ಬಳ್ಳಾರಿ

ವರಸಿದ್ಧಿ ವಿನಾಯಕ ದೇವಸ್ಥಾನದ 10ನೇ ವಾರ್ಷಿಕೋತ್ಸವ ಆಚರಣೆ

ವರಸಿದ್ಧಿ ವಿನಾಯಕ ದೇವಸ್ಥಾನದ 10ನೇ ವಾರ್ಷಿಕೋತ್ಸವ ಆಚರಣೆ

ಬಳ್ಳಾರಿ 31: ಬಳ್ಳಾರಿ ನಗರದ 20ನೇ ವಾರ್ಡ್‌ನಲಿ ್ಲಸತ್ಯ ನಾರಾಯಣಪೇಟೆಯ ಗೊಲ್ಲ ನರಸಪ್ಪ ಕಾಲೋನಿಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಬಿ ಸತ್ಯನಾರಾಯಣ ಮತ್ತು ಭಕ್ತ ಮಂಡಳಿವತಿಯಿಂದ ಇಂದು ಭಾನುವಾರ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಅಚರಿಸಲಾಯಿತು. ಇದರ ಪ್ರಯುಕ್ತವಾಗಿ ದೇವಸ್ಥಾನದಲ್ಲಿ ಪ್ರಾತಃಕಾಲ ಐದು ಗಂಟೆಗೆ ಸುಪ್ರಬಾತ ಸೇವೆ, ಐದು ಗಂಟೆ ಮೂವತ್ತು ನಿಮಿಷಕ್ಕೆ ಪಂಚಾಮೃತ ಅಭಿಷೇಕ ಮತ್ತು ಹತ್ತು ಗಂಟೆಗೆ ಗಣಪತಿ ಹೋಮ, ನವಗ್ರಹ ಹೋಮ ಮತ್ತು ಲಕ್ಷ್ಮಿನಾರಾಯಣ ಹೋಮವನ್ನು ನೆರವೇರಿಸಲಾಯಿತು. ಮತ್ತು ಮದ್ಯಾಹ್ನ  ಹನ್ನೆರಡು ಗಂಟೆಗೆ ಪೂರ್ಣಾಹುತಿ ಮತ್ತು ಹನ್ನೆರಡು ಗಂಟೆ ಮೂವತ್ತು ನಿಮಿಷಕ್ಕೆ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದಾದಿಗಳ ವಿನಿಯೋಗ ಮಾಡಲಾಯಿತು.  

ಸಂಜೆ ಐದು ಗಂಟೆಯಿಂದ ಆರು ಗಂಟೆಗೆವಯರೆಗೆ ಪಲ್ಲಕ್ಕಿ ಉತ್ಸವವನ್ನು ಮತ್ತು ದೇವಸ್ಥಾನದಲ್ಲಿ ನಡೆದ ಎಲ್ಲಾ ಪೂಜೆ ವಿಧಿ ವಿಧಾನ ಕಾರ್ಯಕ್ರಮಗಳನ್ನು ಆಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ ಆಚಾರ್ ಇವರು ನೆರವೇರಿಸಿದರು.  ಮದ್ಯಾಹ್ನ ಒಂದು ಗಂಟೆಯಿಂದ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನ್ನದಾನ ಪ್ರಸಾದವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಆಗಮಿಸಿ ಸಕಲ ಪೂಜೆ ವಿಧಿ ವಿಧಾನಗಳಲ್ಲಿ ಭಾಗವಹಿಸಿ  ವರಸಿದ್ಧಿ ವಿನಾಯಕ ಮತ್ತು  ಪಂಚಮುಖಿ ಆಂಜಿನೇಯಸ್ವಾಮಿಯ ಕೃಪೆಗೆ ಪಾತ್ರರಾದರು. 


ಸುದ್ದಿ ಓದಿ