ಬಳ್ಳಾರಿ

ಆರೋಪಿಯ ಮಾಹಿತಿ ನೀಡಿದವರಿಗೆ 1 ಲಕ್ಷ ನಗದು ಬಹುಮಾನ

ಆರೋಪಿಯ ಮಾಹಿತಿ ನೀಡಿದವರಿಗೆ 1 ಲಕ್ಷ ನಗದು ಬಹುಮಾನ

ಬಳ್ಳಾರಿ,ಡಿ.21: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ 11ನೇ ವಾರ್ಡ್‌ನ ನಿವಾಸಿಯಾದ ಕೊರಚರ ನಾಗೇಶ ಅಲಿಯಾಸ್ ನಾಗಪ್ಪ ಎನ್ನುವ 45 ವರ್ಷದ ವ್ಯಕ್ತಿ 2020 ಜ.20ರಂದು 15ದಿನಗಳ ಮೇಲೆ ಪೆರೋಲ್ ರಜೆ ಮೇಲೆ ಹೋಗಿದ್ದು, ಇನ್ನು ಕೇಂದ್ರ ಕಾರಾಗೃಹಕ್ಕೆ ಮರಳಿ ಹಾಜರಾಗಿರುವುದಿಲ್ಲ. ಸದರಿ ಪರಾರಿಯಲ್ಲಿರುವ ಆರೋಪಿಯ ಮಾಹಿತಿ ನೀಡಿದವರಿಗೆ ರೂ.1 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಡಿಜಿಪಿ ಮತ್ತು ಐಜಿಪಿ ಅವರು ಘೋಷಿಸಿದ್ದಾರೆ. 

ಕೊರಚರ ನಾಗೇಶ ಅಲಿಯಾಸ್ ನಾಗಪ್ಪನ ಚಹರೆ ಗುರುತು: 5.6ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ ಹಾಗೂ ಕಪ್ಪು-ಬಿಳಿ ಮಿಶ್ರಿತ ಗುಂಗುರು ಕೂದಲು ಹೊಂದಿರುತ್ತಾನೆ. 

ಪರಾರಿಯಲ್ಲಿರುವ ವ್ಯಕ್ತಿಯ ಮಾಹಿತಿ ದೊರೆತಲ್ಲಿ ತೆಕ್ಕಲಕೋಟೆ ಸರ್ಕಲ್ ಇನ್ಸ್‌ಪೆಕ್ಟರ್ ಅವರ ಕಚೇರಿ ದೂ.08396-248044, ಮೊ.9480803033, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದು ಎಂದು ತೆಕ್ಕಲಕೋಟೆ ವೃತ್ತದ ಪೊಲೀಸ್ ವೃತ್ತ ನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ