ಸಂಗಮೇಶ್ವರ ಪ್ರೌಢಶಾಲೆಗೆ ಶೇ. 92 ರಷ್ಟು ಫಲಿತಾಂಶ
ತಾಳಿಕೋಟಿ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಈ ಬಾರಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 92.85 ರಷ್ಟು ಫಲಿತಾಂಶ ಬಂದಿದೆ.
ಸನ್ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ ಸುಮಾರು 22 ವಿದ್ಯಾರ್ಥಿಗಳು ಶೇ. 90ಕ್ಕಿಂತಲೂ ಹೆಚ್ಚಿಗೆ ಅಂಕಗಳನ್ನು ಪಡೆದುಕೊಂಡಿದ್ದಾರೆ. ಉತ್ತಮ ಶ್ರೇಣಿಯಲ್ಲಿ 40 ವಿದ್ಯಾರ್ಥಿಗಳು ಪಾಸಾಗಿದ್ದರೆ, 03 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸಮಾಜ ವಿಜ್ಞಾನದಲ್ಲಿ 100 ಕ್ಕೆ 100 ಫಲಿತಾಂಶ ಬಂದಿದೆ. ವಿದ್ಯಾರ್ಥಿ ಸಂತೋಷ ಪಂಪಣ್ಣ 591 (94.56) ಪ್ರಥಮಸ್ತಾನ ಸೋಮನಾಥ ಹೊಸಮನಿ 569 (91.04) ದ್ವಿತೀಯ ಹಾಗೂ ನಿಂಗಪ್ಪ ಟೋಣೂರ 567 (90.72) ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಎಚ್.ಎಸ್.ಪಾಟೀಲ ಕಾರ್ಯದರ್ಶಿ ಸಚೀನ ಎಚ್. ಪಾಟೀಲ, ಮುಖ್ಯ ಗುರುಗಳಾದ ಅಶೋಕ ಕಟ್ಟಿ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.