ಹಗರಿಬೊಮ್ಮನಹಳ್ಳಿ

ಸ್ನೇಹವೃಂದದಿಂದ 8ನೇ ವರ್ಷದ ಗಣೇಶ ಪ್ರತಿಷ್ಟಾಪನೆ

ಸ್ನೇಹವೃಂದದಿಂದ 8ನೇ ವರ್ಷದ ಗಣೇಶ ಪ್ರತಿಷ್ಟಾಪನೆ

ಹಗರಿಬೊಮ್ಮನಹಳ್ಳಿ 11: ಪಟ್ಟಣದ ಮಿಲಿಟರಿ ಬಯಲಿನ ಸ್ನೇಹವೃಂದದ ವತಿಯಿಂದ 8ನೇ ವರ್ಷದ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು.

ಈ ಸಂಧರ್ಭದಲ್ಲಿ ಶಾಸಕ ಎಸ್.ಭೀಮಾನಾಯ್ಕ್ ಭಾಗವಹಿಸಿ ಮಾತನಾಡಿ ಮಿಲಿಟರಿ ಬಯಲಿನ ಸ್ನೇಹವೃಂದದವರು ಪ್ರತಿ ವರ್ಷ ಸಮಸ್ತ ಏರಿಯಾದ ಜನತೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಸೇರಿದಂತೆ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಮಕ್ಕಳ ಮನೋರಂಜನೆ ಕ್ರೀಡೆ ಇನ್ನಿತರ ಚಟುವಟಿಕೆಗಳಿಗೆ ಆಸ್ಪದ ನೀಡಿದ್ದು ಪಟ್ಟಣದೆಲ್ಲೆಡೆಯವರು ಒಂದು ಭಾಗವಹಿಸುತ್ತಿದ್ದರು ಆದರೆ ಪ್ರಸ್ತುತ ಕೊರೊನಾ ಮೂರನೆ ಅಲೆಯ ಭೀತಿ ಎದುರಾಗಿದ್ದು ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ಗಣೇಶೋತ್ಸವ ಆಚರಿಸಬೇಕಿದೆ ಎಂದರು.

ಸ್ನೇಹವೃಂದ ಬಳಗದ ರಾಮಾಜನೇಯ ಮಾತನಾಡಿ ಪ್ರತಿ ವರ್ಷ ಏರಿಯಾದ ಪ್ರತಿಯೊಬ್ಬರೂ ಭಾತೃತ್ವ ಸಂಬಂಧ ಬೇಳೆಸಿಕೊಂಡು ಈ ಗಣೇಶ ಪ್ರತಿಷ್ಠಾಪನೆ ಆಚರಿಸುತ್ತ ಬಂದಿದ್ದೇವೆ, ಈಬಾರಿ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಆಚರಿಸುವ ಸಲುವಾಗಿ ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡದೆ ಸರಳವಾಗಿ ಆಚರಿಸಲಾಗಿದೆ ,ಪ್ರತಿ ವರ್ಷ ಭಕ್ತಾದಿಗಳಿಗೆ ಊಟದ ವ್ಯೆವಸ್ಥೆ ,ಚಿಣ್ಣರ ಕ್ರೀಡಾ ಸ್ಫರ್ದೆ, ಮಃಇಳೆಯರಿಗೆ ಗುಂಪು ಆಟಗಳು ನಡೆಸುತ್ತಿದ್ದು ವಿಜೇತರಿಗೆ ಬಹುಮಾನಗಳ ವಿತರಣೆಯು ನಡೆಯುತ್ತಿತ್ತು ಇದಕ್ಕೆಲ್ಲ ಈಬಾರಿ ಅವಕಾಶ ನೀಡಲಾಗಿಲ್ಲ ಕರೋನಾ ಮಾಹಾಮಾರಿಯು ಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಿದೆ ಎಂದು ತಿಳಿಸಿದರು.

ಈ ಸಂಧರ್ಭಧಲ್ಲಿ ಸ್ನೇಹ ವೃಂದದ  ಸದಸ್ಯರಾದ ವಾಹದೇವಪ್ಪ, ರಾಜು, ಮಲ್ಲಪ್ಪ, ಹನುಮಂತಪ್ಪ, ಮೌಲಾಹುಸೇನ್, ಮುಖಂಡರಾದ ಅಕ್ಕಿ ತೋಟೇಶ್, ಪವಾಡಿ ಹನುಮಂತಪ್ಪ, ನೆಲ್ಲು ಇಸ್ಮಾಯಿಲ್ ಸಾಬ್, ಹೆಗ್ಡಾಳ್ ರಾಮಣ್ಣ ಸೇರಿದಂತೆ ಕಲೋನಿಯ ಮಹಿಳೆಯರು ಇದ್ದರು.

ಸುದ್ದಿ ಓದಿ