ಚಿಕ್ಕೋಡಿ-ಸದಲಗಾ ವ್ಯಾಪ್ತಿಯಲ್ಲಿ 18 ಸಾವಿರ ಜನರಿಗೆ ಲಸಿಕೆ
ಚಿಕ್ಕೋಡಿ 9: ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 10 ಸಾರ್ವಜನಿಕ ಆಸ್ಪತ್ರೆಗಳಿಗೆ ಕೋವಿಡ್ ಲಸಿಕೆಯ ಗುರಿಯನ್ನು ಸದ್ಯಕ್ಕೆ 27 ಸಾವಿರ ಜನರಿಗೆ ನೀಡುವ ಗುರಿ ಹೊಂದಲಾಗಿದ್ದು, ಇಲ್ಲಿಯ ವರೆಗೆ ದಿನಾಂಕ : 09-04-2021 ರ ವರೆಗೆ 18 ಸಾವಿರಕ್ಕಿಂತಲೂ ಹೆಚ್ಚು ಜನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದು, ಶೇಕಡಾ 66.26% ಗುರಿ ಸಾಧಿಸಲಾಗಿರುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 10 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ದಿ.15-03-2021 ರಿಂದ ನೀಡಲಾಗುತ್ತಿದ್ದು, ಆಸ್ಪತ್ರಗಳಿಗೆ ಹೋಗಿಬರಲು ಸುತ್ತಲಿನ ಗ್ರಾಮಗಳ ವಯೋವೃದ್ದರಿಗೆ, ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ಉಚಿತ ವಾಹನಗಳ ಸೌಲಬ್ಯವನ್ನು ಕಲ್ಪಿಸಲಾಗಿರುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಅಂಕಲಿ-2791, ಚಿಕ್ಕೋಡಿ-3542, ಯಕ್ಸಂಬಾ-1062, ಇಂಗಳಿ-1149, ಕೇರೂರ-2701, ಖಡಕಲಾಟ-1802, ಪಟ್ಟಣಕುಡಿ-1004, ಮಾಂಜರಿ-1300, ಸದಲಗಾ-1335 ಹಾಗೂ ಯಡೂರ-1316 ಹೀಗೆ ಒಟ್ಟು 1802 ಲಸಿಕೆಯನ್ನು ಸಾರ್ವಜನಿಕರು ಪಡೆದುಕೊಂಡಿರುತ್ತಾರೆ. ಕಳೆದ ವಾರದಿಂದ ಈ ಭಾಗದ ಸಾರ್ವಜನಿಕರು ಹೆಚ್ಚಿನ ಆಸಕ್ತಿ ವಹಿಸಿ ಲಸಿಕೆಯನ್ನು ಪಡೆದುಕೊಳ್ಳುತ್ತಿರುವದು ಆರೋಗ್ಯಕರ ಬೆಳವಣಿಗೆಯಾಗಿದೆ ಹಾಗೂ ಯಾರೂ ಕೂಡ ತಪ್ಪು ಸಂದೇಶಗಳಿಗೆ ಕಿವಿಗೊಡದೆ ಲಸಿಕೆ ಪಡೆದುಕೊಳ್ಳುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಹಾಗೂ ಮಾಜಿ ಪ್ರಕಾಶ ಹುಕ್ಕೇರಿ ತಿಳಿಸಿದರು.