ಚಿಕ್ಕೋಡಿ

ಬಡ ಜನರ ಅಂತ್ಯಸಂಸ್ಕಾರಕ್ಕೆ ಫೌಂಡೇಶನ ವತಿಯಿಂದ 20 ಲಕ್ಷ ರೂ. ನಿರ್ಧಾರ

ಬಡ ಜನರ ಅಂತ್ಯಸಂಸ್ಕಾರಕ್ಕೆ ಫೌಂಡೇಶನ ವತಿಯಿಂದ 20 ಲಕ್ಷ ರೂ. ನಿರ್ಧಾರ

ಚಿಕ್ಕೋಡಿ 26: ಮಹಾಮಾರಿ ಕೊರೊನಾದಿಂದ ದಿನದಿಂದ ದಿನಕ್ಕೆ ನೂರಾರು ಜನರು ಮೃತಡುತ್ತಿದ್ದಾರೆ. ಬಡ ಜನರು ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ನರಳಾಡುತ್ತಿದ್ದಾರೆ. ಹೀಗಾಗಿ ಬಡ ಜನರ ಅನುಕೂಲಕ್ಕಾಗಿ ಅನ್ನಪೂರ್ಣೇಶ್ವರಿ ಫೌಂಡೇಶನ ವತಿಯಿಂದ 20 ಲಕ್ಷ ರೂ ಕೆಪಿಸಿಸಿ ಘಟಕಕ್ಕೆ ನೀಡಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು. 

ಸೋಮವಾರ ಅಂಕಲಿ ಗ್ರಾಮದಲ್ಲಿ ಕೋವಿಡ್ ಆಸ್ಪತ್ರೆ ಉದ್ಘಾಟನೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರ ಜೊತೆ ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು. 

ಕೊರೊನಾ ಸೋಂಕಿನಿಂದ ಸಾಕಷ್ಟು ಜನರು ನರಳಿ ಮೃತಡುತ್ತಿದ್ದಾರೆ. ಬಡವರು ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡಬಾರದೆಂಬ ಉದ್ದೇಶದಿಂದ ನಮ್ಮ ಯಕ್ಸಂಬಾ ಅನ್ನಪೂನೇಶ್ವರಿ ಪೌಂಡೇಶನದಿಂದ ನಾನು ಮತ್ತು ಶಾಸಕ ಗಣೇಶ ಹುಕ್ಕೇರಿ ಕೂಡಿಕೊಂಡು ಕೆಪಿಸಿಸಿ ಘಟಕದ ಮೂಲಕ ಬಡವರಿಗೆ ಸಹಾಯ ಹಸ್ತ ಚಾಚಲು 20 ಲಕ್ಷ ರೂ ನೀಡುತ್ತಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಡಾ, ಎನ್‌.ಎ.ಮಗದುಮ್ಮ ಇದ್ದರು. 


ಸುದ್ದಿ ಓದಿ