ರೈತ ಸಂಘದ ಪದಾಧಿಕಾರಿಗಳು ಸತ್ಯಾಗ್ರಹಕ್ಕೆ 13ನೇ ದಿನ
ಇಂಡಿ13: ತಾಲೂಕಿನ ಸಮಗ್ರ ನೀರಾವರಿಗೆ ಆಗ್ರಹಿಸಿ ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದಲಿ ಜೆಡಿಎಸ್ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸೋಮವಾರ 13 ನೇ ದಿನೆಕ್ಕೆ ಕಾಲಿಟ್ಟಿದೆ.
ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಭೆಯನ್ನುದ್ದೇಶಿಸಿ ಕರ್ನಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಸುಮಾರು 15 ವರ್ಷಗಳ ಹಿಂದೆ ಉಚ್ಚನ್ಯಾಯಲವು ಆಲಿಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಎತ್ತರ ಮಾಡಿ ಎಂದು ಆದೇಶ ನೀಡಿದರೂ ಸಹ ಇಲ್ಲಿಯವರೆಗೆ ಹಲವಾರು ಸರಕಾರಗಳು ಆಡಳಿತ ನಡೆಸಿದರೂ ವಿಜಯಪುರ ಸಮಗ್ರ ನೀರಾವರಿ ಕನಸಾಗಿಯೇ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ, ಶ್ರೀಶೈಲಗೌಡ ಪಾಟೀಲ, ಮರೆಪ್ಪ ಗಿರಣಿವಡ್ಡರ್ ಮಾತನಾಡಿದರು ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ, ಸಿದ್ದು ಡಂಗಾ, ಶ್ರೀಮಂತ ಪೂಜಾರಿ, ಶರಣಗೌಡ ಪಾಟೀಲ, ಮಹಿಬೂಬ ಬೇನೂರ ಅನೇಕರು ಉಪಸ್ಥಿತರಿದ್ದರು.