ವಿಜಯಪುರ

ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ನಿಂದ 2 ಕುರಿಗಳು ಸಾವನ್ನಪ್ಪಿದ ಘಟನೆ

ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ನಿಂದ 2 ಕುರಿಗಳು ಸಾವನ್ನಪ್ಪಿದ ಘಟನೆ

ಕೊಲ್ಹಾರ 23 :  ತಾಲ್ಲೂಕಿನ ರೋಣಿಹಾಳ ಗ್ರಾಮದಲ್ಲಿ ಜಮೀನಿನಲ್ಲಿ ಕುರಿಗಳು ಮೆಯಲು ಹೋದಾಗ ಮೇನ್ ಲೈನ್ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ನಿಂದ 2 ಕುರಿಗಳು ಸಾವನ್ನಪ್ಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ ರೋಣಿಹಾಳ ಗ್ರಾಮದ ಸಂಗಪ್ಪ  ಮುಕ್ಕಣ್ಣ ಹಂಡಿ  ಅವರ ಸರ್ವೇ ನಂ 142 ರ ಜಮೀನಿನಲ್ಲಿ ವಿದ್ಯುತ್ ಕಂಬಗಳು ಗಾಳಿ ಮಳೆಗೆ ಕೆಳಗೆ ಬಿದ್ದು ಮೇನ್ ಲೈನ್ ನೆಲಕ್ಕೆ ಬಿದ್ದಿರುವುದರಿಂದ ಕುರಿಗಳು ಜಮೀನಿನಲ್ಲಿ ಮೇಯಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕುರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ ಕುರಿಗಳ ಮಾಲಿಕನ ಹೆಸರು ತಿಳಿದು ಬಂದಿಲ್ಲ ಜಮೀನಿನಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ತಕ್ಷಣವೇ ಸರಿಪಡಿಸುತ್ತವೆ  ಎಂದು ಕೊಲ್ಹಾರ  ಹೆಸ್ಕಾಂ ಇಲಾಖೆ ಅಧಿಕಾರಿ ಶ್ರೀಶೈಲ ಪಡಸಲಗಿ  ಲೋಕ ದರ್ಶನ ಪತ್ರಿಕೆಗೆ ಮಾಹಿತಿ ತಿಳಿಸಿದ್ದಾರೆ 


ಸುದ್ದಿ ಓದಿ