ಬಳ್ಳಾರಿ

ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬಜೆಟ್‍ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಸ್ವಾಗತಾರ್ಹ

ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬಜೆಟ್‍ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಸ್ವಾಗತಾರ್ಹ

ಕಂಪ್ಲಿ 09: ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬಜೆಟ್‍ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಸಂತೋಷ ವಾಗಿದೆ ಎಂದು ಇಲ್ಲಿನ ಬಿಜೆಪಿ ಅಲ್ಪಸಂಖ್ಯಾತ ಕ್ಷೇತ್ರ ಘಟಕ ಅಧ್ಯಕ್ಷ ಕೆ.ಹೊನ್ನೂರ್‍ಸಾಬ್ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿÉ ರಾಜ್ಯ ಸರ್ಕಾರ ಈ ಬಾರಿಯು ಎಲ್ಲಾ ಸಮುದಾಯದ ಹಾಗೂ ಜಿಲ್ಲೆಗಳ ಪ್ರಗತಿಯನ್ನು ಒಳಗೊಂಡಿದೆ.ಮುಖ್ಯಮಂತ್ರಿ ಯಡಿಯೂರಪ್ಪರವರು ರಾಜ್ಯದ ಪ್ರಗತಿಯ ದೃಷ್ಟಿಯಲ್ಲಿಟ್ಟುಕೊಂಡು ಜನಪರ ಬಜೆಟ್‍ನ ಮಂಡಿಸಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬಜೆಟ್‍ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಸ್ವಾಗತಾರ್ಹ ಮುಖ್ಯಮಂತ್ರಿ ಬಜೆಟ್‍ನಲ್ಲಿ ಮೀಸಲಿಟ್ಟ 1500ಕೋಟಿ ರೂ.ಗಳನ್ನು ಮುಸ್ಲಿಂ ಸಮುದಾಯದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಬಳಕೆಯಾಗುವಂತೆ ಮುಖ್ಯಮಂತ್ರಿಗಳು ಜಾಗೃತಿವಹಿಸಬೇಕು. ಮೇಲಾಗಿ ವಿಪಕ್ಷದವರು ಬಿಜೆಪಿಯು ಮುಸ್ಲಿಂರನ್ನು ನಿರ್ಲಕ್ಷಿಸುತ್ತಿದೆ ಎಂದು ವಿನಾಕಾರಣ ಆರೋಪಿಸುವುದರಲ್ಲಿ ಹುರುಳಿಲ್ಲ. ಕಂಪ್ಲಿಯ ಮಾಜಿ ಶಾಸಕ ಟಿ.ಎಚ್.ಸುರೇಶ್‍ಬಾಬು ಅವರು ಮುಸ್ಲಿಂ ಸಮುದಾಯದವರಿಗೆ ಪಕ್ಷದಲ್ಲಿ ವಿಶೇಷ ಸ್ಥಾನಮಾನ, ಸೌಲಭ್ಯಗಳನ್ನು ನೀಡುವ ಮೂಲಕ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಸೂಕ್ತ ಮಾನ್ಯತೆ ನೀಡಿದ್ದಾರೆ ಎಂದರು ಬಿಜೆಪಿ ಅಲ್ಪಸಂಖ್ಯಾತ ಕ್ಷೇತ್ರ ಘಟಕದ ಪದಾಧಿಕಾರಿಗಳಾದ ಶಂಕರ್‍ಸಿಂಗ್ ಕ್ಯಾಂಪಿನ ಎಂ.ಸಿ.ರಿಯಾಜ್, ಮುದ್ಗಲ್ ಶಬ್ಬೀರ್, ರಜಾಕ್, ಎ.ಉಸ್ಮಾನ್‍ಸಾಬ್, ಆರ್.ಇಮಾಂಸಾಹೇಬ್, ಶಂಶುದ್ದೀನ್ ಸೇರಿ ಅನೇಕರಿದ್ದರು.

ಸುದ್ದಿ ಓದಿ