ಬಳ್ಳಾರಿ

ನೇತಾಜಿ ಸುಭಾಷ್‌ಚಂದ್ರ ಬೋಸ್‌ರ 25ಅಡಿ ಭಾವಚಿತ್ರ ಬಿಡುಗಡೆ

ನೇತಾಜಿ ಸುಭಾಷ್‌ಚಂದ್ರ ಬೋಸ್‌ರ 25ಅಡಿ ಭಾವಚಿತ್ರ ಬಿಡುಗಡೆ

ಬಳ್ಳಾರಿ 24: ನೇತಾಜಿ ಅವರು ತಮ್ಮ ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಆದರ್ಶದಿಂದ ಬೆಳೆದಂತಹ ವ್ಯಕ್ತಿ. ಅವರಂತೆ ವಿದ್ಯಾರ್ಥಿಗಳು ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಇಂತಹ ಕಾರ್ಯಕ್ರಮ ಮಾಡವ ಮೂಲಕ ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಆದುವೇ ನಿಜವಾದ ಗೌರವ ನೇತಾಜಿ ಅವರಿಗೆ ಸಲ್ಲುತ್ತದೆ ಎಂದು ಪ್ರಾಂಶುಪಾಲ ಡಾ.ಮಂಜುನಾಥ ರೆಡ್ಡಿ ಹೇಳಿದರು. 

ಅವರು ಸರಳಾದೇವಿ ಕಾಲೇಜಿನ ಸೃಜನ ವಿದ್ಯಾರ್ಥಿ ವೇದಿಕೆ ವತಿಯಿಂದ ಜನವರಿ 23 ರಂದು ಭಾರತ ಸ್ವಾತಂತ್ರ ಸಂಗ್ರಾಮದ ಮಹಾನ್ ನೇತಾರ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 126ನೇ ಜನ್ಮ ದಿನದ ಅಂಗವಾಗಿ ಕಾಲೇಜಿನ ಆವರಣದಲ್ಲಿ ನೇತಾಜಿಯವರ 25ಅಡಿಯ ಭಾವಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.ಉದ್ದೇಶಿಸಿ ಸೃಜನ ಹಾಗೂ  ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ರೇವಣಸಿದ್ದೇಶ್ವರ. ಎ.ಪಿ ಅವರು ಮಾತನಾಡುತ್ತಾ ನೇತಾಜಿಯವರು ಅನ್ಯಾಯದೊಂದಿಗೆ ರಾಜಿ ಮಾಡಿಕೊಳ್ಳುವುದಕ್ಕಿಂತ ದೊಡ್ಡ ಅಪರಾಧ ಮತ್ತೊಂದಿಲ್ಲ ಎಂಬ ವಾಕ್ಯದೊಂದಿಗೆ ತಮ್ಮ ಜೀವನ ಸಂಘರ್ಷವನ್ನು ನಡೆಸಿದರು. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಬರುವ ಹಲವಾರು ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಹೋರಾಡಬೇಕು ಹಾಗೂ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು. ಸ್ಪೂರ್ತಿಯ ಚಿಲುಮೆಯಾದ ನೇತಾಜಿಯವರ 25ಅಡಿಯ ಭಾವಚಿತ್ರವನ್ನು ನಮ್ಮ ಕಾಲೇಜಿನಲ್ಲಿ ಬಿಡುಗಡೆ ಮಾಡಿರುವುದು ಹೆಮ್ಮೆಯ ವಿಷಯ. ನೇತಾಜಿ ಅವರ ವೈಜ್ಞಾನಿಕ, ಧರ್ಮನೀರಪೇಕ್ಷ, ಪ್ರಜಾತಾಂತ್ರಿಕ ಶಿಕ್ಷಣದ ಕನಸನ್ನು ನನಸಾಗಿಸಲು ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು ಎಂದು ಹೇಳಿದರು.ಕಾಲೇಜಿನ ಉಪಾನ್ಯಾಸಕ ವೃಂದದವರು ಹಾಗೂ ಸೃಜನ ವಿದ್ಯಾರ್ಥಿ ವೇದಿಕೆಯ ಗೌರವ ಅಧ್ಯಕ್ಷರಾದ ಕಂಬಳಿ ಮಂಜುನಾಥ, ಕಾರ್ಯದರ್ಶಿಯಾದ ನಿಹಾರಿಕ, ಸದಸ್ಯರಾದ ಉಮಾ, ಲಕ್ಷ್ಮಿ ಹಾಗೂ ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ