ಬೈಲಹೊಂಗಲ

67ನೇ ಕನ್ನಡ ರಾಜ್ಯೋತ್ಸವ: ತಾಯಿ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆ

67ನೇ ಕನ್ನಡ ರಾಜ್ಯೋತ್ಸವ: ತಾಯಿ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆ

ಬೈಲಹೊಂಗಲ: ಪಟ್ಟಣದಲ್ಲಿ ಕರ್ನಾಟಕ ನವ ನಿಮರ್ಾಣ ಪಡೆ, ಜಯ ಕರ್ನಾಟಕ ಸಂಘಟನೆ, ಕನರ್ಾಟಕ ರಕ್ಷಣಾ ವೇದಿಕೆ, ಕರುನಾಡು ಸೇವಕರು ಸಂಘಟನೆ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಕನ್ನಡಾಭಿಮಾನಿಗಳು ಕೈಯಲ್ಲಿ ಕನ್ನಡ ಬಾವುಟದ ಧ್ವಜ, ಕೊರಳಿಗೆ ಕರ್ನಾಟಕ ವೇಲು, ತಲೆಗೆ ಪೇಠ ತೊಟ್ಟುಕೊಂಡು ಕಂಗೊಳಿಸಿದರು. ಕನ್ನಡ ತಾಯಿ ಭುವನೇಶ್ವರಿ, ಕರ್ನಾಟಕದ ಕನ್ನಡ ನೆಲ, ಜಲ, ಭಾಷೆಗೆ, ಕನ್ನಡಪರ ಸಂಘಟನೆಗಳಿಗೆ ಜೈ ಘೋಷ ಹಾಕಿದರು. 

ಕರ್ನಾಟಕ ನವ ನಿಮರ್ಾಣ ಪಡೆಯಲ್ಲಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನ್ನಿಧ್ಯವಹಿಸಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಸಕ ಮಹಾಂತೇಶ ಕೌಜಲಗಿ, ನಟ ಶಿವರಂಜನ ಬೋಳಣ್ಣವರ, ಉದ್ಯೆಮಿ ವಿಜಯ ಮೆಟಗುಡ್ಡ, ಸಂಘಟಕ ಮಹಾಂತೇಶ ತುರಮರಿ, ಅನೇಕರು ಮೆರವಣಿಗೆಗೆ ಚಾಲನೆ ನೀಡಿದರು.

ಕರ್ನಾಟಕ ನವ ನಿಮರ್ಾಣ ಪಡೆ ಜಿಲ್ಲಾಧ್ಯಕ್ಷ ಮಹಾಂತೇಶ ತುರಮರಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು, ಮುಖಂಡರು ಅದ್ಧೂರಿ ಮೆರವಣಿಗೆ ತೆರಳಿದರು. ರಾಯಣ್ಣ ವೃತ್ತದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಇಂಚಲ ಕ್ರಾಸ್ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಸ್ತೆಯುದ್ದಕ್ಕೂ ಕನ್ನಡಮಯ ವಾತಾವರಣ  ನಿಮರ್ಾಣವಾಗಿತ್ತು. ಡಿಜೆ ಸಂಗೀತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಕನ್ನಡ ಚಿತ್ರಗೀತೆಗಳ ನೀನಾದ ಹೊರ ಹೊಮ್ಮಿತ್ತು. ನಟ ಡಾ.ಪುನೀತ ರಾಜಕುಮಾರ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದ ಅಭಿಮಾನಿಗಳ ಹಷೋಲ್ಲಾಸ ಮುಗಿಲು ಮುಟ್ಟಿತ್ತು. ಎಲ್ಲ ರಸ್ತೆಗಳು ಕನ್ನಡಮಯ ವಾತಾವರಣದಲ್ಲಿ ಕಂಗೊಳಿಸಿದರು. ಎಲ್ಲೆ ನೋಡಿದರಲ್ಲಿ ಕನ್ನಡಪರ ಸಂಘಟನೆಗಳ ಕಟೌಟ್, ಬ್ಯಾನರ್ ರಾರಾಜಿಸಿದವು.

ಕರವೇಯಿಂದ ಅದ್ಧೂರಿಯಿಂದ ಮೆರವಣಿಗೆ: ಕನರ್ಾಟಕ ರಕ್ಷಣಾ ವೇದಿಕೆಯಿಂದ ಚನ್ನಮ್ಮನ ಸಮಾದಿ ರಸ್ತೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಉದ್ಯೆಮಿ ವಿಜಯ ಮೆಟಗುಡ್ಡ, ಪುರಸಭೆ ಸದಸ್ಯ ವಿಜಯ ಮೆಟಗುಡ್ಡ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ, ಕರವೇ ಸಂಚಾಲಕ ಶಿವಾನಂದ ಕೋಲಕಾರ, ತಾಲ್ಲೂಕು ಘಟಕ ಅಧ್ಯಕ್ಷ ರಾಜು ಬೋಳಣ್ಣವರ ನೇತೃತ್ವದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಚನ್ನಮ್ಮನ ಸಮಾಧಿ ಸ್ಥಳದಿಂದ ಆರಂಭವಾದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಡಿಜೆ ಸಂಗೀತಕ್ಕೆ ನೂರಾರು ಯುವಕರು ಸ್ವಯಂ ಪ್ರೇರಣೆಯಿಂದ ಬಂದು ಕುಣಿದು ಕುಪ್ಪಳಿಸಿದರು. ಕರವೇ ಸಂಗೀತದ ನೀನಾದಕ್ಕೆ ಜನರು ಮನಸೋತರು. ಚನ್ನಮ್ಮನ ವೃತ್ತದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಸಿ.ಕೆ.ಮೆಕ್ಕೇದ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಅಮಿತ ಪಾಟೀಲ, ವಿಠ್ಠಲ ಹಂಪಿಹೊಳಿ, ಶ್ರೀಶೈಲ ಹಂಪಿಹೊಳಿ ನೇತೃತ್ವದಲ್ಲಿ ಕನ್ನಡತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.


 

ಸುದ್ದಿ ಓದಿ