ಹಗರಿಬೊಮ್ಮನಹಳ್ಳಿ

ಅಂತರ ಜಲ ಕುಸಿತವಿಲ್ಲದಿದ್ದರೂ ಬೋರ್‍ವೆಲ್‍ಗಳ ಕೊರೆತ: ಸದಸ್ಯರ ಅಕ್ರೋಶ

ಅಂತರ ಜಲ ಕುಸಿತವಿಲ್ಲದಿದ್ದರೂ ಬೋರ್‍ವೆಲ್‍ಗಳ ಕೊರೆತ: ಸದಸ್ಯರ ಅಕ್ರೋಶ

ಹಗರಿಬೊಮ್ಮನಹಳ್ಳಿ 07: ಅಂಗನವಾಡಿ ಸುಪರ್ ವೈಸರ್‍ಗಳು ಅಂಗನವಾಡಿ ಕೇಂದ್ರಗಳಿಗೆ ವಿಸಿಟ್ ಮಾಡಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ 18ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಮೊಟ್ಟೆ ನೀಡುತ್ತಿಲ್ಲ : ತಾಲೂಕಿನ ಹಲವಾರು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಸೇರಿದಂತೆ ಮಕ್ಕಳಿಗೆ ಅಪೌಷ್ಟಿಕತೆ ನೀಗಿಸಲು ನೀಡುತ್ತಿರುವ ಸೌಲಭ್ಯಗಳು ಸಮರ್ಪಕವಾಗಿ ಸರಬರಜಾಗುತ್ತಿಲ್ಲವೆಂದು ಅದ್ಯಕ್ಷೆ ನಾಗಮ್ಮ ಗೋಣಿ ಬಸಪ್ಪ ಪ್ರಶ್ನಿಸಿದಾಗ ಉತ್ತರಿಸಿದ ಸಿಡಿಪಿಒ ಚನ್ನಪ್ಪ ಉತ್ತರಿಸಿ ಅಂಗನವಾಡಿ ಟೀಚರ್‍ಗಳ ಖಾತೆಗೆ ಹಣ ಸಂದಾಯವಾಗುತ್ತಿದೆ ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ಫಲಾನುಭವಿಗಳ ಮನೆಗೆ ನೀಡುವಂತೆ ತಿಳಿಸಲಾಗಿದೆ ಇದರಲ್ಲಿ ಯಾವುದೇ ಕೊರತೆ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಖಾಸಗೀಕರಣದ ಬೋರ್ಡ್ ಹಾಕಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣವಿಲ್ಲದಿದ್ದರೆ ಯಾವುದೇ ಕೆಲಸ ನಡೆಯುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯೆಕ್ತಪಡಿಸುತ್ತಿದ್ದಾರೆ ಎಂದು ಸದಸ್ಯರು ಪ್ರಶ್ನಿಸಿದಾಗ ತಾಲೂಕು ವೈಧ್ಯಾಧಿಕಾರಿ ಉತ್ತರಿಸಿ ಆಸ್ಪತ್ರೆಯಲ್ಲಿ ಹಣ ಪಡೆದು ಚಿಕಿತ್ಸೆ ನೀಡಲಗುತ್ತಿದೆ ಹಾಗೂ ಶಸ್ತ್ರ ಚಿಕಿತ್ಸೆಗೆ ಹಣ ವಸೂಲಿ ಮಾಡುತ್ತಿರುವುದು ತಿಳಿದಿದೆ ಮೆಲಾಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿದರೆ ಸಾಕ್ಷಿ ನೀಡುವಂತೆ ಹೇಲುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದ ಕೂಡಲೇ ಸದಸ್ಯರುಗಳು ನಾಮುಂದೂ ನೀಮುಂದು ಎಂದು ಸಾಕ್ಷಿ ಹೇಳಲು ಬರುವುದಾಗಿ ತಿಳಿಸಿದ ಕೋಡಲೇ ,ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರತಿಕ್ರಿಯೆಸಿ ಸರಕಾರಿ ಆಸ್ಪತ್ರೆಯಲ್ಲಿ ಹಣವಿದ್ದರೆ ಮಾತ್ರ ಶಸ್ತ್ರ ಚಿಕಿತ್ಸೆ ಮಾದಲಾಗುವುದು ಎಂದು ಬೋರ್ಡ್ ಹಾಕಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಜೆಸ್ಕಾಂ ಇಲಾಖೆಯಲ್ಲಿ ಅವ್ಯವಹಾರ,ತನಿಖೆಗೆ ಪಟ್ಟು: ಜೆಸ್ಕಾಂ ಇಲಾಖೆಗೆ ಕೋಟಿ ಕೋಟಿ ಹಣ ಹರಿಸು ಬರುತ್ತಿರುವುದು ಮಾತ್ರ ಕಾಣುತ್ತಿದ ಆದರೆ ಕಂಬಗಳ ಬದಲಾವಣೆ ಸೇರಿದಂತೆ ವಿದ್ಯುತ್ ತಂತಿ ಬದಾಲಾಯಿಸುವ ಕಾರ್ಯ ಅರೆ ಬರೆಯಗಿ ನಡೆಯುತ್ತಿದೆ , ಇಲಾಖೆಯಲ್ಲಿ ಕೋಟಿಗಟ್ಟಲೆ ಹಣ ಗುಳುಂ ಅಗುತ್ತಿದೆ,ದೀನ್ ದಯಾಳ್ ಯೋಜನೆಯಲ್ಲಿ ಕಾರ್ಯಗಳು ನಡೆಯುತ್ತಿಲ್ಲ,  ಅಧಿಕಾರಿಗಳನ್ನು ಸೇಫ್ ಮಾಡಲು ನಿವು ಮುಂದಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರೋಪ ಕೇಳಿ ಇಲಾಖಾಧಿಕಾರಿ ತೇಜಾನಾಯ್ಕ್ ಉತ್ತರಿಸಿ ನಾವು ಈ ವಿಚಾರವಾಗಿ ಮೇಲಾಧಿಕಾರಿಗಳಿಗೆ ವಿಚಾರವನ್ನು ತಿಳಿಸಿದ್ದೇವೆ,ಕಳಪೆ ಕಾಮಗಾರಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಲೆಟರ್ ಕಳುಹಿಸಲಾಗಿದೆ ಎಂದರು.

ಪಶು ಇಲಾಖೆಯಿಂದ ಮಾಹಿತಿ ಕೊರತೆ : ಪಶು ಇಲಾಖೆಯಲ್ಲಿನ ಮಾಹಿತಿ ಗ್ರಾಮಾಂತರ ಪ್ರದೇಶಗಳಲ್ಲಿ ಸೂಕ್ತ ರೀತಿಯಲ್ಲಿ ಲಭ್ಯವಾಗುತ್ತಿಲ್ಲವೆಂದು ಸದಸ್ಯ ಅನಿಲ್ ಜಾಣ ಪ್ರಶ್ನಿಸಿದರು,ಇದಕ್ಕೆ ಇಲಾಖಾಧಿಕಾರಿ ದೇವಗಿರಿ ಉತ್ತರಿಸಿ ಕಳೆದ 3ತಿಂಗಳಿಂದ ಹಸು,ಕುರಿ,ಕೋಳಿ ಸಾಕಾಣೆದಾರರಿಗೆ ಸಾಲ ಸೌಲಭ್ಯವನ್ನು ಪಟ್ಟಣದ ಬ್ಯಾಂಕ್‍ಗಳು ನೀಡುತ್ತಿವೆ ಗ್ರಾಮ ಪಂಚಾಯತಿ ನೋಟೀಸ್ ಬೋರ್ಡ್‍ಗಳಿಗೆ ಮಾಹಿತಿಯನ್ನು ಹಾಕುವಂತೆ ಪಿಡಿಒಗಳಿಗೆ ತಿಳಿಸಿಲಾಗಿದೆ ಎಂದರು.

ಪಟ್ಟಣದ ರಾಮ್ ರಹಿಂ ನಗರದ ಮೇಟ್ರಿಕ್ ನಂತರದ ವಸತಿ ನಿಲಯದ ಬಗ್ಗೆ ಪತ್ರಿಕೆಯಲ್ಲಿ ವರದಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಕ್ಕೆ ಸಮಾಜ ಕಲ್ಯಾಣಾಧಿಕಾರಿ ಉತ್ತರಿಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗಿದೆ ಬೇರೆ ಹಾಸ್ಟೆಲ್‍ಗಳು ಸಮರ್ಪಕವಾಗಿವೆ, ರಾಜ್ಯ ಸರಕಾರದ ಮಾರ್ಗಸೂಚಿ ಪ್ರಕಾರ ತರೆಯದ ಶಾಲಾ ಮಕ್ಕಳನ್ನು ಪಾಲಕರೊಂದಿಗೆ ಮನೆಗಳಿಗೆ ಕಳುಹಿಸಲಾಗಿದೆ ಎಂದರು.

ತಾಲೂಕಿನ ಚಿಕ್ಕ ಸೊಬಟಿ ಗ್ರಮದ ಬಳಿ ನಡೆಯುತ್ತಿರುವ ಅಕ್ರಮ ಮರಳು ಗಾರಿಕೆಗೆ ಕಡಿವಾಣ ಹಾಕುವಂತೆ ಪ್ರತಿಭಟನೆ ನಡೆಸಿದ್ದು ,ಆದರೆ ಅಲ್ಲಿ ಯಾವುದೇ ಅಂತರ್ಜಲ ಕುಸಿತವಿಲ್ಲವೆಂಬ ಪ್ರಮಾಣ ಪತ್ರ ನೀಡಿರುವ ಕುಡಿಯುವ ನೀರಿನ ಇಲಾಖೆ,ಯಾವ ಕಾರಣಕ್ಕಾಗಿ ಆಭಾಗದಲ್ಲಿ ಬೋರ್‍ವೆಲ್ ಗಳನ್ನು ಕೊರರಸಿದ್ದಾರೆ ಎಂದು ತಾಲೂಕಿನ ಸ್ಥಾಯಿ ಸಮಿತಿ ಅಧ್ಯಕ್ಷ ಅಧಿಕಾರಿಗೆ ಪ್ರಶ್ನಿಸಿದರು.

ಈ ಸಂಧರ್ಭದಲ್ಲಿ ಇಒ ಹಾಲ ಸಿದ್ದಪ್ಪ ಪೂಜೇರಿ, ತಾ.ಪಂ.ಅಧ್ಯಕ್ಷೆ ನಾಗಮ್ಮ ಗೋಣಿ ಬಸಪ್ಪ, ಉಪಾಧ್ಯಾಕ್ಷೆ ಬಿಕ್ಯ ಮುನ್ನಿಬಾಯಿ,ಪಿಡಬ್ಲ್ಯಡಿಯ ಶೇಖ್ ಅಹಮದ್, ಸದಸ್ಯರಾದ ಮಾಳ್ಗಿ ಗೀರಿಶ್,ಪ್ರಭಾಕರ, ಎಪಿಎಂಸಿ ಅಧಿಕಾರಿ ಮರಳು ಸಿದ್ದಪ್ಪ, ಕೃಷಿ ಅಧಿಕಾರಿ ಪರಮೇಶ್ವರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು, ತಾ.ಪಂ.ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಓದಿ