ಕುವೆಂಪು ಸಂಸ್ಥೆಯ ಪಿಯು ಕಾಲೇಜಿಗೆ ಶೇ.100 ಫಲಿತಾಂಶ
ತಾಳಿಕೋಟೆ :ಸಮೀಪದ ಬಳಗಾನೂರ ಕ್ರಾಸ್ದಲ್ಲಿರುವ ಕುವೆಂಪು ವಿದ್ಯಾ ಸಂಸ್ಥೆ ಎಂಎಂಎಸ್ಏ ಪದವಿ ಪೂರ್ವ ಕಾಲೇಜದ ದ್ವೀತಿಯ ಪಿಯುಸಿ ಫಲಿತಾಂಶವು ವಿಜ್ಞಾನ ವಿಭಾಗದಲ್ಲಿ ಶೇ.100 ಆಗಿದೆ.
ವಿಜ್ಞಾನ ವಿಭಾಗದಲ್ಲಿ ಪರಿಕ್ಷೆಗೆ ಕುಳಿತ 66 ವಿದ್ಯಾರ್ಥಿಗಳಲ್ಲಿ ಅತ್ಯುನತಶ್ರೇಣಿಯಲ್ಲಿ 38 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 28 ವಿದ್ಯಾರ್ಥಿಗಳು ತೆರ್ಗೇಡೆಯಾಗುವ ಮೂಲಕ ಶೇ,100 ರಷ್ಟು ಫಲಿತಾಂಶ ಬಂದಿದೆ.
ಕಾಲೇಜಿಗೆ ಬಸಮ್ಮ ಜುಮ್ಮಣ್ಣ ಪೂಜಾರಿ 570(ಶೇ.95.00) ಅಂಕಗಳನ್ನು ಪಡೆಯುವ ಮೂಲಕ ಪ್ರಥಮ, ದಿವ್ಯಾ ರಾಠೋಡ 564 (ಶೇ.94.00) ಅಂಕಗಳು ಪಡೆದು ದ್ವೀತಿಯ, ಬಿಬಿಐಶಾ 558(ಶೇ 93.00) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪಿಸಿಎಂಬಿಯಲ್ಲಿ 400 ಕ್ಕೆ ದಿವ್ಯಾ ರಾಠೋಡ 397, ಬಸಮ್ಮ ಜುಮ್ಮಣ್ಣ ಪೂಜಾರಿ 393, ರಿಯಾಝ ಅವಟಿ 393 ಅಂಕಗಳನ್ನು ಪಡೆದುಕೊಂಡಿದ್ದಾರೆ. ಭೌತ ಶಾಸ್ತ್ರದಲ್ಲಿ 15, ರಸಾಯನ ಶಾಸ್ತ್ರದಲ್ಲಿ 04, ಗಣಿತದಲ್ಲಿ 08, ಜೀವಶಾಸ್ತ್ರದಲ್ಲಿ 05 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಶೇ.94.50 ಫಲಿತಾಂಶ ಬಂದಿದೆ. ಭಾಗ್ಯಾ ಬಿರಾದಾರ 557(ಶೇ.92.83) ಪ್ರಥಮ, ಸ್ಪೂರ್ತಿ ಚೌದ್ರಿ 518(ಶೇ.86.33) ದ್ವೀತಿಯ, ರಾಮದೇವ ಚವ್ಹಾಣ 503 (ಶೇ.83.83) ತೃತಿಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಸವರಾಜ ನಾಯ್ಕೋಡಿ, ಪ್ರಾಚಾರ್ಯರು, ಉಪನ್ಯಾಸಕರು, ಮತ್ತು ಸಿಬ್ಬಂದಿವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.