ಕೋವಿಡ್-19ರ 2ನೇ ಡೋಸ್ ಲಸಿಕೆ
ಬಳ್ಳಾರಿ 24: ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ 36ನೇ ವಾರ್ಡಿನ ಹವಂಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಕೇಂದ್ರ ಸರ್ಕಾರದ ಆದೇಶದ ನಿರ್ದೇಶನದಂತೆ 18ವರ್ಷಕ್ಕೂ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಕೋವಿಡ್-19ರ 2ನೇ ಡೋಸ್ ಲಸಿಕೆ ಹಾಕಲಾಯಿತು.
36ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಕಲ್ಪನಾ, ಬಿಜೆಪಿ ಮುಖಂಡರಾದ ಬಿ.ವಿ.ಶ್ರೀನಿವಾಸರೆಡ್ಡಿ ಮತ್ತು ಪಿ.ವೆಂಕಟರಾಮಿರೆಡ್ಡಿ ಅವರುಗಳ ಮುತುವರ್ಜಿಯಿಂದ, ಈ ಲಸಿಕೆ ನೀಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೋವಿಡ್-19 ಎರಡನೇ ಅಲೆಯನ್ನು ತಡೆಗಟ್ಟಲು ಕೊರೊನಾ ವೈರಾಣು ಹರಡದಂತೆ ನಿಯಂತ್ರಿಸಲು ಕೇಂದ್ರ ಸಕಾರದ ಮಾನ್ಯತೆ ಪಡೆದ ಕೋವಿಡ್ ಲಸಿಕೆಯನ್ನು 18ವರ್ಷಕ್ಕೂ ಮೇಲ್ಪಟ್ಟ ಸಾರ್ವಜನಿಕರಿಗಾಗಿ ಉಚಿತವಾಗಿ ನೀಡಲಾಯಿತು. ಬೆಳಿಗ್ಗೆ 9.00ರಿಂದ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವಾರ್ಡಿನ ಸುಮಾರು 300ಕ್ಕೂ ಅಧಿಕ ನಾಗರಿಕರು ಲಸಿಕೆಯನ್ನು ಪಡೆದುಕೊಂಡಿರುತ್ತಾರೆ. ವಾರ್ಡಿನ ಪರಂಧಾಮಯ್ಯ, ವಿಠ್ಠಲ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.