ಬಳ್ಳಾರಿ

ಏ. 1ರಂದು ರಕ್ತದಾನ ಶಿಬಿರ

ಏ. 1ರಂದು ರಕ್ತದಾನ ಶಿಬಿರ

ಬಳ್ಳಾರಿ 08: ಶ್ರೀಗುರು ಬಸವೇಶ್ವರ ಎಜ್ಯುಕೇಷನಲ್ ಟ್ರಸ್ಟ್‍ನ ವತಿಯಿಂದ ನಡೆದಾಡುವ ದೇವರು ಶಿವಕುಮಾರ ಮಹಾಸ್ವಾಮಿಗಳ 114ನೇ ಜಯಂತ್ಯೋತ್ಸವದ ಅಂಗವಾಗಿ ಏಪ್ರಿಲ್ 01ರ ಗುರುವಾರ ಬೆಳಗ್ಗೆ 10.30 ಗಂಟೆಗೆ ಕಪ್ಪಗಲ್ ರಸ್ತೆ, 7ನೇ ಕ್ರಾಸ್‍ನಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಪೂಜಾ ಕಾರ್ಯಕ್ರಮ, ಅನ್ನದಾಸೋಹ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಲಿಂ. ಪದ್ಮಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ತೋರಿಸಿಕೊಟ್ಟ ದಾಸೋಹಗಳಲ್ಲಿ ಒಂದಾದ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಳೆದ ವರ್ಷ ಕೊರೋನಾ ಎಂಬ ಮಹಾಮ್ಮಾರಿ ಇದ್ದುದರಿಂದ ಶ್ರೀಗಳ ಕಾರ್ಯಕ್ರಮಕ್ಕೆ ಅಡ್ಡಿಯಾಯಿತು. ಈ ವರ್ಷ ಶ್ರೀಗಳ ಜಯಂತ್ಯೋತ್ಸವವನ್ನು ಯಥಾಪ್ರಕಾರ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಇದರ ಜೊತೆಗೆ ಮಾನವ ಕುಲದ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಇವರ ತತ್ವದಂತೆ ನಾವೂ ಕೂಡ ಅನ್ನದಾಸೋಹದ ಜೊತೆಗೆ ರಕ್ತದಾನ  ಶಿಬಿರವನ್ನು ಆಯೋಜನೆ ಮಾಡಲಾಗಿರುತ್ತದೆ. ಭಕ್ತಾದಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಗುರು ಎಜುಕೇಷನಲ್ ಟ್ರಸ್ಟ್‍ನ ಅಧ್ಯಕ್ಷರಾದ ಶರಣಬಸವ ಅವರು ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9964445933, 9483066551,  ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಜೊತೆಗೆ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಲಿಚ್ಚಿಸುವರು ಸಂಪರ್ಕಿಸಬಹುದಾಗಿದೆ.

ಸುದ್ದಿ ಓದಿ