ಹಗರಿಬೊಮ್ಮನಹಳ್ಳಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ 1ಲಕ್ಷ ಅನುದಾನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ 1ಲಕ್ಷ ಅನುದಾನ

ಹಗರಿಬೊಮ್ಮನಹಳ್ಳಿ 27: ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ ಹೆಗ್ಡಾಳ್ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್‌ ವತಿಯಿಂದ 1ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲಾಯಿತು. 

ಈ ಸಂಧರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಸಂಜೀವಗೌಡ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಎಲ್ಲಾ ಸಾಮಾಜಿಕಕೆಲಸಗಳಲ್ಲಿ ಗುರುತಿಸಿಕೊಂಡ ಸಂಸ್ಥೆಯಾಗಿದೆ, ಕೆರೆ ಅಭಿವೃದ್ಧಿ, ಮಹಿಳಾ ಸಬಲೀಕರಣ, ದೇವಸ್ಥಾನ ಜಿರ್ಣೊಧ್ಧಾರ, ನಿರ್ಗತಿಕರ ಮಾಶಾಸನ ಹೀಗೆ ಅನೇಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಇಂದು ತಾಲೂಕಿನ ಹಲು ಉತ್ಪಾದಕರ ಸಂಘಕ್ಕೆ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದರು. 

ಈ ಸಂಧರ್ಭದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ ಮೃತ್ತುಂಜಯ, ಹೆಗ್ಡಾಳ ಗ್ರಾಮದ ಹಿರಿಯ ಮುಖಂಡ ರಾಮಣ್ಣ, ಸಹಾಕಾರಿ ಸಂಘದ ಪದಾಧಿಕಾರಿಗಳು ಮತ್ತು ಯುವಕರು ಭಾಗವಹಿಸಿದ್ದರು. 


ಸುದ್ದಿ ಓದಿ