ವಿಜಯಪುರದಲ್ಲಿ ಪತಂಜಲಿ ಯೋಗ ಬಳಗದಿಂದ 80ನೇ ಸ್ವಾತಂತ್ರ್ಯೋತ್ಸವ
ಲೋಕದರ್ಶನ ವರದಿ
ವಿಜಯಪುರ 16 : ಪತಂಜಲಿ ಯೋಗ ಬಳಗದಿಂದ ಧ್ವಜಾರೋಹಣ ವಿಜಯಪುರದಲ್ಲಿ ಓಂ ಜಿ 80ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪತಂಜಲಿ ಸಮಿತಿ ವತಿಯಿಂದ ಪತಂಜಲಿ ಚಿಕಿತ್ಸಾಲಯದ ಮುಂದುಗಡೆ ಧ್ವಜಾರೋಹಣ ಮಾಡಲಾಯಿತು ಪತಂಜಲಿ ಯೋಗ ಸಮಿತಿಯವರು ಮತ್ತು ಮಾಜಿ ಸೈನಿಕರು ಓಂ ಶಾಂತಿಯವರು ಸಂಘ ಸಂಸ್ಥೆಯವರು ದೇಶ ಅಭಿಮಾನಿಗಳು ಮತ್ತು ಇನ್ನಿತರಬರು ಭಾಗಿಯಾಗಿದ್ದರು. ಎಲ್ಲಾ ಜವಾಬ್ದಾರಿಯನ್ನು ಸಾವಿತ್ರಿ ರುದ್ರಯ್ಯ ಮಠ ಮತ್ತು ಅವರ ಕುಟುಂಬದವರು ತೆಗೆದುಕೊಂಡಿದ್ದರು ವಿಶೇಷ ಓಡಾಟದಲಿ ವಿಮಲಾಕ್ಷಿ ಅರವಿಂದ್ ಸಿಂದಗಿ ಯವರು ಮತ್ತು ಎಲ್ಲಾ ಯೋಗ ಬಳಗದವರು ನೆರವೇರಿಸಿದರು.