ಮುಂದಗೋಡ

ಮುಂಡಗೋಡದಲ್ಲಿ ವಿಜೃಂಭಣೆಯಿಂದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮುಂಡಗೋಡದಲ್ಲಿ ವಿಜೃಂಭಣೆಯಿಂದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮುಂಡಗೋಡ 17: 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಬುಧವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಬುಧವಾರ ನಡೆದ ತಾಲೂಕಾ 7ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ ಪ್ರತಿಯೊಬ್ಬರೂ ಕನ್ನಡ ನೆಲ, ಜಲ, ಭಾಷೆಯನ್ನು ಹೆತ್ತ ತಾಯಿಯಂತೆ ಪ್ರೀತಿಸಿ ಗೌರವಿಸಿ ಆರಾಧಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಎಸ್‌. ಫಕ್ಕೀರ​‍್ಪ ಮಾತನಾಡುತ್ತ 12ನೇ ಶತಮಾನದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯದ ಮೂಲಕ ಕನ್ನಡ ಬಹಳಷ್ಟು ಬದಲಾವಣೆಯನ್ನು ಕಂಡಿದ್ದು, ಬೆಳೆಯುತ್ತ ಜನರು ಆಡುವ ಭಾಷೆಯಾಗಿ ಹೊರಹೊಮ್ಮಿದೆ. ಜಗತ್ತಿನ ಹಲವಾರು ಪ್ರಾಚೀನ ಭಾಷೆಗಳಲ್ಲಿ ಕನ್ನಡ ಕೂಡ ಒಂದು ಶ್ರೇಷ್ಠ ಭಾಷೆಯಾಗಿದ್ದು, ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಎಸ್‌. ಫಕ್ಕೀರ​‍್ಪ ಮಾತನಾಡಿದರು. 

ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ಮಾತನಾಡುತ್ತ ಮುಂಡಗೋಡದಲ್ಲಿ ಬಹು ಸಂಸ್ಕೃತಿಯ ಜನರಿದ್ದಾರೆ. ಇಲ್ಲಿ ಐತಿಹಾಸಿಕ ನಿರ್ದೇಶಕ ಪುರಾವೆಗಳಿವೆ, ಜಾನಪದ ಸಂಸ್ಕೃತಿಗಳಿವೆ ಬತ್ತದ ಕಣಜ ವೆಂದು ಕರೆಯುವ ಹೆಮ್ಮೆ ಇದೆ ಸಾಹಿತ್ಯ ಅಭಿಮಾನಿಗಳಿದ್ದಾರೆ. ಇದು ಹೆಮ್ಮೆಯ ವಿಷಯ. ಎಂದು  ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ಹೇಳಿದರು.    

ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ಪರಿಷತ್ತಿನ ಧ್ವಜಾರೋಹಣ, ಕನ್ನಡ ಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ ನೆರವೇರಿಸಿದರು. ಮಾಜಿ ಶಾಸಕ ವಿ.ಎಸ್‌.ಪಾಟೀಲ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಉದ್ಘಾಟಿಸಿದರು.   ನಯನಾ ಕಾಮತ್ ಸಂಗಡಿಗರು ನಾಡಗೀತೆ ಹಾಡಿದರು. ವಿಶ್ವನಾಥ ಹಿರೇಮಠ ಪ್ರಾರ್ಥಿಸಿದರು.  ಬಾಲಚಂದ್ರ ಹೆಗಡೆ, ದಿನೇಶ ವೆರ್ಣೇಕರ, ಶಹನಾಜ ದೊಡ್ಡನಿ ಕಾರ್ಯಕ್ರಮ ನಿರೂಪಿಸಿದರು.   

ತಾಲೂಕ ಸಾಹಿತ್ಯ ಪರಿಷತ್‌ನ ಎಸ್‌.ಡಿ. ಮುಡೆಣ್ಣವರ, ನಾಗರಾಜ ಅರ್ಕಸಾಲಿ, ಎಸ್‌.ಕೆ ಬೋರ್ಕರ್, ಆನಂದ ಹೊಸುರ, ದಯಾನಂದ ನಾಯ್ಕ, ಸುಭಾಸ ವಡ್ಡರ, ಆರ್‌. ಜೆ. ಬೆಳ್ಳಾನವರ, ಎಸ್‌.ಬಿ. ಹೂಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ