ಶಿರಹಟ್ಟಿ

ನಾಳೆಯಿಂದ ರೈತರ ಪಂಪ್ ಶೆಟ್ಟುಗಳಿಗೆ ದಿನಕ್ಕೆ 5 ತಾಸುಗಳ ತ್ರೀ ಫೇಸ್ ವಿದ್ಯುತ್ ಪೂರೈಕೆ: ಹೆಸ್ಕಾಂ ಅಧಿಕಾರಿ ವೀರೇಶ ಬಡಿಗೇರ

ನಾಳೆಯಿಂದ ರೈತರ ಪಂಪ್ ಶೆಟ್ಟುಗಳಿಗೆ ದಿನಕ್ಕೆ 5 ತಾಸುಗಳ ತ್ರೀ ಫೇಸ್ ವಿದ್ಯುತ್ ಪೂರೈಕೆ: ಹೆಸ್ಕಾಂ ಅಧಿಕಾರಿ ವೀರೇಶ ಬಡಿಗೇರ

ಶಿರಹಟ್ಟಿ 15:  ಮಳೆಯ ಅಭಾವದಿಂದ ವಿದ್ಯುತ್ ಉತ್ಪಾಧನೆಯಲ್ಲಿ ತೀವ್ರವಾದ ತೊಂದರೆ ಆಗುತ್ತಿದ್ದು, ರೈತರಿಗೆ ಸಮರ್ಪಕ ತ್ರೀ ಫೇಸ್ ವಿದ್ಯುತ್ ನೀಡಲು ಆಗುತ್ತಿಲ್ಲ, ಆದಕಾರಣ ನಾಳೆಯಿಂದ ದಿನಕ್ಕೆ ಐದು ಗಂಟೆಗಳಂತೆ ಶಿರಹಟ್ಟಿ ತಾಲೂಕಿನ ವಲಯವಾರು ಪ್ರದೇಶಗಳಿಗೆ ತ್ರೀ ಫೇಸ್ ವಿದ್ಯುತ್ ಒದಗಿಸಲು ಮೇಲಾಧಿಕಾರಿಗಳಿಂದ ಆದೇಶ ಬಂದಿದ್ದು,  

ನಾಳೆಯಿಂದಲೇ ದಿನಕ್ಕೆ ಐದು ಗಂಟೆಗಳ ಕಾಲ ಥ್ರೀ ಫೇಸ್ ವಿದ್ಯುತ್ ಪೂರೈಸಲಾಗುವುದು ಹಾಗೂ ಪ್ರತಿ ವಾರಕ್ಕೊಮ್ಮೆ ಸಮಯವನ್ನು ಬದಲಾವಣೆ ಮಾಡಲಾಗುವುದು ಎಂದು ಶಿರಹಟ್ಟಿ ಹೆಸ್ಕಾಂ ಶಾಖಾಧಿಕಾರಿ ವೀರೇಶ ಬಡಿಗೇರ ತಿಳಿಸಿದ್ದಾರೆ.  

ತಾಲೂಕಿನ ಮಾಗಡಿ ಫೀಡರ್ ಹಾಗೂ ಕಡಕೋಳ ಫೀಡರ್ಗೆ ಬೆಳಗ್ಗೆ 8:30 ಇಂದ ಮಧ್ಯಾಹ್ನ 1:30ವರೆಗೆ, ಚಬ್ಬಿ ಹಾಗೂ ವರವಿ ಫೀಡರ್ಗಳಿಗೆ ಮಧ್ಯಾಹ್ನ 1:30 ರಿಂದ ಸಾಯಂಕಾಲ 6:30ವರೆಗೆ, ಹಾಗೂ ವೆಂಕಟಾಪುರ ಫೀಡರ್‌ಗೆ ರಾತ್ರಿ 11 ಯಿಂದ ಬೆಳಗ್ಗೆ 4ರವರೆಗೆ ತ್ರೀ ಫೇಸ್ ವಿದ್ಯುತ್ತನ್ನು ಪೂರೈಸಲಾಗುವುದು ಎಂದು ಹೆಸ್ಕಾಂ ಶಾಖಾಧಿಕಾರಿ ವೀರೇಶ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ