ಕಾರವಾರ

ಮುಂಡಗೋಡದಲ್ಲಿ ಶೇ. 96 ಮತದಾರರ ಮ್ಯಾಪಿಂಗ್ ಪೂರ್ಣ! ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

ಮುಂಡಗೋಡದಲ್ಲಿ ಶೇ. 96 ಮತದಾರರ ಮ್ಯಾಪಿಂಗ್ ಪೂರ್ಣ! ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

 ಲೋಕದರ್ಶನ ವರದಿ 

 ಮುಂಡಗೋಡ 26 : ಭಾರತದ ಚುನಾವಣಾ ಆಯೋಗದ ಆದೇಶದಂತೆ  7-10-2026 ರವರೆಗೆ ಮತದಾರರ ಪಟ್ಟಿ ವಿಶೇಷ  ಸಮಗ್ರ ಪರಿಷ್ಕರಣೆ ನಡೆಯಲಿದೆ ಎಂದು ಯಲ್ಲಾಪುರ ವಿಧಾನ ಸಭಾ ಮತ ಕ್ಷೇತ್ರದ ಮತದಾರರ ನೋಂದಾವಣಿ ಅಧಿಕಾರಿ ಹಾಗೂ ಶಿರಸಿ ಕೃಷಿ  ಉಪನಿರ್ದೇಶಕರಾದ ಕೆ.ಎಸ್‌.ಪಾಂಡು ಹಾಗೂ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಮುಂಡಗೋಡ ತಾಲೂಕಿನ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಪ್ರಸಾದ ಎಸ್‌.ಎ ರವರು ಗುರುವಾರ ಮುಂಡಗೋಡ ತಹಶೀಲ್ದಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದರು. ತಹಶೀಲ್ದಾರರು ಮಾಹತಿ ನೀಡುತ್ತಾ ಮುಂಡಗೋಡ ತಾಲೂಕಿನಲ್ಲಿ78428 ಮತದಾರರಿದ್ದು 24-6-2026 ರವರೆಗೆ  ಮ್ಯಾಪಿಂಗ್ ಕಾರ್ಯನಡೆದಿದ್ದು ಒಟ್ಟು75321 ಮ್ಯಾಪಿಂಗ್ ಕಾರ್ಯನಡೆದಿದೆ ಅಂದರೆ ಶೇ.96.04 ರಷ್ಟು ಮ್ಯಾಪಿಂಗ್ ಆಗಿದೆ ಕೇವಲ 3107(ಶೇ.4 ರಷ್ಟು) . ಜನರ ಮ್ಯಾಪಿಂಗ್ ಕಾರ್ಯವಾಗಬೇಕಿದೆ. 

 ಪುರುಷ ಮತದಾರರು 39713 ಮಹಿಳಾ ಮತದಾರರು 38715 ಇದ್ದಾರೆ. ಉಳಿದಿರುವ  3107(ಶೇ.4 ರಷ್ಟು) . ಜನರ ಮ್ಯಾಪಿಂಗ್ ಕಾರ್ಯವಾಗಬೇಕಾಗಿದ್ದು    ಅವರಲ್ಲಿ ಸುಮಾರು 2000 ಮತದಾರರು ಮೃತಪಟ್ಟಿರಬಹುದು, ಇಲ್ಲಿಂದ ಬೇರೆಡೆಗೆ ಹೋಗಿರ ಬಹುದು   ಅವರ ಮಾಹಿತಿಯನ್ನು ಸಹ ಶೀಘ್ರವಾಗಿ ಬೂತಮಟ್ಟದ(ಬಿಎಲ್‌ಒ) ಅಧಿಕಾರಿಗಳಿಗೆ ಕೊಡಬೇಕು. ಬೂತ ಏಜಂ(ಬಿಎಲ್‌ಎ) ಬಿಎಲ್‌ಒ ಗಳಿಗೆ ಸಹಕಾರ ನೀಡಿ ಮಾಹಿತಿ ನೀಡಿಬೇಕು.   ಇದರಿಂದ ನಾವು 100 ಕ್ಕೆ 100 ರಷ್ಟು ಮ್ಯಾಪಿಂಗ್ ಮಾಡಲು ಸಾಧ್ಯವಾಗುತ್ತದೆ ಹಾಗೂ ಮತದಾರರ ಮಟ್ಟಿಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು.

ಮುಂಡಗೋಡ ತಾಲೂಕಿನಲ್ಲಿ ಕೇವಲ 2 ಜನರು ಶತಾಯುಷಿ ಮತದಾರರು ಮಾತ್ರ ಇದ್ದಾರೆ. ಮುಂಡಗೋಡ ತಾಲೂಕಿನಲ್ಲಿ 91 ಮತಗಟ್ಟೆಗಳು ಇದ್ದು ಸುಮಾರು  21 ಮತಗಟ್ಟೆಗಳಲ್ಲಿ 90 ರಿಂದ95 ರಷ್ಟುಮ್ಯಾಪಿಂಗ್ ಆಗಿದೆ. ಹಾಗೂ 64 ಮತಗಟ್ಟೆಗಳಲ್ಲಿ 95 ದಿಂದ 100 ರಷ್ಟು ಮ್ಯಾಪಿಂಗ್ ಆಗಿದೆ. ದಿನಾಂಕ 30-6-2026 ರಿಂದ 29-07-2026 ರವರೆಗೆ  ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ)   ಮನೆಗಳಿಗೆ ಭೇಟೀನೀಡಿ ಎರಡು ಎನ್ನುಮರೇಷನ್ ಫಾರ್ಮಗಳನ್ನು  ಮತದಾರರಿಗೆ  ನೀಡಲಿದ್ದು ಎರಡೂ ಎನ್ನುಮರೇಷನ್ ಫಾರ್ಮಗಳನ್ನು   ತುಂಬಿ   ಮತದಾರರು ಇಲ್ಲವೆ ಕುಟುಂಬದ ಸದಸ್ಯರು ಮತ್ತು ಬಿಎಲ್‌ಒ ಅಧಿಕಾರಿ ಕಡ್ಡಾಯವಾಗಿ ಸಹಿ ಮಾಡಿ ಒಂದನ್ನು ಮತದಾರರು ತಮ್ಮಲ್ಲಿ ಇಟ್ಟುಕೊಂಡು ಇನ್ನೊಂದನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನೀಡಬೇಕು.  


ಸುದ್ದಿ ಓದಿ