ಹಗರಿಬೊಮ್ಮನಹಳ್ಳಿ

ಗಂಗಾವತಿ ವೆಂಕೋಬಣ್ಣ ಟ್ರಸ್ಟ್‌ನಿಂದ 8 ಆಕ್ಸಿ, 11ಫ್ಲೋ ಮೀಟರ್

ಗಂಗಾವತಿ ವೆಂಕೋಬಣ್ಣ ಟ್ರಸ್ಟ್‌ನಿಂದ 8 ಆಕ್ಸಿ, 11ಫ್ಲೋ ಮೀಟರ್
ಹಗರಿಬೊಮ್ಮನಹಳ್ಳಿಯ ತಹಸೀಲ್ದಾರ್ ಕಛೇರಿ ಬಳಿ ಗಂಗಾವತಿ ವೆಂಕೋಬಣ್ಣ ಟ್ರಸ್ಟ್‌ ವತಿಯಿಂದ ಕೋವಿಡ್ ಪರಿಕರಗಳಾದ ಆಕ್ಸಿ ಹಾಗೂ

ಹಗರಿಬೊಮ್ಮನಹಳ್ಳಿ 28 : ಗಂಗಾವತಿ ವೆಂಕೋಬಣ್ಣ ಟ್ರಸ್ಟ್‌ ವತಿಯಿಂದ 8 ಆಕ್ಸಿ ಮೀಟರ್ ಮತ್ತು 11 ಫ್ಲೋ ಮೀಟರ್‌ಗಳನ್ನು ಕೋವಿಡ್ ಸೋಂಕಿತರಿಗೆ ಅನುಕೂಲವಾಗಲೆಂದು ನೀಡುತ್ತಿದ್ದೇವೆ ಎಂದು ಗಂಗಾವತಿ ವಿಜಯಕುಮಾರ್ ಹೇಳಿದರು.  

ಪಟ್ಟಣದ ತಹಸೀಲ್ದಾರ್ ಕಛೇರಿಬಳಿ ಆಕ್ಸಿ ಮೀಟರ್ ಹಾಗೂ ಫ್ಲೋ ಮೀಟರ್‌ಳನ್ನು ತಹಸೀಲ್ದಾರರಿಗೆ ನೀಡಿ ಅವರು ಮಾತನಾಡಿ ಕೋವಿಡ್ 2ನೇ ಅಲೆಯ ಅಬ್ಬರಕ್ಕೆ ಇಡೀ ದೇಶವೇ ತತ್ತರಗೊಂಡಿದೆ. ಈ ಭಾರಿ ಗ್ರಾಮೀಣ ಭಾಗಕ್ಕೂ ಕೋವಿಡ್ ವ್ಯಾಪಿಸಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್‌ಗಳ ಕೊರತೆ ಉಂಟಾಗುತ್ತಿದೆ. ಸರ್ಕಾರ ಸರಬರಾಜು ಮಾಡುತ್ತಿರುವ ಕೋವಿಡ್ ಪರಿಕರಗಳು ಆಸ್ಪತ್ರೆಗಳಿಗೆ ಸಾಲುತ್ತಿಲ್ಲ. ಇದನ್ನು ಮನಗಂಡು ನಾವು ಈ ದಿನ 8 ಆಕ್ಸಿ ಮೀಟರ್ ಮತ್ತು 11 ಫ್ಲೋ ಮೀಟರ್‌ಗಳನ್ನು ನಮ್ಮ ಟ್ರಸ್ಟ್‌ ವತಿಯಿಂದ ನೀಡುತ್ತಿದ್ದೇವೆ ಎಂದರು.  

ತಹಸೀಲ್ದಾರ್ ಶರಣಮ್ಮ ಮಾತನಾಡಿ ರಾಜ್ಯಾಧ್ಯಂತ ಕೋವಿಡ್ 2ನೇ ಅಲೆಗೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯಾಗಿದ್ದು, ಸರ್ಕಾರ ಕೊರತೆಯಾಗದಂತೆ  ನಿಭಾಯಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಕೆಲವು ಕೊರತೆಗಳು ಉಂಟಾಗಿದ್ದು ನಿಜ. 2ನೇ ಅಲೆಯ ಸೋಂಕಿತರಿಂದಾಗಿ ಆರೋಗ್ಯ ವ್ಯವಸ್ಥೆ ಆರಂಭದಲ್ಲಿ ಕೊರತೆಯಿದ್ದರೂ ಕ್ರಮೇಣ ಎಲ್ಲವೂ ಸಮರ​‍್ಕ ರೀತಿಯಲ್ಲಿ ಲಭ್ಯವಾಗಿವೆ, ಆರೋಗ್ಯ ಇಲಾಖೆಗೆ ನೀಡುತ್ತಿರುವ ಹತ್ತು ಹಲವು ಪರಿಕರಗಳು ಸೋಂಕಿತರಿಗೆ ನೆರವಾಗಿವೆ, ಗಂಗಾವತಿ ವಿಜಯಕುಮಾರ್ ಮತ್ತು ಅವರ ಕುಟುಂಬ ತಾಲೂಕು ಆಡಳಿತದೊಂದಿಗೆ ಕೈ ಜೋಡಿಸಿರುವುದು ಸ್ವಾಗತಾರ್ಹ ಎಂದರು.  

ಇಂಜಿನಿಯರ್ ಗಂಗಾವತಿ ವಿಜೇತ, ವಸಂತ ಮಾಲವಿ, ಧರ್ಮಕರ್ತ ನಾಣ್ಯಾಪುರ ಕೃಷ್ಣಮೂರ್ತಿ, ಪತ್ರಕರ್ತ ಹುಳ್ಳಿ ಪ್ರಕಾಶ್, ಟಿ.ಎಂ.ಸದ್ಯೋಜಾತಯ್ಯ, ಬಾರಿಕರ ಗಂಗಾಧರ, ಡಿ.ಗೋಪಾಲ ಸೇರಿದಂತೆ ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.  

ಸುದ್ದಿ ಓದಿ