ಬಳ್ಳಾರಿ

ಸಪ್ತಗಿರಿ ಸಂಘಕ್ಕೆ 6.81ಲಕ್ಷ ಲಾಭ: ಭರಮಕ್ಕನವರ್

ಸಪ್ತಗಿರಿ ಸಂಘಕ್ಕೆ 6.81ಲಕ್ಷ ಲಾಭ: ಭರಮಕ್ಕನವರ್

ಕಂಪ್ಲಿ 17: ಪಟ್ಟಣದ ಸಪ್ತಗಿರಿ ಪತ್ತಿನ ಸಹಕಾರಿ ಸಂಘದ ಮಹಾಜನ ಸಭೆ ಇಲ್ಲಿನ ಗದ್ದೆ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಜರುಗಿತು. 

ಸಂಘದ ಅಧ್ಯಕ್ಷ ಡಾ. ವೆಂಕಟೇಶ್ ಸಿ. ಭರಮಕ್ಕನವರ್ ಅಧ್ಯಕ್ಷತೆವಹಿಸಿ ಮಾತನಾಡಿ, 2020-21ನೇ ಸಾಲಿನಲ್ಲಿ 6.81ಲಕ್ಷ ರೂಪಾಯಿಗಳ ನಿವ್ವಳ ಲಾಭಗಳಿಸಿದೆ. 1452ಸದಸ್ಯರನ್ನೊಂದಿದ್ದು, 29.26 ಲಕ್ಷ ರೂ.ಗಳ ಷೇರು ಬಂಡವಾಳ, 1.36ಕೋಟಿ ರೂ.ಗಳ ಠೇವಣಿಗಳನ್ನು ಹೊಂದಿದೆ. 1.08ಕೋಟಿ ರೂ.ಗಳ ಸಾಲಗಳನ್ನು ನೀಡಿದೆ. ಸದಸ್ಯರಿಗೆ ಶೇ.8ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಿದೆ ಎಂದರು.  


ಮಹಾ ಜನ ಸಭೆಯಲ್ಲಿ ನಾನಾ ವಿಷಯಗಳ ಚರ್ಚೆಗೊಂಡವು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್‌.ಎಂ.ನಾಗರಾಜ ಲೆಕ್ಕಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷ ಯು.ದೊಡ್ಡಬಸಪ್ಪ, ವಿ.ಗೋವಿಂದಪ್ಪ, ಎನ್‌.ಬಿ.ಮಂಜುನಾಥ, ಎನ್‌.ರಾಮಾಂಜನೇಯಲು, ಜಿ.ಪಕ್ಕೀರ​‍್ಪ, ಸಿ.ರಾಮಾಂಜನೇಯ, ಬಿ.ನಾರಾಯಣಪ್ಪ, ಜೆ.ವೆಂಕಟೇಶಶ್ರೇಷ್ಠಿ, ಯು.ಶಿವರುದ್ರ​‍್ಪ, ಓ.ಪಿ.ದಾದಾಖಲಂದರ್, ಎನ್‌.ವೀರೇಶ್, ಆನಂದ್ ಎಚ್‌.ಹುಲ್ಲೂರು, ಸಿಬ್ಬಂದಿಗಳಾದ ಜೆ.ಮಂಜುಳಾ, ಸಲೀಮ್, ಸಂಗಮೇಶ್ ಕೋಟಿ, ಕೆ.ರಾಘವೇಂದ್ರ, ಜೆ.ಕೆ.ಬಸವರಾಜ್ ಮತ್ತು ಸದಸ್ಯರಿದ್ದರು. 


ಸುದ್ದಿ ಓದಿ