ಶಿಗ್ಗಾವ್

ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಂದರ ಬದುಕ ನಿರ್ಮಾಣ: ಸಂದ್ಯಾ

ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಂದರ ಬದುಕ ನಿರ್ಮಾಣ: ಸಂದ್ಯಾ

ಶಿಗ್ಗಾವಿ 02: ನಮ್ಮ ದಿನ ನಿತ್ಯದ ಜೀವನದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಮತ್ತು ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಂದರ ಬದುಕ ನಿರ್ಮಾಣ ಮಾಡಲು ಸಾಧ್ಯ ಎಂದು ಎಸ್‌.ಬಿ.ಬಿ.ಎಂ.ಡಿ ಪೌಢ್ರಶಾಲೆ ವಿದ್ಯಾರ್ಥಿನಿ ಸಂದ್ಯಾ ಕುಲಕರ್ಣಿ ಹೇಳಿದರು. 

ಪಟ್ಟಣದ ಪುರಸಭೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀಜಿ ಜಯಂತಿ ಅಂಗವಾಗಿ ಸ್ವಚ್ಚತೆಗಾಗಿ ಸಂಯುಕ್ತ ಭಾರತ ಕಾರ್ಯಕ್ರಮ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ಮಕ್ಕಳಿಗೆ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ದೇ ಉದ್ದೇಶಿಸಿ ಮಾತನಾಡಿ ಗಾಂದೀಜಿ ಸ್ವತಂತ್ರ್ಯಕ್ಕಾಗಿ, ಸಮಾನತೆಗಾಗಿ, ಮಹಿಳೆಯರಿಗಾಗಿ ಸ್ವಾತಂತ್ರ್ಯ, ಮೇಲು ಕೀಳು, ಬಡತನ ನಿವಾರಣೆಗಾಗಿ ಅನೇಕ ಹೋರಾಟ, ಚಳುವಳಿ, ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು ಅಲ್ಲದೇ ಸ್ವಚ್ಚತೆ ಬಗ್ಗೆ ತಮ್ಮದೇ ಆದ ಸಂಕಲ್ಪ ಹೊಂದಿದ್ದರು ಹಾಗೂ ಶಾಸ್ತ್ರೀಜಿಯವರ ಕರ್ತವ್ಯ ನಿಷ್ಠೆ ಮತ್ತು ಸಮಯ ಪ್ರಜ್ಞೆ ಮತ್ತು ಸರಳ ಬದುಕುವ ರೀತಿ ನಮಗೆ ಮಾದರಿಯಾಗಿದೆ ಎಂದರು. 

ಪುರಸಭೆ ಪೌರಕಾರ್ಮಿಕ ಶಾಂತಪ್ಪ ದೊಡ್ಡಮನಿ ಮಾತನಾಡಿ ಸಾರ್ವಜನಿಕರ ಸೇವೆಗೆ ಸದಾಬದ್ದರಾಗಿದ್ದು ಆದರೆ ಕಸದ ನಿರ್ವಹಣೆ ಹಾಗೂ ವಿಲೇವಾರಿ ಮಾಡುವ ಸಂದರ್ಭದಲ್ಲಿ ಕೆಲವೊಂದು ನ್ಯೂನ್ಯತೆಯಿಂದ ಬರದೇ ಇರುವಾಗ ಕಸವನ್ನು ಎಲ್ಲೇಂದರಲ್ಲಿ ಚಲ್ಲದೇ ನಿಮ್ಮ ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಸಂಗ್ರಹಿಸಿ ಪ್ರಜ್ಞಾವಂತ ನಾಗರೀಕರು ಸಹಕರಿಸಿದಾಗ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಸಹಕಾರಿಯಾದರೆ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಿಸಬಹುದು ಎಂದು ಮಾರ್ಮಿಕವಾಗಿ ಹೇಳಿದರು. 

ಪುರಸಭೆ ಅಧ್ಯಕ್ಷೆ ರೂಪಾ ಬನಿಕೊಪ್ಪ, ಸದಸ್ಯ ಸುಭಾಸ ಚವ್ಹಾಣ, ಮುಖ್ಯಾಧಿಕಾರಿ ಜಗದೀಶ ವೈ.ಕೆ, ಮಾತನಾಡಿದರು, ಈ ಸಂದರ್ಭದಲ್ಲಿ ಉಪಾಧ್ಯಕ್ಷರು, ಸರ್ವಸದಸ್ಯರು ಸೇರಿದಂತೆ ಪೌರಕಾರ್ಮಿಕ ತಾಲೂಕ ಅಧ್ಯಕ್ಷ ವಿ.ಎಸ್‌.ಪಾಟೀಲ, ಶಿಕ್ಷಣ ಇಲಾಖೆಯ ಎಸ್‌.ಹೆಚ್‌.ರಟ್ಟಿಹಳ್ಳಿ, ಪೌರಕಾರ್ಮಿಕರು, ಸಿಬ್ಬಂದಿವರ್ಗದವರು, ಪಟ್ಟಣದ ವಿವಿಧ ಶಾಲೆಯ ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.  ಸಮುದಾಯ ಸಂಘಟನೆ ಅಧಿಕಾರಿ ಶೈಲಜಾ ಪಾಟೀಲ ಸ್ವಾಗತಿಸಿದರು, ಮುಖ್ಯಾಧಿಕಾರಿ ಜಗದೀಶ ವೈ.ಕೆ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ