36 ಬಾಲ ಕಾರ್ಮಿಕರ ರಕ್ಷಣೆ
ಬಳ್ಳಾರಿ 20: ಸಿರುಗುಪ್ಪ ತಾಲೂಕು ಸಿರಿಗೇರಿ, ಕೊಂಚಿಗೇರಿ, ದಾಸಪುರ, ಶಾನವಾಸಪುರ, ದೇಶನೂರು ಮತ್ತು ಭೈರಾಪುರ ಗ್ರಾಮದ ಹೊಲಗಳಿಗೆ ಕರೆದುಕೊಂಡು ಹೋಗುವ 03 ಟಂಟಂ ಗಾಡಿಗಳಲ್ಲಿ 36 ಮಕ್ಕಳು ಹೊಲಗಳಲ್ಲಿ ಕಳೆ ಕೀಳುವ ಮೆಣಸಿನಕಾಯಿ ಬಿಡಿಸುವುದು. ಈರುಳ್ಳಿ ಕೀಳುವುದು ಹಾಗೂ ಇನ್ನೀತರ ಕೆಲಸಗಳಿಗೆ ಹೊಲಗಳಿಗೆ ಕರೆದುಕೊಂಡು ಹೋಗುತ್ತಿದ್ದ ವಾಹನಗಳ ಮೇಲೆ ಸೋಮವಾರ ಆಕಸ್ಮಿಕ ದಾಳಿ ಮಾಡಿ 25ಬಾಲಕಿಯರು ಮತ್ತು 11 ಬಾಲಕರು ಸೇರಿದಂತೆ ಒಟ್ಟು 36 ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿದ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ.
03 ವಾಹನ ಮಾಲಿಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೋಲೀಸ್ ಠಾಣೆಗೆ ತಿಳಿಸಲಾಯಿತು. ಹೊಲದ ಮಾಲೀಕರಿಗೆ ವಾಹನ ಚಾಲಕರಿಗೆ ಮತ್ತು ಕಾರ್ಮಿಕರಿಗೆ ಬಾಲಕಾರ್ಮಿಕ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗಿದೆ.
ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಸಿ.ಎನ್.ರಾಜೇಶ್ ನೇತೃತ್ವದಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಕ್ಷೇತ್ರಾಧಿಕಾರಿ ಪಿ.ಎಂ.ಈಶ್ವರಯ್ಯ. ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ ಸಹಕಾರ ಹಾಗೂ ಸಿರಿಗೇರಿ ಮತ್ತು ತೆಕ್ಕಲಕೋಟೆ ಪೋಲೀಸ್ ಠಾಣೆ ಸಿಬ್ಬಂದಿಗಳೊಗೂಡಿ,ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗಳಾದ ರಜನಿ ಮತ್ತು ಸುಶೀಲಾ ಸಹಯೋಗದಲ್ಲಿ ಈ ಆಕಸ್ಮಿಕ ದಾಳಿ ನಡೆದಿದೆ ಎಂದು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.