ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಂಸ್ಥೆಗೆ 4 ಕೋಟಿ ಲಾಭ
ಮಾಂಜರಿ 15: ಬೆಳಗಾವಿ ಜಿಲ್ಲೆಯ ಸಹಕಾರಿ ರಂಗದಲ್ಲಿ 30 ಶಾಖೆಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಂಸ್ಥೆಗೆ ಈ ಸಾಲಿನ ಆರ್ಥಿಕ ವರ್ಷದಲ್ಲಿ 245 ಕೋಟಿ 10 ಲಕ್ಷ ರೂ. ಠೇವಣಿ ಸಂಗ್ರಹಿಸಿ 4 ಕೋಟಿ 41 ಲಕ್ಷ ರೂ. ನಿವ್ವಳ ಲಾಭ ಗಳಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಸದಲಗಾ ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ಣವರ ಹೇಳಿದರು.
ಅವರು ಸಂಸ್ಥೆಯ ಸಭಾಗೃಹದಲ್ಲಿ ಇಂದು ಆಯೋಜಿಸಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಗ್ರಾಮೀಣ ಭಾಗದ ಜನರ ಆರ್ಥಿಕ ತೊಂದರೆಯ ಜೊತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಳೆದ 32 ವರ್ಷಗಳ ಹಿಂದೆ ಸ್ಥಾಪಿಸಿರುವ ಲಕ್ಷ್ಮೀ ಕ್ರೆಡಿಟ್ ಸಂಸ್ಥೆ ನಿರ್ದೇಶಕ ಮಂಡಳಿಯ ಪ್ರಮಾಣಿಕತೆ ಸಿಬ್ಬಂದಿ ವರ್ಗದ ಕಾರ್ಯ ತತ್ಪರತೆಯನ್ನು ಪರಿಗಣಿಸಿ ಗ್ರಾಹಕರು ಈ ವರ್ಷದ ಅಂತ್ಯದ ವರೆಗೆ 245 ಕೋಟಿ 10 ಲಕ್ಷ ರೂ. ಠೇವಣಿಯನ್ನು ಸಂಗ್ರಹಿಸಿದ್ದು ಸುಮಾರು 113 ಕೋಟಿ 10 ಲಕ್ಷ ರೂ. ಸಾಲ ಹಂಚಲಾಗಿದೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಯಡೂರ, ಯಡೂರವಾಡಿ, ಚಂದೂರ, ಚಿಕ್ಕೋಡಿ, ಕಲ್ಲೋಳ, ಶಿರಗುಪ್ಪಿ, ಹಾರೂಗೇರಿ, ಬೆಳಗಾವಿ, ಸದಲಗಾ, ಅಂಕಲಿ, ಉಗಾರ(ಬಿ.ಕೆ), ಇಂಗಳಿ, ಶೇಡಬಾಳ, ಐನಾಪೂರ, ನಿಪ್ಪಾಣಿ, ಮಂಗಸೂಳಿ, ಕಾಗವಾಡ, ಮೋಳೆ, ಕುಡಚಿ, ಮಾಂಜರಿ, ಚಿಂಚಲಿ ಹಾಗೂ ಮುಗುಳಖೋಡ ಗ್ರಾಮದಲ್ಲಿ ಸಂಸ್ಥೆಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಸದಸ್ಯರ ಅನುಕೂಲಕ್ಕಾಗಿ ಸಂಸ್ಥೆಯ ವತಿಯಿಂದ ಹಲವಾರು ಜನಪರ ಯೋಜನೆಗಳನ್ನು ಹೊಂದಿದ್ದು ಮುಂದಿನ ಕಾಲದಲ್ಲಿ ಇನ್ನಷ್ಟು ಯೋಜನೆಗಳನ್ನು ನೀಡುವ ಜೊತೆಗೆ ಹೊಸ ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಕಲ್ಲಪ್ಪಾ ಮಗೆಣ್ಣವರ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಸೆÉ್ಥಯ ಅಧ್ಯಕ್ಷ ಜಿನ್ನಪ್ಪಾ ಶೇಡಬಾಳೆ, ಉಪಾಧ್ಯಕ್ಷ ಅಶೋಕ ಚಿಮಾಯಿ, ನಿದೇರ್ಶಕರಾದ ಕೃಷ್ಣಕಾಂತ ಘೋರ್ಪಡೆ, ಸದಾಶಿವ ಮಿರ್ಜೆ, ಸತೀಶ ಮಗೆಣ್ಣವರ, ಭೀಮು ಬೋಲೆ, ಅಪ್ಪಾಸಾಬ ಜಮದಾಡೆ, ನೇಮಿನಾಥ ಪಟ್ಟಣಕೂಡೆ, ಸಂಜಯ ಪಾಟೀಲ, ಚಿದಾಂದ ಪುಜಾರಿ ಬೆಬಿತಾಯೊ ಕೋಟಿವಾಲೆ, ರಾಜಶ್ರೀ ದಾಬೋಳೆ, ದತ್ತಾ ಬಾಣೆ ಹಾಗೂ ಇನ್ನಿತರರು ಹಾಜರಿದ್ದರು. ಪ್ರಧಾನ ವ್ಯವಸ್ಥಾಪಕ ಪ್ರದೀಪ ಮಗೆಣ್ಣವರ ಸ್ವಾಗತಿಸಿ, ಸಿಇಒ ಸಾಗರ ಮಂಗಸೂಳೆ ವಂದಿಸಿದರು.ಮಾಂಜರಿ ಗ್ರಾಮದ ಶ್ರೀ ಲಕ್ಷ್ಮೀ ಕ್ರೇಡಿಟ್ ಸೌಹಾರ್ದ ಸಂಸ್ಥೆಯ ಸಭಾಗೃಹದಲ್ಲಿ ಆಯೋಜಿಸಲಾದ ಸುದ್ದಿಗೊಷ್ಟಿಯಲ್ಲಿ ಮಾತನಾಡುವಾಗ ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ಣವರ