಾಷೆ, ಶೈಲಿ ಗಮನಿಸಿದರೆ ಇತನೊಬ್ಬ ಕೆಚ್ಚೆದೆಯ ನಿಷ್ಠುರ ಪ್ರಾಕೃತಿಯ ಗ್ರಾಮ್ಯ ಮನೋಧರ್ಮದ ಒರಟು ವಚನಕಾರ ಎಂಬುದು ಸ್ಪಷ್ಟವಾಗುತ್ತದೆ. ಇವರು ನ್ಯಾಯನಿಷ್ಠುರ ದಯೆ, ದ್ರಾಕ್ಷಿಣ್ಯ ಪರರಲ್ಲಿ ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅವನು ಟೀಕಿಸದ ಬಿಡುವುದಿಲ್ಲ ಅವನು ಮೃದುವಾಗಿ ಮಾತನಾಡುವುದು ಅಪೂರ್ವ. ಮಾತಿನ ಬಹುಭಾಗ ಹರಿತವಾದದು ಸಂಸ್ಕಾರ ದೂರವಾದದು.
ಕೇಳಿರಯ್ಯ ಮಾನವರೇ ಶೀಲದಲ್ಲಿ ಸಂಪನ್ನರಾದವರೂ ನೀವು ಕೇಳಿರೊ... ನನಗೊಬ್ಬರ ಎಂಜಲು ಸೇರದು ಎಂದು ಶುಚಿತದಲ್ಲಿ ಬದುಕುವ ಬರಿಯ ಮಾತಲ್ಲಿನ ಭುಂಜಕರು ನೀವು ಕೇಳಿರೊ ಪರ ಪುರುಷಾರ್ಥವನರಿಯದೇ ಕೆಟ್ಟ ನರ ಕುರಿಗಳು ನೀವು ಕೇಳಿರೊ ಎಂದು ಆರಂಭವಾಗಿ ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆ ಎಂದ, ಪರಿಹಾರ ಎತ್ತಣ್ಣನ್ನ ಎಡ ಪಾದರಕ್ಷೆಯಿಂದ ಪಟಪಟನೆ ಎಂದು, ಮೂಗು ಕೊಯ್ದು ಇಟ್ಟಂಗಿಯ ಕಲ್ಲಿಲೆ ಸಾಸಿವೆಯ ತಿಕ್ಕಿ, ಹಿಟ್ಟಿನ ತಳೆದು ಮೇಲೆ ನಿಂಬಿಯ ಹಿಂಡಿ ಪಡುವಲ ಗಾಳಿಗೆ ಹಿಡಿ ಹೀಗೆ ಮುಕ್ತಾಯವಾಗುತ್ತದೆ. ಇವರ ವಚನಗಳ ಶೈಲಿ
ಉಂಡರೆ ಭೂತನೆಂಬರು,
ಉಣದಿದ್ದರೆ ಚಕೋರನೆಂಬರು,
ಭೋಗಿಸಿದರೆ ಕಾಮಿಯೆಂಬರು
ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ
ಎಂಬರು,
ಊರೊಳಗಿದ್ದರೆ ಸಂಸಾರಿ ಎಂಬರು,
ಅಡವಿಯೊಳಗಿದ್ದರೆ ಮೃಗಜಾತಿ ಎಂಬರು,
ನಿದ್ರೆಗೈದರೆ ಜಡದೇಹಿ ಎಂಬರು,
ಇಂತೀ ಜನ ಮೆಚ್ಚಿ ನಡೆದವರ
ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ವ
ಾಡು, ಮನೆ ಮಾಡು
ಎಂದಾತ ನಮ್ಮ ಅಂಬಿಗರ ಚೌಡಯ್ಯ.
ಈ ವಚನಲ್ಲಿ ವ್ಯಕ್ತಪಡಿಸಿರುವಂತೆ ಸಮಾಜದ ಹಳೆಯ ಮತ್ತು ಹೊಸ ನಂಬಿಕೆಗಳ ಅವ್ಯವಸ್ಥೆಯಲ್ಲಿದ್ದ ಅಂದಿನ ಲೋಪದೋಷಗಳನ್ನು ನಿರ್ಧಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ವಚನಗಳು ಬಹುಶಃ ಅಂದಿನ ಸಾಮಾಜಿಕ ಅವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರಣ ಬೇರೆಯವರಲ್ಲಿ ನಮಗೆ ಇಷ್ಟರಮಟ್ಟಿಗೆ ಕಂಡು ಬರುವುದಿಲ್ಲ ಅವರ ವಚನಗಳಲ್ಲಿ ನಿಜ ಶರಣನ ಮಾದರಿತನದ ಜೊತೆಗೆ ಸುತಾರಕನ ಕಟು ಟೀಕೆಯೂ ಕೇಳಿ ಬರುತ್ತದೆ. ಅವರ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊರಹೊಮ್ಮುವುದಲ್ಲ ಸದಾರ್ಥ ಸಾಧಕವಾದ ಸತ್ಕೋಪದಿಂದ ಹೊರ ಹೊಮ್ಮುವುದು ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ ವ್ಯಾಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲಿ ಒಬ್ಬ ಸಿಡಿಲು ನುಡಿಯ ಸರ್ವಜ್ಞ ಇನ್ನೊಬ್ಬ ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯ ಅನುಭವಿ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ ತನ್ನ ಕಾಯಕ ಅಥವಾ ವ್ಯಕ್ತಿ ನಾಮವಾದ ಅಂಬಿಗರ ಚೌಡಯ್ಯ ಇತನ ವಚನಗಳ ಅಂಕಿತವಾಗಿದೆ. ಇನ್ನುಳಿದಂತೆ ವಿವಿಧ ವಿಶೇಷತೆಗಳನ್ನು ನೋಡಲಾಗಿ ವಚನಾಂಕಿತ, ನಿಜಶರಣತ್ವ, ಕಾಯಕ ನಿಷ್ಠೆ, ಸಮಾಜೋದ್ದಾರದ ತೀವ್ರ ಕಾಳಜಿ, ವಿನಯ ಶೀಲತೆ, ತತ್ವಜ್ಞಾನದ ಚಿಂತನೆ, ಬಿರುದಾಂಕಿತ ವೀರಗಣಚಾರಿ ನಿಜಶರಣ
ಮುಂದೊಂದು ದಿನ ಇವರ ಗುರು ಶಿವದೇವ ಮುನಿಗಳು ಜೀವಂತ ಸಮಾಧಿಯಾಗುತ್ತಿದ್ದಾಗ ಚೌಡಯ್ಯ ನೀವು ಹೋದ ಮೇಲೆ ನಾನು ಏನೂ ಮಾಡಲಿ ಎಂದು ಕೇಳಿದಾಗ ಗುರುಗಳು ನಾನು ಸ್ನಾನ ಮಾಡಿದ ನೀರುನನ್ನು ತಲೆಯ ಮೇಲೆಯೇ ಬೀಳಲಿ ಅಂತಲ್ಲಿ ನೀನು ಐಕ್ಯನಾಗು ಅಂತ ಶತಾಯುಷಿಯಾಗಿ ಚೌಡಯ್ಯ ಅಂತ ಹೇಳುತ್ತಾರೆ. ಗುರುಗಳ ಆದೇಶದಂತೆಯೇ ಗುರುವಿನ ಕೇಳಗೆ ತುಂಗಭದ್ರಾ ತೀರದಲ್ಲಿ ಐಕ್ಯವಾಗುತ್ತಾರೆ ಇನ್ನು ಈ ಮಹಾಶರಣ ನಿಜಶರಣ ಅಂಬಿಗರ ಚೌಡಯ್ಯ ಗಂಗಾಮತಸ್ಥ ಅಂಬಿಗೇರ ಕೋಲಿ ಸಮಾಜಗಳ ಆರಾಧ್ಯ ಗುರುಗಳಾಗಿದ್ದಾರೆ. ಕಲಬುರಗಿ ವಿ.ವಿ. ಮತ್ತು ಮಂಗಳೂರು ವಿ.ವಿ.ಗಳಲ್ಲಿ ಅಧ್ಯಯನಪೀಠ ತೆರೆದಿರುವುದು ಶ್ಲಾಘನೀಯ. ಪ್ರತಿವರ್ಷವು ಜಯಂತಿಯನ್ನು ಎಲ್ಲೆಡೆ ದೊಡ್ಡಮಟ್ಟದಲ್ಲಿ ಆಚರಿಸಲಾಗುತ್ತದೆ.
ದೊಡ್ಡ ದೊಡ್ಡ ಶೆಟ್ಟಿಗಳ ಕಂಡು ಅಡ್ಡಗಟ್ಟಿ ಹೋಗಿ ಶರಣಾರ್ಥಿ ಎಂಬ ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೆ ಎಂಬರು ಹೋಗಿ ಶರಣಾರ್ಥಿ, ಭಕ್ತನೆಂದೊಡೆ ಕೇಳದ ಹಾಗೆ ಅಡ್ಡಮೊರೆಯನಿಕ್ಕಿಕೊಂಡು ಸುಮ್ಮನೆ ಹೋಗುವ ಹೆಡ್ಡ ಮೊಳರಿಗೆ ದುಡ್ಡೇ ಪ್ರಾಣವಾಯಿತ್ತು ದುಡ್ಡಸ್ತರ ಕುರುಹನರಿಯದೆ ಮೊಳಪಾದದ ಮೇಲೆ ಹೊಡೆಹೊಡೆಕೊಂಡು ನಗುತಿರ್ದಾತ ನಮ್ಮ ಅಂಬಿಗರ ಚೌಡಯ್ಯ
ಈ ವಚನವಂತೂ ಮಠಮಾನ್ಯಗಳ ಕುರಿತು ಅಂದು-ಇಂದು ಎಂದಿದೆಗೂ ಪ್ರಸ್ತುತ ಎನ್ನುವಂತೆ ಕಂಡು ಬರುತ್ತದೆ.
- ಡಾ. ಗಣೇಶ ಸುಲ್ತಾನಪುರ
ಮೊ : 9902066252
- * * * -