ಬೈಲಹೊಂಗಲ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 12 ವಿದ್ಯಾರ್ಥಿಗಳು ಗೈರು: ಹೂಗಾರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 12 ವಿದ್ಯಾರ್ಥಿಗಳು ಗೈರು: ಹೂಗಾರ

ಬೈಲಹೊಂಗಲ 20: ಕೋವಿಡ್‌ ಆತಂಕದ ಮಧ್ಯೆಯೂ ಸರಕಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ತಾಲೂಕಿನಲ್ಲಿ ಒಟ್ಟು 4355 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು  ಗೈರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಗುರುನಾಥ ಹೂಗಾರ ಹೇಳಿದರು. 

ತಾಲೂಕಿನಲ್ಲಿ ಒಟ್ಟು 30 ಕೇಂದ್ರಗಳಿದ್ದು ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರತಿಯೊಂದು ಕೇಂದ್ರದಲ್ಲಿ ಓರ್ವ ವೈದ್ಯ, ಸ್ಟಾಪ ನರ್ಸ, ಇಬ್ಬರು ಅಂಗನವಾಡಿ ಕಾರ್ಯಕರ್ತೆಯರು, ಓರ್ವ ಪೊಲೀಸ್  ನಿಯೋಜಿಸಲಾಗಿತ್ತು. ಪ್ರತಿಯೊಂದು ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಥರ್ಮಲ ಸ್ರೀನಿಂಗಗೊಳಿಸಿ, ಪಲ್ಸ ಆಕ್ಸಿಮಿಟರ್ ಪರೀಕ್ಷೆಗೆ ಒಳಪಡಿಸಲಾಯಿತು. ವಿದ್ಯಾರ್ಥಿಗಳಿಗೆ ಮಾಸ್ಕ, ಸ್ಯಾನಿಟ್ರೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು.  ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೋಳಗಾಗದೇ ಧೈರ್ಯದಿಂದ ಪರೀಕ್ಷೆ ಬರೆಯುತ್ತಿರುವುದು ಕಂಡು ಬಂದಿತು. 


ಸುದ್ದಿ ಓದಿ