ವಿಜಯಪುರ

ಬಿ.ಎಲ್‌.ಡಿ.ಇ ಕ್ಯಾಂಪಸ್ ನೇಮಕಾತಿಯಲ್ಲಿ 23 ವಿದ್ಯಾರ್ಥಿಗಳ ಆಯ್ಕೆ

ಬಿ.ಎಲ್‌.ಡಿ.ಇ ಕ್ಯಾಂಪಸ್ ನೇಮಕಾತಿಯಲ್ಲಿ 23 ವಿದ್ಯಾರ್ಥಿಗಳ ಆಯ್ಕೆ

ವಿಜಯಪುರ 21 :  ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ಜೂನ್ 9 ರಂದು ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್‌ ಮತ್ತು ಬೆಳಗಾವಿಯ ಏಕಸ್ ಸಂಸ್ಥೆಗಳು ನಡೆಸಿದ ಕ್ಯಾಂಪಸ್ ಉದ್ಯೋಗ ಮೇಳದಲ್ಲಿ ಕಾಲೇಜಿನ ಒಟ್ಟು 23 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸೆಂಟಮ್ ಎಲೆಕ್ಟ್ರಾನಿಕ್ಸ್‌ ಸಂಸ್ಥೆಗೆ 17 ಮತ್ತು ಏಕಸ್ ಸಂಸ್ಥೆಗೆ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಸೆಂಟಮ್ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯ ವತಿಯಿಂದ ಸಹಾಯಕ ವ್ಯವಸ್ಥಾಪಕ ಮತ್ತು ಮಾನವ ಸಂಪನ್ಮೂಲ ಅಧಿಕಾರಿ ಅಂಶಿತ್ ಸಿ. ಡಿ. ಅವರು ಖುದ್ದಾಗಿ ಆಗಮಿಸಿ ಸಂದರ್ಶನ ನಡೆಸಿದರು. ಈ ಸಂದರ್ಶನದಲ್ಲಿ ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ ವಿಭಾಗದ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ 20 ವಿದ್ಯಾರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಲಾಗಿತ್ತು.

ಈ ವಿದ್ಯಾರ್ಥಿಗಳಲ್ಲಿ ಅಂತಿಮವಾಗಿ 17 ವಿದ್ಯಾರ್ಥಿಗಳನ್ನು ಕಂಪನಿ ಆಯ್ಕೆಮಾಡಿಕೊಂಡಿದೆ. ಬೆಳಗಾವಿಯ ಏಕಸ್ ಸಂಸ್ಥೆಯಿಂದ ವತಿಯಿಂದ ಮಾನವ ಸಂಪನ್ಮೂಲ ಅಧಿಕಾರಿ  ಶ್ರಾವಣಿ ಕುಲಕರ್ಣಿ ಮತ್ತು ಅವರ ತಂಡದವರು ಮೆಕ್ಯಾನಿಕಲ್ ಮತ್ತು ಆಟೋ ಮೋಬೈಲ್ ಎಂಜಿನಿಯರಿಂಗ್ ವಿಭಾಗದ 24 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂದರ್ಶನದಲ್ಲಿ ನಡೆಸಿದ್ದರು.  ಲಿಖಿತ ಪರೀಕ್ಷೆಯ ಮೂಲಕ 16 ವಿದ್ಯಾರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅತ್ಯುತ್ತಮ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.  


ಸುದ್ದಿ ಓದಿ