ಸರ್ಕಾರಕ್ಕೆ 100 ದಿನ ಧಾರವಾಡ ಜಿಲ್ಲೆಯಲ್ಲಿ ಸಾಕಾರಗೊಳ್ಳುತ್ತಿರುವ ಗ್ಯಾರಂಟಿ ಯೋಜನೆಗಳು
- ಮಂಜುನಾಥ ಸುಳ್ಳೊಳ್ಳಿ
ಹಿರಿಯ ಸಹಾಯಕ ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಧಾರವಾಡ
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತ್ವದಡಿಯಲ್ಲಿ ರಾಜ್ಯದ ಬಡವರು, ದುರ್ಬಲರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನತೆಯ ಶ್ರೀಯೋಭಿವೃದ್ಧಿಯ ಉದ್ದೇಶದಿಂದ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಅಗಸ್ಟ್ 28 ಕ್ಕೆ 100 ದಿನ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಚುನಾವಣಾ ಪೂರ್ವದಲ್ಲಿ ರಾಜ್ಯದಲ್ಲಿ ನಾಗರಿಕರಿಗೆ ನೀಡಿದ ಬರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ, ಜನ ಸಾಮಾನ್ಯರ ಮೊಗದಲ್ಲಿ ನೆಮ್ಮದಿ ಹಾಗೂ ಸಂತಸ ಮೂಡುವಂತೆ ಮಾಡಿದೆ.
ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಅನ್ನ, ಆರೋಗ್ಯ, ಶಿಕ್ಷಣ ಉದ್ಯೋಗ ಸಿಗಬೇಕೆಂಬ ಅಂತಃಕರಣದ ಕಾಳಜಿಯ ದ್ಯೋತಕವಾಗಿ ರಾಜ್ಯ ಸರ್ಕಾರ ಜನಕಲ್ಯಾಣ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರ ಭಾವನೆಗಳನ್ನು ಅರಿತು ರಾಜ ಸರ್ಕಾರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ವಚನದಂತೆ ಐದು ಜನಪರ ಗ್ಯಾರಂಟಿ ವಾಗ್ದಾನಗಳನ್ನು ಹಂತ ಹಂತವಾಗಿ ಪೂರೈಸುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನಸಾಮಾನ್ಯರು ಅರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಯೋಜನೆಗಳನ್ನು ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಸೀಮಿತಗೊಳಿಸಿಲ್ಲ. ಯಾವುದೆ ಜಾತಿ, ಮತ, ಭಾಗಫ ಎಂಬ ಭೇದವಿಲ್ಲದೆ, ಸರ್ವರಿಗೂ ಮತ್ತು ಎಲ್ಲಾ ಸಮುದಾಯದವರಿಗೂ ಈ ಯೋಜನೆಗಳು ಅನ್ವಯವಾಗುತ್ತವೆ. ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಬಲೀಕರಣವನ್ನು ಅರ್ಥವತ್ತಾಗಿ ಅನುಷ್ಠಾನಗೊಳಿಸುವ ಗ್ಯಾರಂಟಿಯನ್ನು ಈ ಯೋಜನೆಗಳು ನೀಡುತ್ತವೆ.
ಧಾರವಾಡ ಜಿಲ್ಲೆಯಲ್ಲಿ ಸರಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳನ್ನು ಸರಕಾರವು ಉತ್ತಮವಾಗಿ ಅನುಗಣ್ಠನಗೊಳಿಸುತ್ತಿದೆ.
ಮಹಿಳಾ ಸಬಲೀಕರಣಕ್ಕಾಗಿ ಸಹಕಾರಿಯಾಗಲಿರುವ ಶಕ್ತಿ ಯೋಜನೆ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದೆ. ಇದರಿಂದಾಗಿ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಉಚಿತ ಪ್ರಯಾಣದ ಸೌಲಭ್ಯ ಪಡೆದುಕೊಳ್ಳುತ್ತಿರುವ ಫಲಾನುಭವಿಗಳು ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಮಹಿಳೆಯರು ಕುಟುಂಬ ಸಮೇತರಾಗಿ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಮಾಡಿ ಪುನಿತರಾಗುತ್ತಿದ್ದಾರೆ. ಬಡ ಹಾಗೂ ದುಡಿಯುವ ಹೆಣ್ಣುಮಕ್ಕಳಿಗೆ ಈ ಯೋಜನೆ ವರದಾನವಾಗಿದೆ. ಶಕ್ತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 1,51,36,760 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಒಟ್ಟು 30,77,70,492 ಕೋಟಿ ಮೌಲ್ಯದ ಟಿಕೇಟ್ ನೀಡಲಾಗಿರುತ್ತದೆ.
ಪ್ರತಿ ಮನೆ ಒಡತಿಗೆ ಮಾಹೆಯಾನ ರೂ.2,000/- ನೀಡುವ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕಾರ್ಯ ಆರಂಭಗೊಂಡಿದೆ. ಜಿಲ್ಲೆಯ ಒಟ್ಟು 3,82,523 ಫಲಾನುಭವಿಗಳ ಪೈಕಿ ಜುಲೈ 31, 2023 ರವರೆಗೆ 2,52,280 ಫಲಾನುಭವಿಗಳ ವಿವರಗಳನ್ನು ನೋಂದಣಿ ಮಾಡಲಾಗಿದೆ.
ಮಹಾತ್ಮಾ ಗಾಂಧೀಜೀಯವರು ಸ್ವರಾಜ್ಯದ ಕನಸು ಕಂಡಿದ್ದರು. ಮಹಿಳೆಯರು ಮದ್ಯರಾತ್ರಿಯಲ್ಲಿಯೂ ನಿರ್ಭಯವಾಗಿ ಓಡಾಡಬೇಕೆಂದು ಬಯಸಿದ್ದರು. ಮಹಿಳಾ ಸ್ವಾತಂತ್ರ್ಯಕ್ಕೆ ಅನನ್ಯ ಪ್ರಾಶಸ್ತ್ಯ ನೀಡಿದ್ದರು. ಅವರ ಗ್ರಾಮಸ್ವರಾಜ್ಯ, ಮಹಿಳಾ ಸ್ವಾತಂತ್ರ್ಯದ ಕನಸು ದೇಶದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾಕಾರಗೊಳ್ಳುತ್ತಿದೆ.
ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳಿಂದ ನಮ್ಮ ರಾಜ್ಯದ ಮಹಿಳೆಯರಿಗೆ ಆರ್ಥಿಕ ಸಮೃದ್ಧಿಯ ದಿನಗಳು ಒದಗಿ ಬಂದಿದ್ದು, ಮಹಿಳೆಯರು ಆತ್ಮವಿಶ್ವಾಸದ ಹೆಜ್ಜೆ ಇಡುವಂತಾಗಿದೆ.
ಸ್ವಾತಂತ್ರ್ಯೋತ್ಸವದ ನಂತರ ಯಾವುದೇ ಯೋಜನೆಗೂ ದೊರೆಯದಷ್ಟು ಅತ್ಯುತ್ತಮ ಪ್ರತಿಕ್ರಿಯೆ ಸಕಾರಾತ್ಮಕ ಸ್ಪಂದನೆ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಲಭಿಸಿದೆ. ತನ್ಮೂಲಕ ಮಹಿಳೆ ಸಶಕ್ತಳಾಗುವತ್ತ ಮುನ್ನಡೆದಿದ್ದಾಳೆ. ದೇಶ ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಾಗುತ್ತಿರುವಾಗ ಮಹಿಳೆಯರ ಸಹಭಾಗಿತ್ವಕ್ಕೆ ಈ ಯೋಜನೆ ಹೊಸ ಭಾಷ್ಯ ಬರೆದಿದೆ. ಮಹಿಳೆ ಗ್ರಾಮ ಸ್ವರಾಜ್ಯ ನಿರ್ಮಾಣಕ್ಕಾಗಿ ತನ್ನ ಪಯಣ ಆರಂಭಿಸಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ಸಂಪರ್ಕ ಸೇತುವಾಗಿ ಮಹಿಳೆಯು ಹೊರಹೊಮ್ಮಲಿದ್ದಾಳೆ. ಇಂತಹ ಮಹತ್ವದ ಸುಧಾರಣೆಗೆ, ಬದಲಾವಣೆಗೆ ಸರ್ಕಾರ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆ ಮೂಲಕ ವೇದಿಕೆ ಒದಗಿಸಿದೆ.
ವಿದ್ಯುತ್ ಬಳಕೆದಾರರಿಗೆ ಗರಿಷ್ಟ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆ ಆರಂಭಗೊಂಡಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು ಪ್ರತಿ ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯುನಿಟ್ ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23 ರ ಬಳಕೆಯ ಆಧಾರದನ್ವಯ) ಯುನಿಟ್ಗಳ ಮೇಲೆ ಶೇಕಡಾ 10 ರಷ್ಟು ಹೆಚ್ಚಿನ ವಿದ್ಯುತ್ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯುನಿಟ್ಗಳ ಬಳಕೆಯನ್ನು ಮೀರಿದ ಗ್ರಾಹಕರ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲಾಗುವುದು. ಈ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 5,44,181 ಗೃಹ ಬಳಕೆದಾರರಿದ್ದು, ಇದರಲ್ಲಿ 4,18,250 ಗ್ರಾಹಕರು ಈಗಾಗಲೇ ನೋಂದಣಿ ಮಾಡಿಸಿಕೊಂಡಿರುತ್ತಾರೆ.
ರಾಜ್ಯದಲ್ಲಿ ಯಾರೂ ಸಹ ಹಸಿವಿನಿಂದ ಬಳಲದಂತೆ ಕ್ರಾಂತಿಕಾರಿ ಅನ್ನಭಾಗ್ಯ ಯೋಜನೆ ತಂದಿರುವ ಸರ್ಕಾರ ನಮ್ಮದು. ಅಂತ್ಯೋದಯ ಯೋಜನೆಯಲ್ಲಿ ಪ್ರತಿ ಪಡಿತರ ಚೀಟಿಗೆ 35 ಕೆಜಿಯಂತೆ ಮತ್ತು ಪ್ರತಿ ಬಿಪಿಎಲ್ (ಆಧ್ಯತಾ) ಕುಟುಂಬದ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ.ಯಂತೆ ಆಹಾಧಾನ್ಯ ಉಚಿತವಾಗಿ ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರಸಕ್ತ 29,784 ಅಂತ್ಯೋದಯ ಪಡಿತರ ಚೀಟಿಗಳು ಹಾಗೂ 3,57,340 ಆಧ್ಯತಾ ಕುಟುಂಬ ಅಂತೂ ಒಟ್ಟು 3,87,124 ಪಡಿತರ ಚೀಟಿಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲಾಗುತ್ತಿದೆ. ಅಲ್ಲದೇ 29,458 ನೊಂದಾಯಿತ ಎಪಿಎಲ್ ಪಡಿತರ ಚೀಟಿಗಳಿಗೆ ಪ್ರತಿ ಕೆಜಿಗೆ ರೂ.15/- ರ ದರದಲ್ಲಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,87,124 ಪಡಿತರ ಚೀಟಿಗಳು ಇದ್ದು, ಸರ್ಕಾರ ನಿಗದಿಪಡಿಸಿದ ಅರ್ಹ ಫಲಾನುಭವಿಗಳಿಗೆ ನಿಗದಿಪಡಿಸಿದ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ ಪ್ರತಿ ಸದಸ್ಯರಿಗೆ ರೂ.170/- ಒಟ್ಟು ರೂ.16,67,92,780/-ಗಳನ್ನು ಈಗಾಗಲೇ ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.
ಜಿಲ್ಲೆಯಲ್ಲಿ 3,87,124 ಆಧ್ಯತಾ ಪಡಿತರ ಚೀಟಿಗಳಿಗೆ ಅನುಗುಣವಾಗಿ ಒಟ್ಟು 13,45,504 ಪಡಿತರ ಸದಸ್ಯರಿದ್ದು, ಪಡಿತರ ಚೀಟಿಗಳಿಗೆ ಆಧಾರ ಸಂಖ್ಯೆ ಜೋಡಿಸಲಾಗಿದ್ದು, ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ ನೇರವಾಗಿ ಹಣ ಅಥವಾ ಉಚಿತ ವಿದ್ಯುತ್, ಅಕ್ಕಿ, ಬಸ್ ಪಾಸ್ನಿಂದ ಹಣ ಉಳಿದರೆ ಅದನ್ನು ಅವರು ಅಗತ್ಯ ವಸ್ತುಗಳ ಖರೀದಿಗೆ ಬಳಸುತ್ತಾರೆ. ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ವೆಚ್ಚ ಮಾಡಲು ಇದರಿಂದ ಸಾಧ್ಯವಾಗಲಿದೆ. ಮಾರುಕಟ್ಟೆಯಲ್ಲಿ ಹಣದ ವಹಿವಾಟು ಹೆಚ್ಚಾದಂತೆಲ್ಲಾ ಉತ್ಪಾದನೆ, ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಸರಪಳಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹಸಿದವರಿಗೆ ಅನ್ನ ಹಾಕುವುದೇ ನಮ್ಮ ಧರ್ಮ. ಬಡವರಿಗೆ ಕೊಟ್ಟರ ಹೊರೆ, ಕಾರ್ೊರೇಟ್ ಬಂಡವಾಳಿಗರ ಸಾಲಮನ್ನಾ ಮಾಡಿದರೆ ತಪ್ಪಿಲ್ಲ ಎಂಬ ನಿಲುವು ವಿತಂಡವಾದ. ದೇಶದಲ್ಲಿ ಹೆಚ್ಚಿನ ತೆರಿಗೆ ಪರೋಕ್ಷವಾಗಿ ಜನಸಾಮಾನ್ಯರ ಮೂಲಕವೇ ಸಂಗ್ರಹವಾಗುತ್ತದೆ. ಈ ಜನಸಾಮಾನ್ಯರ ನೆಮ್ಮದಿಯ ಬದುಕು ಕಟ್ಟಲು ನೆರವಾಗುವುದು ನಮ್ಮ ಕರ್ತವ್ಯ. ಅವರಿಗೆ ನೀಡಲಾಗುವ ಯೋಜನೆಗಳು ಉಚಿತವಲ್ಲ, ಬದಲಿಗೆ ಅವರ ಹಕ್ಕು ತೆರಿಗೆ ಕಟ್ಟುತ್ತಿರುವ ಜನಸಾಮಾನ್ಯರ ಯೋಗಕ್ಷೇಮ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ, ರಾಜ್ಯದ ಜನತೆ ಕಟ್ಟಿದ ತೆರಿಗೆ ಹಣಕ್ಕೆ ಸರ್ಕಾರ ತನ್ನ ಭದತ್ಯೆಯನ್ನು ತೊರಿಸುತ್ತಿದೆ.ಇದರ ಅಂಗವಾಗಿ ಗ್ಯಾರಂಟಿ ಯೋಜನೆಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ.
ಗೃಹಜ್ಯೇತಿ, ಶಕ್ತಿ, ಅನ್ನಭಾಗ್ಯ ಜೋತೆಗೆ ಜನಸಾಮಾರನ್ಯರ ಬದುಕಿನಲ್ಲಿ ಸುಭತ್ರೆತೆಯ ಭಾವನೆಯನ್ನು ಮೂಡಿಸಿದೆ.
ಗೃಹಲಕ್ಮೀ ಯೋಜನೆಗೆ ಮೈಸೂರಿನಲ್ಲಿ ಅಗಸ್ಟ್ 30 ರಂದು ಚಾಲನೆ ದೊರೆಯಲಿದೆ.
ಜನಪರ ಆಡಳಿತವನ್ನೇ ಧೈಯವಾಗಿಟ್ಟುಕೊಂಡ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಸಂವಿಧಾನದತ್ತವಾದ ‘ಸಮ ಸಮಾಜ’ ನಿರ್ಮಾಣದ ಆಶಯ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂಬ ಸ್ಪಷ್ಟ ಸಂದೇಶ, ಈ ಯೋಜನೆಗಳ ಜಾರಿ ಮೂಲಕ ಕರ್ನಾಟಕದ ಜನತೆಗೆ ತಲುಪಿದೆ. ಸರ್ಕಾರ ಜನಪರವಾದ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಹಗಲಿರಳು ಶ್ರಮಿಸುತ್ತಿದೆ. ಎಲ್ಲ ರಂಗಗಳಲ್ಲೂ ತನ್ನದೇ ಛಾಪನ್ನು ಮೂಡಿಸುತ್ತಿರುವ ಕರ್ನಾಟಕದ ಉತ್ತಮ ಮಾದರಿಗಳತ್ತ ಈಗ ದೇಶವೇ ನೋಡುವಂತಾಗಿದೆ.
ಫಲಾನುಭವಿಗಳ ಮಾತು:
1) ಶಕ್ತಿ ಯೋಜನೆ ನಿಜಕ್ಕೂ ಮಹಿಳೆಯರಲ್ಲಿ ಶಕ್ತಿ ತುಂಬಿದೆ. ಇದರಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಬಸ್ಸನ ಬಹಳಷ್ಟು ದರವನ್ನು ಭರಿಸಲು ಒಂದೊತ್ತಿನ ಊಟವನ್ನೇ ತೊರೆಯುವ ಪರಿಸ್ಥಿತಿ ಇತ್ತು. ಈಗ ಶಕ್ತಿ ಯೋಜನೆಯಿಂದ ಎಲ್ಲಾ ಮಹಿಳೆಯರು ನೆಮ್ಮದಿಯಿಂದ ಪ್ರಯಾಣಿಸಲು ಸಾಧ್ಯವಾಗಿದೆ. - ಶ್ರೀಮತಿ ಮಂಜುಳಾ ಕಂಪ್ಲಿ, ಶಿವಶಕ್ತಿ ನಗರ, ಧಾರವಾಡ.
2) ಹುಬ್ಬಳ್ಳಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ನಾನು ಪ್ರತಿ ದಿನ ಮಾಳಮಡ್ಡಿ ದಿಂದ ಪ್ರಯಾಣಿಸಲು ಮಾಸಿಕ ಬಸ್ ಪಾಸ್ ಮಾಡಿಕೊಂಡಿದ್ದೇನೆ. ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ನನಗೆ ಪ್ರತಿ ತಿಂಗಳು ಹಣ ಉಳಿತಾಯವಾಗುತ್ತಿದೆ.- ಶ್ರೀಮತಿ ರಂಜಿತಾ ಕೊಟಬಾಗಿಕರ, ಮಾಳಮಡ್ಡಿ, ಧಾರವಾಡ
3) ಗೃಹಜ್ಯೋತಿ ಯೋಜನೆಯಿಂದ ನಮಗೆ ತುಂಬಾ ಸಹಾಯವಾಗಿದೆ ಒಂದೊಂದು ಸಾರಿ ಕರೆಂಟ್ ಬಿಲ್ ಕಟ್ಟುವುದಕ್ಕೂ ನಮಗೆ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ಗೃಹಜ್ಯೋತಿ ಯೋಜನೆಯಿಂದ ನಮಗೆ ಅಗಸ್ಟ್ ತಿಂಗಳ ಶೂನ್ಯ ಬಿಲ್ ಬಂದಿದೆ ಇದರಿಂದ ನಮಗೆ ತುಂಬಾ ಸಹಾಯವಾಗಿದೆ- ಮಲ್ಲಪ್ಪ ಗೋಕಾವಿ, ಶ್ರೀರಾಮ ನಗರ, ಧಾರವಾಡ
4) ಮಳೆ ಆಶ್ರಿತ ಜಮೀನು ಹೊಂದಿರುವ ನಾವು ಕುಟುಂಬಕ್ಕೆ ಅಕ್ಕಿಯನ್ನು ಖರೀದಿಸಬೇಕಾಗುತ್ತದೆ ಇದರಿಂದ ನನಗೆ ಹೆಚ್ಚು ಹಣ ಖರ್ಚಾಗುತ್ತಿದೆ ಇದೀಗ ಸಕಾರ ನಮ್ಮಂತವರಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ನೀಡಲು ಮುಂದಾಗಿದ್ದು ಸಂತಸ ತಂದಿದೆ - ಪ್ರಶಾಂತ ಕಾಳೆ ಹುಬ್ಬಳ್ಳಿ
- * * * -