ಮುಂದಗೋಡ

108 ಆರೋಗ್ಯ ಕವಚದಲ್ಲಿ ಸುಸೂತ್ರ ಹೆರಿಗೆ

108 ಆರೋಗ್ಯ ಕವಚದಲ್ಲಿ ಸುಸೂತ್ರ ಹೆರಿಗೆ

ಮುಂಡಗೋಡ:ತಾಲೂಕಿನ ಗುಂಜಾವತಿ ಗ್ರಾಮದ ಮಹಿಳೆಯೊಬ್ಬರಿಗೆ 108ಆರೋಗ್ಯ ಕವಚದಲ್ಲಿ ಮಂಗಳವಾರ ಹೆರಿಗೆಯಾಗಿದೆ. ಆಶಾಬಿ ಘಾಡಿ 108 ಆರೋಗ್ಯ ಕವಚದಲ್ಲಿ ಮಗುವಿಗೆ ಜನ್ಮ ನೀಡಿದವರು. ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಇವರ ಕುಟುಂಬದವರು ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಗೌರಮ್ಮ ಕಮತಗಿ ಅವರಿಗೆ ತಿಳಿಸಿದ್ದಾರೆ. 108 ಆರೋಗ್ಯ ಕವಚಕ್ಕೆ ಕರೆ ಮಾಡಿ ಗೌರಮ್ಮ ಮಾಹಿತಿ ನೀಡಿದ್ದಾರೆ.    

ಸ್ಥಳಕ್ಕೆ ಧಾವಿಸಿದ 108 ಸಿಬ್ಬಂದಿ ಗರ್ಭಿಣಿಯನ್ನು ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗಮಧ್ಯೆ ಹೆರಿಗೆ ನೋವು ಹೆಚ್ಚಾದ ಕಾರಣ ರಸ್ತೆ ಬದಿಯಲ್ಲಿ ಆಂಬುಲೆನ್ಸ್‌ ನಿಲ್ಲಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಇಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದು ಕಿರಿಯ ಆರೋಗ್ಯ ಸಹಾಯಕಿ ಗೌರಮ್ಮ ಕಮತಗಿ ಮತ್ತು ಚಾಲಕ ಪ್ರಕಾಶ ಬಿ. ಸುಸೂತ್ರ ಹೆರಿಗೆಗೆ ಸಹಾಯ ಮಾಡಿದರು ಎಂದು 108 ಆಂಬುಲೆನ್ಸ್‌ನ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರು ತಿಳಿಸಿದರು. 


ಸುದ್ದಿ ಓದಿ