ಮಾಧವಾನಂದ ಪ್ರಭುಗಳ 107 ನೇ ಜಯಂತ್ಯೋತ್ಸವ
ಜಮಖಂಡಿ 05: ತಾಲೂಕಿನ ಸಾವಳಗಿಯ ಸ್ವಾತಂತ್ಯ್ರ ಸೇನಾನಿ ದಿ.ರಾಯಪ್ಪ ಬೆಳಗಲಿ ಪ್ರತಿಷ್ಠಾನದ ಆಶ್ರಯದಲ್ಲಿ ನ.6 ಭಾನುವಾರ ಬೆಳಿಗ್ಗೆ 9 ಕ್ಕೆ ಮಾಧವಾನಂದ ಪ್ರಭುಗಳ 107 ನೇ ಜಯಂತ್ಯೋತ್ಸವ ಅಂಗವಾಗಿ ತಾಲೂಕಾ ಮಟ್ಟದ ಭಜನಾ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ಬೆಳಗಲಿ ತೋಟದ ಗಿರೀಶ ಆಶ್ರಮದಲ್ಲಿ ನಡೆಯಲಿದೆಂದು ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವದಲ್ಲಿ ತಾಲೂಕಿನಾದ್ಯಂತ ಸುಮಾರು 500 ಕ್ಕೂ ಹೆಚ್ಚು ಭಜನಾ ಕಲಾವಿದರು, ಜಾನಪದ ಕಲಾವಿದರು ಪಾಲ್ಗೊಳ್ಳಲಿದ್ದು, ಅವರೆಲ್ಲರೂ ಮಾಧವಾನಂದ ಪ್ರಭುಗಳ ಭಕ್ತರಾಗಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಇಂಚಗೇರಿಮಠದ ರೇವಣಸಿದ್ದೇಶ್ವರ ಮಹಾರಾಜರು ಹಾಗೂ ಕಟಗೇರಿಯ ಅವಜೀಕರಮಠ ಮಹಾದೇವ ಮಹಾರಾಜರು ವಹಿಸುವರು. ಸುಶೀಲಕುಮಾರ ಬೆಳಗಲಿ ಅಧ್ಯಕ್ಷತೆ ವಹಿಸಲಿದ್ದು, ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ ಉದ್ಘಾಟಿಸಲಿದ್ದಾರೆ. ಡಾ.ಗೋಪಾಲಕೃಷ್ಣ ಹವಾಲ್ದಾರ, ಸಿದ್ದು ಉಪ್ಪಲದಿನ್ನಿ, ನಾಗರಾಜ ಯತ್ನಾಳ, ಮುಕುಂದ ಬೆಳಗಲಿ, ಲಕ್ಷ್ಮೀಬಾಯಿ ಕುಳಲಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಗೋಷ್ಠಿಯಲ್ಲಿ ಪ್ರದೀಪ ಮೆಟಗಿಡ್ಡ, ಬಿ.ಜಿ.ಪಾಟೀಲ, ಸುನೀಲ ಹಿಪ್ಪರಗಿ,ಅರುಣ ದೇಮಾರಿಲಿ, ಬಸವರಾಜ ನ್ಯಾಮಗೌಡ, ವೆಂಕಟೇಶ ಗುರುಜಿ, ರಾಚಪ್ಪ ಕುರಿ ಅನೇಕರಿದ್ದರು.