ದರ್ಶನ್ ಸಿನಿ ಜೀವನಕ್ಕೆ 24 ವರ್ಷ : ಸಂಭ್ರಮಾಚರಣೆ
ಬೆಂಗಳೂರು, ಆಗಸ್ಟ್ 12 ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿ 24 ವರ್ಷ ಸಂದಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಖ್ಯಾತ ಕಲಾವಿದ ತೂಗುದೀಪ ಶ್ರೀನಿವಾಸ್ ಪುತ್ರನಾದರೂ, ಆರಂಭದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತ, ಇಂದು ಬಹು ಬೇಡಿಕೆಯ ನಟನಾಗಿ ಬೆಳೆದಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ 24 ವರ್ಷಗಳನ್ನು ಪೂರೈಸಿರುವ ಈ ಶುಭ ಸಂದರ್ಭದಲ್ಲಿ ದರ್ಶನ್ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಚಾಲೆಂಜಿಂಗ್ ಪ್ರೀತಿಯ ಅಭಿಮಾನಿಗಳು ಸನ್ಮಾನ ಮಾಡಿ ಸಂಭ್ರಮಿಸಿದ್ದಾರೆ. ದರ್ಶನ್ ನಿವಾಸಕ್ಕೆ ತೆರಳಿ ನೆಚ್ಚಿನ ಸಿಹಿ ತಿನಿಸಿ ಸಂತಸ ಪಟ್ಟಿದ್ದಾರೆ.
ಅಭಿಮಾನಿಗಳ ಜೊತೆ 24 ವರ್ಷದದ ಸಂಭ್ರಮವನ್ನು ಆಚರಣೆ ಮಾಡಿರುವ ಫೋಟೋಗಳು ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಸ್ನೇಹಿತರ ಜೊತೆಯೂ 24ವರ್ಷದ ಸಂಭ್ರಮವನ್ನು ಆಚರಣೆ ಮಾಡಿದ್ದಾರೆ. ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಸಂಭ್ರಮಾಚರಣೆಯಲ್ಲಿ ದರ್ಶನ್ ಆಪ್ತರು ಭಾಗಿಯಾಗಿದ್ದರು. ಭ್ರಮಾಚರಣೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.