133 ಅರ್ಚಕರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಆಹಾರ ಕಿಟ್
ಹಗರಿಬೊಮ್ಮನಹಳ್ಳಿ 10: ತಾಲೂಕಿನ 133 ಹಿಂದೂ ದೇವಾಲಯಗಳ ಅರ್ಚಕರಿಗೆ ಹಿಂದೂ ಧಾಮರ್ಿಕ ದತ್ತಿ ಇಲಾಖೆಯಿಂದ ನೀಡಿದ ಅಹಾರ ಕಿಟ್ಗಳನ್ನು ಶಾಸಕ ಎಸ್.ಭೀಮಾನಾಯ್ಕ್ ಗುರುವಾರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ವಿತರಿಸಿದರು.ಅರ್ಚಕರಿಗೆ ಆಹಾರ ಕಿಟ್ ವಿತರಿಸಿ ಶಾಸಕ ಎಸ್.ಭೀಮಾನಾಯ್ಕ್ ಮಾತನಾಡಿ ಕೋವಿಡ್ ಎರಡನೇ ಅಲೆಯ ಅಬ್ಬರ ಕೇವಲ ಮೌಖಿಕವಾಗಿ ಮಾತ್ರ ಕಡಿಮೆಯಾಗಿದೆ,ಎಚ್ಚರ ತಪ್ಪಿದರೆ ಸೊಂಕಿನ ತೀವ್ರತೆ ದೊಡ್ಡ ಆಘಾತವಾಗಲಿದೆ,ಲಾಕ್ಡೌನ್ ಜೂನ್ 14ಕ್ಕೆ ಸಡಿಲಗೊಳ್ಳುವ ಸಾಧ್ಯತೆ ಇದೆ,ಹೆಚ್ಚು ಜನ ನೀಬಿಡ ಪ್ರದೇಶಗಳಲ್ಲಿ ದೇವಸ್ಥಾನಗಳು ಬರುವುದರಿಂದ ದೇವಾಲಯದ ಅರ್ಚಕರು ಭಕ್ತಾದಿಗಳಿಗೆ ಸಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಸೂಕ್ತವೆಂದರು.
ಗ್ರಾಮೀಣ ಭಾಗದವರಿಗೆ ಸೊಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ರ್ಯಾಪಿಡ್ ಸೇರಿದಂತೆ ಆರ್ಟಿಪಿಸಿಆರ್ ಪರೀಕ್ಷಯನ್ನು ಮಾಡಿಸುವಂತೆ ಕರೆ ನೀಡಿದರು,ಸಹಜವಾಗಿ ಕೆಮ್ಮು,ಶೀತ,ಜ್ವರ ಲಕ್ಷಣಗಳು ಕಂಡು ಬಂದರೆ ಶೀಘ್ರವೇ ತಲೂಕಾಸ್ಪತ್ರೆಗೆ ಭೇಟಿ ನೀಡಿ ಪರೀಕ್ಷ ಮಾಡಿಸಿಕೊಳ್ಳಿ ಅದನ್ನು ಬಿಟ್ಟು ಸ್ಥಳೀಯ ವೈದ್ಯರ ಬಳಿ ಅಥವಾ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆದರೆ ಸೊಂಕಿನ ತೀವ್ರತೆ ಹೆಚಾಗುವುದರ ಜೊತೆ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ, ತಾಲೂಕಾಸ್ಪತ್ರೆಯು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದು,ಚಿಕಿತ್ಸೆಯು ಉತ್ತಮವಾಗಿದೆ ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ತಿಳಿಸಿ, ಕ್ಷೇತ್ರವನ್ನು ಕೋವಿಡ್ ಮುಕ್ತ ಮಾಡಲು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕಿದೆ.
ಬಡ ಅರ್ಚಕರಿಗೆ ಸೂರು ಕಲ್ಪಿಸುವ ಮನವಿಗೆ ಸ್ಫಂದಿಸಿದ ಶಾಸಕರು ಗ್ರಾಮಗಳ ಅಭಿವೃಧ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಬಸವ ವಸತಿ ಯೋಜನೆಯಡಿ ಸೂರು ಕಲ್ಪಿಸುವ ಭರವಸೆಯನ್ನು ನೀಡಿದರು.ಇನ್ನು ಕೆಲ ದಿನಗಳಲ್ಲಿ ಅರ್ಚಕರಿಗೆ ಸ್ವಂತ ಖಚರ್ಿನಲ್ಲಿ ಕಿಟ್ ನೀಡುವುದಾಗಿಯೂ ತಿಳಿಸಿದರು.ಈ ಸಂಧರ್ಭದಲ್ಲಿ ತಹಶಿಲ್ದಾರ್ ಶರಣಮ್ಮ, ಟಿಹೆಚ್ಒ ಶಿವರಾಜ್, ಮುಖ್ಯ ವೈದ್ಯಾಧಿಕಾರಿ ಶಂಕರ ನಾಯ್ಕ್, ಪುರಸಭೆ ಅದ್ಯಕ್ಷೆ ಹಾಲ್ದಾಳ್ ಕವಿತಾ ವಿಜಯಕುಮಾರ, ಪುರಸಭೆ ಸದಸ್ಯ ಅಲ್ಲಾಬಕ್ಷ್, ಮುಖಂಡರಾದ ಹಾಲ್ದಾಳ್ ವಿಜಯಕುಮಾರ, ಡಿಶ್ ಮಂಜುನಾಥ್, ಪವಾಡಿ ಹನುಮಂತಪ್ಪ, ಬಾಲಕೃಷ್ಣ ಬಾಬು ಸೇರಿದಂತೆ ತಾಲೂಕಿನ ಅರ್ಚಕರು ಇದ್ದರು