ಸಂಕೇಶ್ವರ

ಶಂಕರರಾವ್ ಹೆಗಡೆ ಅವರ 75ನೇ ಜನ್ಮ ದಿನಾಚರಣೆ

ಶಂಕರರಾವ್ ಹೆಗಡೆ ಅವರ 75ನೇ ಜನ್ಮ ದಿನಾಚರಣೆ

ಸಂಕೇಶ್ವರ, 30: ಪಟ್ಟಣದ ಹಿರಿಯ ಸಹಕಾರಿ, ಬೀರೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ, ಕರ್ನಾಟಕ ಕುರುಬರ ಸಂಘದ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಶಂಕರರಾವ್ ಹೆಗಡೆ ಅವರು ಈ ವರ್ಷದ ಎಸ್‌.ಎಸ್‌.ಎಲ್‌.ಸಿ ಟಾಪರ್ ಅಂಕಿತಾ ಕೊಣ್ಣೂರ್ ಅವರಿಗೆ ರೂ.10 ಸಾವಿರ ಆರ್ಥಿಕ ಸಹಾಯ ಮಾಡಿ, ಸತ್ಕರಿಸುವ ಮೂಲಕ ತಮ್ಮ 75ನೇ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ  ಆಚರಿಸಿಕೊಂಡರು. 

ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಶಂಕರಾಚಾರ್ಯ ಮಠದ ಸಚ್ಚಿದಾನಂದ ಅಭಿನವ ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ ಸಾಕ್ಷಿಕರಿಸಿದರು. ಸಮಾರಂಭ ಕುರಿತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ ಮಾತನಾಡಿದರು. ಹಿರಿಯ ಸಹಕಾರಿ ನಾಗಪ್ಪಣ್ಣ ಕರಜಗಿ, ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ್, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪ್ರಥ್ವಿಕತ್ತಿ, ಪುರಸಭೆ ಸದಸ್ಯರಾದ ಡಾ.ಜಯಪ್ರಕಾಶಕ ರಜಗಿ, ಅಜೀತ್ ಕರಜಗಿ, ಶಿವಾನಂದ ಮುಡಸಿ, ಸುನೀಲ್ ಪರ್ವತರಾವ್, ಅಮರ ನಲವಡೆ, ಶ್ರೀಕಾಂತ ಹತನೂರಿ, ಶಾಂತಾ ಹೆಗಡೆ, ಸಚಿನ್ ಹೆಗಡೆ, ರಾಣಿ ಹೆಗಡೆ, ಸೋನಾಲಿ ಹೆಗಡೆ, ಕಸಾಪ ಮಾಜಿ ಅಧ್ಯಕ್ಷ ಎಲ್‌.ವಿ.ಪಾಟೀಲ್, ಹಿರಿಯ ವಕೀಲರಾದ ಜಿ.ಎಸ್‌.ಇಂಡಿ, ಆರ್‌.ಕೆ.ಪಾಟೀಲ್, ಭೀಮಸೇನ್ ಬಾಗಿ, ನೋಟರಿ ಹೆಗಡೆ ಸೇರಿದಂತೆ ನೂರಾರು ಗಣ್ಯರು ಇದ್ದರು. ತನ್ನಮಿತ್ತ ಸಂಗೀತ ಸೇವೆ ಜರುಗಿತು. 


ಸುದ್ದಿ ಓದಿ