ಸಂಕೇಶ್ವರ

2 ನೇ ಹಂತದ ಸ್ವಚ್ಛ ಅಭಿಯಾನದ ಕಾರ್ಯಕ್ರಮ

2 ನೇ ಹಂತದ ಸ್ವಚ್ಛ ಅಭಿಯಾನದ ಕಾರ್ಯಕ್ರಮ

ಸಂಕೇಶ್ವರ: ಎಂ.ಬಿ. ಘಸ್ತಿ  

ಸಂಕೇಶ್ವರ 21: ಸ್ವಚ್ಛ ಸಂಕೇಶ್ವರ ಅಭಿಯಾನ 2 ನೇ ಹಂತದ ಕಾರ್ಯಕ್ರಮವು 24 ರಂದು ಆಝಾದ ರೋಡದ ದುರದುಂಡೀಶ್ವರ ಮಠದ ಆವಣರದಲ್ಲಿ ಜರುಗುವುದು. 

ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಪೂಜ್ಯ ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಎಷ್ಟು ಮಹತ್ವದು ಅಷ್ಟು ಸ್ವಚ್ಛತೆಯ ಬಗ್ಗೆ ಬಹು ಪ್ರಾಮುಖ್ಯತೆವಾಗಿದೆ ಹಾಗೂ ಜನತೆಯ ಆರೋಗ್ಯವು ಸಹ ಅಷ್ಟೇ ಮಹತ್ವದು ಎಂದು ಮಹಾತ್ಮಾ ಗಾಂಧಿಜಿಯವರ ಹೇಳಿದ ಮಾತು ಹಾಗೂ ಅವರ ಕನಸು ಈಗ ಸಂಕೇಶ್ವರದಲ್ಲಿ ಸ್ವಚ್ಛತಾ ಅಭಿಯಾನ 1 ನೇ ಹಂತ ಯಶಸ್ವಿಗೊಂಡು, ಈ ಯಶಸ್ಸಿನಲ್ಲಿ ಕಳೆದ ವರ್ಷ 2023 ರಲ್ಲಿ 25 ವಾರಗಳ ಶ್ರಮದಾನ ರಸ್ತೆಗಳನ್ನು ಗೂಡಿಸುವುದು ಚರಂಡಿ ಸ್ವಚ್ಛತೆ, ಪಾರ್ಕ ಶುಚಿತ್ವ, ಬಸ ನಿಲ್ದಾಣದಲ್ಲಿ ಶ್ರಮದಾನ ಮಾಡಿದ ನೂರಾರು ಯುವಕರು ಜನರು ಹಿರಿಯ ನಾಗರಿಕರು ಗಣ್ಯ ವ್ಯಕ್ತಿಗಳು ವೈದ್ಯರು ನ್ಯಾಯವಾದಿಗಳು ಪ್ರಾಧ್ಯಾಪಕರು ಜನಪ್ರತಿನಿಧಿಗಳು ಇಂಜಿನಿಯರಗಳು ತಾಯಂದಿರು ಮತ್ತು ಪುಟ್ಟ ಮಕ್ಕಳು ಎಸ್‌.ಆರ್‌. ನಗರ (ಕ್ವಳ್ಳಿ ಪ್ಲಾಟ) ಜಯನಗರ, ಕಣಗಲಿ ಬಡಾವಣೆಯಲ್ಲಿ ಸೇರಿ ಮನೆಗೆ ಮನೆಗಳಿಗೆ ತೆರಳಿ ಒಣ ಕಸ ಸಂಗ್ರಹಿಸಿ ಮರು ಬಳಕೆಗೆ ಕಳುಸುತ್ತಿರುವುದು 1 ಹಂತದ ಅಭಿಯಾನದಲ್ಲಿ ಮುಂದುವರೆದ ಭಾಗವಾಗಿದೆ. 

ಎರಡನೆಯ ಹಂತದ ಅಭಿಯಾನದಲ್ಲಿ 23 ವಾರ್ಡಗಳಲ್ಲಿ ರವಿವಾರ ಬೆಳಿಗ್ಗೆ 25 ಶಾಲೆಗಳಲ್ಲಿ ಸ್ವಚ್ಛ ಮನಸ್ ಕಾರ್ಯಕ್ರಮ 25 ಸ್ವಚ್ಛ ಸತ್ಸಂಗ ಜಾಗೃತಿಗಾಗಿ ಮನೆ ಮಟ್ಟದಲ್ಲಿ ಹಸಿ ಕಸ ನಿರ್ವಹಣೆಗಾಗಿ ಮೂರು ಮಡಿಕೆ ಸಾಧನಗಳ ಪ್ರಾತ್ಯಕ್ಷತೆ ಸ್ವಚ್ಛತೆಗಾಗಿ ಜಾದೂ ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ ಬಾಷಣ ಸ್ಪರ್ಧೆ ಪ್ರಬಂಧ ಸ್ಪರ್ಧೆ ವಿಭಿನ್ನ ಕಾರ್ಯಕ್ರಮಗಳು 2 ನೇ ಹಂತದ ಅಭಿಯಾನದಲ್ಲಿ ನಡೆಯಲಿವೆ. 

ಈ ಸ್ವಚ್ಛ ಅಭಿಯಾನದ ಕಾರ್ಯಕ್ರಮವನ್ನು ನಿಡಸೋಶಿಯ ಸಿದ್ಧ ಸಂಸ್ಥಾನ ಮಠ ಉತ್ತರಾಧಿಕಾರಿಗಳಾದ ಶ್ರೀ. ನಿಜಲಿಂಗೇಶ್ವರ ಸ್ವಾಮಿಗಳು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸುವರು ಇದರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಸುಭಾಷ ಆಡಿ, ಮಾಜಿ ಸಚಿವ ಎ.ಬಿ. ಪಾಟೀಲರು, ಈ ಸಮಾರಂಭದ ಘನ ಅಧ್ಯಕ್ಷತೆಯನ್ನು ಹುಕ್ಕೇರಿ ಮತಕ್ಷೇತ್ರದ ನೀಖೀಲ ಉಮೇಶ ಕತ್ತಿ ಇವರು ವಹಿಸುವರು, ಪುರಸಭೆಯ ಅಧ್ಯಕ್ಷೆ ಸೀಮಾ ಬಂಡು ಹತನೂರೆ, ವಿಶೇಷ ಆಹ್ವಾನಿತರಾಗಿ ನುರಿತ ಪ್ರಸಿದ್ಧರಾದ ಕ್ಯಾನ್ಸರ ತಜ್ಞ ವೈದ್ಯರಾದ ಡಾ: ಶರದ ದೇಸಾಯಿ ಇವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರಿದ್ದಾರೆಂದು ಸ್ವಚ್ಛ ಸಂಕೇಶ್ವರ ಫೌಂಡೇಶನ ಅಧ್ಯಕ್ಷರಾದ ಡಾ: ರಮೇಶ ದೊಡಭಂಗಿ ಮತ್ತು ಉಪಾಧ್ಯಕ್ಷರಾದ ಸುನೀಲ ಅಣ್ಣಾಸಾಹೇಬ ಪರ್ವತರಾವ ಇವರು ಜಂಟಿಯಾಗಿ ಲೋಕದರ್ಶನ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಕಾರ್ಯಕ್ರಮದ ಮಾಹಿತಿಯನ್ನು ನೀಡಿದ್ದಾರೆ. 


ಸುದ್ದಿ ಓದಿ