ಶಿಗ್ಗಾವ್

ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ

ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ

ಲೋಕದರ್ಶನ ವರದಿ 

ಶಿಗ್ಗಾವಿ : ಭಾರತ ಸ್ವಾತಂತ್ರ್ಯ ಪಡೆದ ಮೇಲೆ ನಡೆದು ಬಂದ ದಾರಿ ಅವಲೋಕಿಸಿದರೆ ಹೆಮ್ಮೆಯು, ಸಾರ್ಥಕ ಭಾವ ಮೂಡುತ್ತದೆ. ದೇಶ ಹೊಸ ಸಾಕಾರದತ್ತ ಸಾಗಿರುವುದು ಗೋಚರಿಸುತ್ತದೆ ಎಂದು ವನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಲ್ಲಪ್ಪ ಶಿಂಧೆ ಹೇಳಿದರು. 

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿರುವ ಉತ್ಸವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬುಧವಾರ ಮಾತನಾಡಿ ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿರುವ ಆಡಳಿತ ಹಸ್ತಾಂತರಕ್ಕಾಗಿನ ಸಂಘರ್ಷ ನೋಡಿದರೆ ಭಾರತ ಸುಭಿಕ್ಷವಾಗಿದ್ದು ನೆರೆಯ ರಾಷ್ಟ್ರಗಳಿಗೆ ಮಾದರಿ ಆಗಿದೆ ಎಂದು ಯಲ್ಲಪ್ಪ ಶಿಂಧೆ ನುಡಿದರು. 

ಈ ವರ್ಷ ಕೊರೊನಾದ ಮೂರನೇ ಅಲೆಯಿಂದಾಗಿ ಗಣರಾಜ್ಯೋತ್ಸವದ ಸಂಭ್ರಮ ಸ್ವಲ್ಪ ಕಡಿಮೆಯಾಗಿದ್ದರೂ ಜನರ ಭಾನನಾತ್ಮಕ ಏಕತೆಯಲ್ಲಿ ಯಾವುದೇ ಬದಲಾವಣೆ, ಕೊರತೆ ಇಲ್ಲ ಎಂದು ವನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹನುಂತಪ್ಪ ಗುಳೇದ ಹೇಳಿದರು. 

ರಾಕ್ ಗಾರ್ಡನ್ ನಿರ್ದೇಶಕ ಬಸವರಾಜ ಮಡಿವಾಳರ ಅಧ್ಯಕ್ಷತೆ ವಹಿಸಿದ್ದರು.ಗಣರಾಜ್ಯೋತ್ಸವದ ಮಹತ್ವದ ಕುರಿತು ಮುಖ್ಯ ಶಿಕ್ಷಕ ಎಸ್‌.ಬಿ.ಪಾಟೀಲ ಮಾತನಾಡಿದರು. 

ಸುಭಾಸ ಸಕ್ರಣ್ಣವರ, ನಾಗಾರಾಜ ಪಾಟೀಲ್,ಶಿಕ್ಷಕರಾದ ಮಹೇಶ ವಡ್ಡರ,ನಜೀರ್ ಅಹ್ಮದ್ ಮಕಾಂದರ,ಉಮಾ ಪಾಟೀಲ,ಅಮೃತಾ ಬದ್ದಿ,ಅರ್ಚನಾ, ಅಶ್ವಿನಿ ಪೊಲೀಸ್‌ಗೌಡ್ರ,ನಾಗರಾಜ ಪಾಟೀಲ್, ಮತ್ತಿತರರು ಭಾಗವಹಿಸಿದ್ದರು.ವಿದ್ಯಾರ್ಥಿಗಳಿಂದ ಭಾಷಣ, ಛದ್ಮವೇಷ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಶಿಕ್ಷಕಿ ವಿದ್ಯಾರಾಣಿ ಗಾಣಿಗೇರ ಸ್ವಾಗತಿಸಿದರು.ವಿದ್ಯಾರ್ಥಿನಿ ಆಕಾಂಕ್ಷ ಗುಂಜಾಳ ವಂದಿಸಿದರು. 


ಸುದ್ದಿ ಓದಿ