ಮುಂದಗೋಡ

ಆಂಬುಲೆನ್ಸ್‌ ನಲ್ಲಿಯೇ ಮಗುವಿಗೆ ಜನ್ಮ

ಆಂಬುಲೆನ್ಸ್‌ ನಲ್ಲಿಯೇ ಮಗುವಿಗೆ ಜನ್ಮ

ಮುಂಡಗೋಡ 17: ಮಹಿಳೆಯೊಬ್ಬರು 108 ಆಂಬುಲೆನ್ಸ್‌ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  

ತಾಲೂಕಿನ ನಂದಿಕಟ್ಟಾ ಗ್ರಾ.ಪಂ ವ್ಯಾಪ್ತಿಯ ಯರೇಬೈಲ್ ಗ್ರಾಮದ ಪವಿತ್ರಾ ಮಂಜುನಾಥ ಶೆರೆವಾಡ(23) ಆಂಬುಲೆನ್ಸ್‌ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ದೂರವಾಣಿ ಕರೆ ಸ್ವೀಕರಿಸಿದ 108 ತುರ್ತು ಚಿಕಿತ್ಸಾ ವಾಹನ ಸಿಬ್ಬಂದಿ ಸ್ಥಳಕ್ಕೆ ತರೆಳಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಹೆರಿಗೆಯಾಗಿದೆ.   

ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಬಳೂರ ಹಾಗೂ ಚಾಲಕ ಪ್ರಕಾಶ ಬಾಗೆವಾಡಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು  ಮಗು ಆರೋಗ್ಯವಾಗಿದ್ದು, ಇವರನ್ನು ಮುಂಡಗೋಡ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಸುದ್ದಿ ಓದಿ