ವಿಜಯಪುರ

ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನ ದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನ ದಿನಾಚರಣೆ

ಆಲಮೇಲ 12: ಕನ್ನಡ ಸಾಹಿತ್ಯ ಪರಿಷತಿನ ಸಂಸ್ಥಾಪನ ದಿನಾಚರಣೆ ಕನ್ನಡ ಸಾಹಿತ್ಯ ಪರಿಷತು ಶತಮಾನ ಪೂರೈಸಿದ ಕನ್ನಡ ಪರ ಕೆಲಸ ಮಾಡುತ್ತಿರುವ ಸ್ವಾಯತತೇ ಸಂಸ್ಥೆ ಯಾಗಿ ಹೆಮ್ಮರವಾಗಿ ಬೆಳೆದಿದೆ ಎಂದು ಪ್ರೊ. ಗಂಗಾಧರ ಪತ್ತಾರ ಹೇಳಿದರು. ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕರ್ನಾಟಕದ ಕನ್ನಡ ಭಾಷೆಯ ನೆಲ ಜಲ, ಕನ್ನಡ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದವರು ಮೈಸೂರು ವಡೆಯರು. ಕನ್ನಡ ಸಾಹಿತ್ಯ ಪರಿಷತು ಕನ್ನಡಪರ ಕೆಲಸ ಮಾಡುತ್ತಾ ಬೆಳ್ಳಿ ಮಹೋತ್ಸವ, ರಜತ ಮಹೋತ್ಸವ, ಶತಮಾನೋತ್ಸವ ಪೂರೈಸಿದ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಸ್ವಾಯತ್ತತೆ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡು 111 ವರ್ಷ ಗಳು ಪೂರೈಸಿದೆ. ಮುಂದೆಯೂ ನಿರಂತರವಾಗಿ ಕನ್ನಡ ಪರವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು. ಅಳ್ಳೊಳ್ಳಿ ಮಠದ ಶ್ರೀಶೈಲಯ್ಯ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು, ಕಸಪ ಗೌರವ ಅಧ್ಯಕ್ಷ ಡಾ. ಸಂದೀಪ್ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಆಯುಬ ದೇವರಮನಿ, ಮೈಬೊಬ್ ಮಸಳಿ, ರವಿ ಬಾಡದಾಳ, ಅಶೋಕ ವಾರದ, ಶ್ರೀಶೈಲ ಮಠಪತಿ, ಶಶಿಧರ ನಯ್ಕೋಡಿ, ಪ್ರಕಾಶ ಜಿಂಗಡೆ, ಶಿವು ಮೇಲಿನಮನಿ ರಾಜು ಮೇತ್ರಿ ಮುಂತಾದವರು ಇದ್ದರು. 


ಸುದ್ದಿ ಓದಿ