ರಾಷ್ಟ್ರೀಯ

9 ಕೋಟಿ ರೈತರ ಖಾತೆಗೆ 18 ಸಾವಿರ ಕೋಟಿ ರೂ. ಕಿಸಾನ್ ಸಮ್ಮಾನ್ ಯೋಜನೆ ಹಣ ಪಾವತಿ

9 ಕೋಟಿ ರೈತರ ಖಾತೆಗೆ 18 ಸಾವಿರ ಕೋಟಿ ರೂ. ಕಿಸಾನ್ ಸಮ್ಮಾನ್ ಯೋಜನೆ ಹಣ ಪಾವತಿ

ನವದೆಹಲಿ, ಡಿಸೆಂಬರ್ 24: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್)ಯೋಜನೆ ಅನ್ವಯ ರೈತರಿಗೆ  ನಾಳೆ ( ಶುಕ್ರವಾರ)  7ನೇ  ಕಂತಿನ ಎರಡು ಸಾವಿರ  ಹಣ ದೊರಕಲಿದೆ. 

ಡಿ.25 ರಂದು(ನಾಳೆ)  ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣ ಬಿಡುಗಡೆ ಮಾಡಿ ಕೆಲವು ರೈತರ ಜೊತೆ ಸಂವಾದ ನಡೆಸಲಿದ್ದಾರೆ.

ನಾಳೆ ಒಟ್ಟು 18 ಸಾವಿರ ಕೋಟಿ ರೂಪಾಯಿಗಳನ್ನು  ಅವರು 9 ಕೋಟಿ ರೈತರಿಗೆ ವಿತರಿಸಲಿದ್ದಾರೆ .  ಇದರ ಜತೆಗೆ ಆರು ರಾಜ್ಯಗಳ ರೈತರ ಜತೆಗೆ ಅವರು ಸಮಾಲೋಚನೆಯನ್ನೂ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ರೈತರು ಪಿಎಂ-ಕಿಸಾನ್ ಯೋಜನೆಯಿಂದ ಅವರಿಗೆ ಉಂಟಾಗಿರುವ ಅನುಭವಗಳ ಬಗ್ಗೆ ವಿಚಾರ ಹಂಚಿಕೆ ನಡೆಸಲಿದ್ದಾರೆ. ಮೂರು ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ  ವಾಪಸ್ ಪಡೆಯಬೇಕು ಎಂದು  ದೇಶಾದ್ಯಂತ ರೈತರ  ಹೋರಾಟ ಮುಂದುವರಿದಿರುವಂತೆಯೇ ಪ್ರಧಾನಿ ಕಾರ್ಯಕ್ರಮ  ನಾಳೆ ನಿಗದಿಯಂತೆ ನಡೆಯುತ್ತಿದೆ.  

ಸುದ್ದಿ ಓದಿ