ತಾಳಿಕೋಟಿ

ಘನಮಠೇಶ್ವರ ಶಿಕ್ಷಣ ಸಂಸ್ಥೆ ಎಸ್‌.ಎಸ್‌.ಎಲ್‌.ಸಿಯಲ್ಲಿ ಶೇ.100ರಷ್ಟು ಫಲಿತಾಂಶ

ಘನಮಠೇಶ್ವರ ಶಿಕ್ಷಣ ಸಂಸ್ಥೆ ಎಸ್‌.ಎಸ್‌.ಎಲ್‌.ಸಿಯಲ್ಲಿ ಶೇ.100ರಷ್ಟು ಫಲಿತಾಂಶ

ತಾಳಿಕೋಟೆ: ತಾಲೂಕಿನ ಮಿಣಜಗಿ ಕ್ರಾಸ್‌ದಲ್ಲಿರುವ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಘನಮಠೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಾಲಿನ ಎಸ್‌.ಎಸ್‌.ಎಲ್‌.ಸಿಯಲ್ಲಿ 100 ಕ್ಕೆ 100ರಷ್ಟು ಫಲಿತಾಂಶ ಪಡೆದಿದೆ. 

 ಪರೀಕ್ಷೆಗೆ ಹಾಜರಾದ ಒಟ್ಟು 46 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಡಿಸ್ಟಿಂಕ್ಷನ, 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಸಪ್ಪ ಹಡಲಗೇರಿ 613/625 (ಶೇ.98.08) ಹಾಗೂ ಸಚೀನ ನೆಲ್ಲಗಿ 613/625 (ಶೇ.98.08) ಪ್ರಥಮ, ಸುದೀಪ ಯಾಡಗಿ 604/625(ಶೇ.96.6) ದ್ವಿತೀಯ, ಅಮೃತಾ ಪಾಟೀಲ 601/625 (ಶೇ.96.16) ಹಾಗೂ ಶಿವರಾಜ ಬಲವಂತರಾಯ ಕಂಠಿ 601/625 (ಶೇ.96.16) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ 03 ವಿದ್ಯಾರ್ಥಿಗಳು, ಇಂಗ್ಲೀಷ 04, ಹಿಂದಿ 03 ವಿದ್ಯಾರ್ಥಿಗಳು, ಗಣಿತ 04 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. 

ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕನಕ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಸಾಲಿನ ಎಸ್‌.ಎಸ್‌.ಎಲ್‌.ಸಿಯಲ್ಲಿ 100 ಕ್ಕೆ 100ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 67 ವಿದ್ಯಾರ್ಥಿಗಳಲ್ಲಿ  27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ, 40 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಿವಶರಣ ಝಳಕಿ 609/625  (ಶೇ.97.44) ಪ್ರಥಮ, ಪ್ರಸಾದ ಹಚ್ಚಡ 607/625(ಶೇ.97.12) ದ್ವಿತೀಯ, ಬಸವರಾಜ ಬಳಬಟ್ಟಿ 603/625 (ಶೇ.96.4) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ 04 ವಿದ್ಯಾರ್ಥಿಗಳು, ಇಂಗ್ಲೀಷ 01 , ಹಿಂದಿ 03 ವಿದ್ಯಾರ್ಥಿಗಳು, ಗಣಿತ 01 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಶಿವಶರನ ಸಜ್ಜನ, ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ