ಶರಣ ಸಾಹಿತ್ಯ ಪರಿಷತ್ 133ನೇ ಮಹಾಮನೆ ಕಾರ್ಯಕ್ರಮ
ಲೋಕದರ್ಶನ ವರದಿ
ಕಂಪ್ಲಿ 26: ಇಲ್ಲಿನ ಗಂಗಾನಗರದ ಗಂಗಾ ಸಂಕೀರ್ಣದಲ್ಲಿ ಬುಧವಾರ ಸಂಜೆ ತಾಲೂಕು ಶರಣ ಸಾಹಿತ್ಯ ಪರಿಷತ್ 133ನೇಮಹಾಮನೆ ಕಾರ್ಯಕ್ರಮ ಜರುಗಿತು.
ಜೆಸಿಐ ಕಂಪ್ಲಿ ಸೋನಾದ ಕಾರ್ಯದರ್ಶಿ ಸಂತೋಷ್ ಕೊಟ್ರ್ಪ ಸೋಗಿ ಅವರು 'ಅಲ್ಲಮ ಪ್ರಭುಗಳವಚನ ವೈಶಿಷ್ಟ-್ಯ' ಕುರಿತು ವಿಶೇಷ ಉಪನ್ಯಾಸ ನೀಡಿ, ಅಲ್ಲಮಪ್ರಭುವಿನ ವಚನಗಳು ವೈಚಾರಿಕ ಪ್ರಜ್ಞೆಯ ಹಿನ್ನಲೆ ಹೊಂದಿವೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ವಿಶೇಷ ಕೊಡುಗೆಯಾಗಿದೆ. ಮಾಯೆ ಎಂಬುದು ಇಲ್ಲ ಮನದ ಆಸೆಗಳೇ ಮಾಯೆಯಾಗಿದ್ದು ಅನಾಚಾರಕ್ಕೆ ತಳ್ಳುತ್ತದೆ. ಅಲ್ಲಮನ ವೈಚಾರಿಕ ಪ್ರಜ್ಞೆ ವಚನಗಳಲ್ಲಿ ಸಾಕಾರಗೊಂಡಿದೆ ಎಂದು ಹೇಳಿದರು.
ಕಂಪ್ಲಿಯ ಸಾರ್ವಜನಿಕ ಹಿತಾಸಕ್ತಿ ಸಮಿತಿ ಅಧ್ಯಕ್ಷ ಕರೇಕಲ್ ಶಂಕ್ರ್ಪ ಮಾತನಾಡಿ, ವರ್ತಮಾನದ ಜಗದ ಭಯೋತ್ಪಾದನೆ, ಭ್ರಷ್ಠತೆ, ಅತ್ಯಾಚಾರ, ಹಿಂಸೆ ಗುಣಗಳು ಪ್ರಜ್ವಲಿಸಲು ಮಾನವೀಯ ಮೌಲ್ಯಗಳ ಕುಸಿತದ ಪರಿಣಾಮವಾಗಿದೆ. ಶರಣರ ದೃಷ್ಠಿಯಲ್ಲಿ ಧರ್ಮ, ಕೈಲಾಸ, ದೇವರ ಬಗ್ಗೆ ವಿಶೇಷ ಪರಿಕಲ್ಪನೆ ಹೊಂದಿದ್ದಾರೆ ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲೆ ವಚನಗಳನ್ನ ಕಂಠಸ್ಥಮಾಡಿಸುವ ಮೂಲಕ ಆಚಾರ ವಿಚಾರಗಳನ್ನು ಕಲಿಸಬೇಕು. ಆಶೆ ಮತ್ತು ಸಂಗ್ರಹ ಬುದ್ದಿ ತೊರೆದಲ್ಲಿ ಸಮಾಜದಲ್ಲಿ ಭ್ರಷ್ಠತೆಯನ್ನು ಹೋಗಲಾಡಿಸಬಹುದು ಎಂದರು.
ಮಡಿವಾಳ ಸಮಾಜದ ಅಧ್ಯಕ್ಷ ಮಡಿವಾಳ ಹುಲುಗಪ್ಪ, ಪರಿಷತ್ತಿನ ಪದಾಧಿಕಾರಿಗಳಾದ ಬಂಗಿ ದೊಡ್ಡ ಮಂಜುನಾಥ, ಕೆ.ಚಂದ್ರಶೇಖರ್, ಕವಿತಾಳ ಬಸವರಾಜ, ಎಸ್.ಡಿ.ಬಸವರಾಜ್, ಎಸ್.ಶ್ಯಾಮಸುಂದರ ರಾವ್, ಕೆ.ಯಂಕಾರೆಡ್ಡಿ, ಯೋಗಗುರು ಡಿ.ಮಹೇಶ್, ಯು.ಎಂ.ವಿದ್ಯಾಶಂಕರ್, ಶಂಕ್ರ್ಪ, ಅಮರನಾಥಶಾಸ್ತ್ರಿ ಇತರರಿದ್ದರು.