ಶಿಗ್ಗಾವ್

ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡಕ್ಕೆ 4 ಲಕ್ಷ ದೇಣಿಗೆ; ಅಭಿನಂದನೆ

ವಿದ್ಯಾರ್ಥಿಗಳ ವಸತಿ ನಿಲಯ  ಕಟ್ಟಡಕ್ಕೆ 4 ಲಕ್ಷ ದೇಣಿಗೆ; ಅಭಿನಂದನೆ

ಶಿಗ್ಗಾವಿ 17: ನಾಮದೇವ ಸಿಂಪಿ ಸಮಾಜದ ಬೆಂಗಳೂರಿನಲ್ಲಿ ವಿಲ್ಸನ್ ಗಾರ್ಡನಲ್ಲಿರುವ ವಿದ್ಯಾರ್ಥಿಗಳ ವಸತಿ ನಿಲಯ  ಕಟ್ಟಡಕ್ಕೆ 4 ಲಕ್ಷ ದೇಣಿಗೆ ನೀಡಿದ ಶಿಗ್ಗಾವಿ ಸಿಂಪಿ ಸಮಾಜಕ್ಕೆ ರಾಜ್ಯಾಧ್ಯಕ್ಷ ನಾರಾಯಣ ಕೋಪರ್ಡೆ ಅಭಿನಂದನೆ ಸಲ್ಲಿಸಿದರು. 

ಪಟ್ಟಣದ ವಿಠಲ ಹರಿಮಂದಿರದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಎಲ್ಲ ಸಮಾಜದ ಮಕ್ಕಳಂತೆ ನಮ್ಮ ಸಮಾಜದ ಮಕ್ಕಳನ್ನು ಸಹಿತ ಉನ್ನತ ಶ್ರೇಣಿಯ ಅಧಿಕಾರಿಗಳನ್ನಾಗಿ ಮಾಡಬೇಕು ಆ ನಿಟ್ಟಿನಲ್ಲಿ ಮಕ್ಕಳಿಗಾಗಿ ವಸತಿ ನಿಲಯ ಮಾಡುತ್ತಿದ್ದೇವೆ ಇದಕ್ಕೆ ಎಲ್ಲರ ತನು ಮನ ಧನದ ಅವಶ್ಯಕತೆ ಇದೆ ಎಂದರು. 

ರಾಜ್ಯಾಧ್ಯಕ್ಷ ನಾರಾಯಣ ಕೋಪರ್ಡೆ ಹಾಗೂ ರಾಜ್ಯ ಸಮಿತಿ ಸದಸ್ಯರಿಗೆ ಹಾಗೂ  ಪಟ್ಟಣದ ಪುರಸಭೆಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅನುರಾಧಾ ಸುದೀರ ಮಾಳವಾದೆ, ಬಿ.ಎ ಪದವಿ ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 5 ನೇ ರಾ​‍್ಯಂಕ ಪಡೆದ ಕು. ಇಂದು ನಾಗರಾಜ ಮಾಳವಾದೆ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಸುರೇಶ ಮೂಳೆಯವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಸಮಾಜದ ರಾಜ್ಯ ಮಹಿಳಾ ಅಧ್ಯಕ್ಷೆ ಡಾ. ನಯನಾ ಭಸ್ಮೇ, ಉಪಾಧ್ಯಕ್ಷ ಜಗನ್ನಾಥ ಗಂಜೀಗಟ್ಟಿ, ಗಣ್ಯ ವರ್ತಕ ಕೇದಾರ​‍್ಪ ಬಗಾಡೆ, ರೂಪಾ ಬಗಾಡೆ, ಅನುರಾಧಾ ಗಂಜೀಗಟ್ಟಿ, ರೂಪಾಲಿ ಮಾಳವಾದೆ, ದಾಮೋಧರ ಮಾಳವಾದೆ, ವಿನೋಭಾ ಮಾಳವಾದೆ, ಮುರಳೀಧರ ಮಾಳವಾದೆ, ಕೇಶವ ಮುಂಡಾಳೆ, ತುಕಾರಾಮ ಅಂಚಲಕರ ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ ಓಂಧಕರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ