ಜ್ಯೋತಿಯ ಬದುಕಿನ ಯಾತ್ರೆ
ನಾವೆಲ್ಲ ಶ್ರವಣಕುಮಾರನ ಕಥೆಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ವೃದ್ಧ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆತ ಅವರಿಗೆ ತೀರ್ಥಯಾತ್ರೆ ಮಾಡಿಸಿ ಸೇವೆ ಮಾಡಿದ ಎಂಬ ಕಥೆಯನ್ನು ಪೋಷಕರೋ, ಅಜ್ಜ-ಅಜ್ಜಿ, ಶಿಕ್ಷಕರು ಹೇಳಿರುತ್ತಾರೆ. ಅದೇ ತೆರನಾದ ವಿಭಿನ್ನ ಕಥೆಯೊಂದು ಆಧುನಿಕ ಯುಗದಲ್ಲಿಯೂ ಮರುಕಳಿಸಿದೆ ಎಂದರೇ ಆಶ್ಚರ್ಯವಲ್ಲವೇ ! ಕರೋನಾ ಲಾಕ್ಡೌನ್ನಿಂದಾಗಿ ಸುಮಾರು 1200 ಕಿ.ಮೀ. ದೂರದ ಅಂತರವನ್ನು ಸೈಕಲ್ ತುಳಿದು, ಅನಾರೋಗ್ಯ ಪೀಡಿತ ತಂದೆಯನ್ನು ಕೂರಿಸಿಕೊಂಡು ತನ್ನ ಊರಿಗೆ ತೆರಳಿದ ಸಾಹಸಿ ಬಾಲಕಿಯ ರೋಚಕ ಕಥೆಯಿದು. ಆ ಬಾಲಕಿಯೇ ಬಿಹಾರದ ಜ್ಯೋತಿಕುಮಾರಿ.
ಜ್ಯೋತಿಕುಮಾರಿ ಮೂಲತಃ ಬಿಹಾರದ ದರ್ಭಂಗದವಳು. ತಂದೆ ಮೋಹನ ಪಾಸ್ವಾನ ಮತ್ತು ತಾಯಿ ಫೋಲೋದೇವಿ. ಮೋಹನ ಪಾಸ್ವಾನ ಕಳೆದ 20 ವರ್ಷಗಳಿಂದ ಹರಿಯಾಣದ ಗುರುಗ್ರಾಮದಲ್ಲಿ ಅಟೋರಿಕ್ಷಾವನ್ನು ಬಾಡಿಗೆ ಆಧಾರದಲ್ಲಿ ಓಡಿಸುತ್ತಿದ್ದಾರೆ. ತಾಯಿಗೆ ದರ್ಭಂಗನ ಅಂಗನವಾಡಿಯಲ್ಲಿ ಅಡಿಗೆ ಮಾಡುವ ಕೆಲಸ ಇವರದು ಕಡುಬಡತನದ ಕುಟುಂಬ, ಮೋಹನರವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು. ಇವರಿಗೆ ಯಾವದೇ ಜಮೀನು ಇರದ ಕಾರಣ ಗುರುಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದು ರಿಕ್ಷಾ ಓಡಿಸುತ್ತಿದ್ದರು.
ಜ್ಯೋತಿಯ ತಂದೆ ಜನೇವರಿ 26ರಂದು ರಿಕ್ಷಾ ನಡೆಸುವಾಗ ಅಪಘಾತಕ್ಕೀಡಾಗಿ ಒಂದು ಕಾಲು ಗಾಯ ಮಾಡಿಕೊಂಡರು. ಹೀಗಾಗಿ ಜ್ಯೋತಿ ತಾಯಿ ಮತ್ತು ಸೋದರಮಾವನ ಜೊತೆ ಗುರುಗ್ರಾಮಕ್ಕೆ ತೆರಳಿದ್ದರು. ಅಟೋರಿಕ್ಷಾದ ಮಾಲಕರು ಯಾವದೇ ವೈದ್ಯಕೀಯ ವೆಚ್ಚವನ್ನು ಭರಿಸದೇ ಕೈ ಚೆಲ್ಲಿದರು. ತಾಯಿ ಫೋಲೋದೇವಿ 10 ದಿನಗಳವರೆಗೆ ಅಲ್ಲಿಯೇ ಇದ್ದು ಮೋಹನರವರನ್ನು ದವಾಖಾನೆಗೆ ತೋರಿಸಿ ಉಪಚಾರ ಮಾಡಿದರು. ಆದರೇ ತನ್ನ ಕೆಲಸದ ನಿಮಿತ್ತ ಸ್ವಲ್ಪ ಹಣವನ್ನು ಮಗಳ ಕೈಗಿತ್ತು ದರ್ಭಂಗಕ್ಕೆ ವಾಪಸಾದರು. ಕೆಲವೇ ದಿನಗಳಲ್ಲಿ ಕರೋನಾ ವೈರಸ ಲಾಕ್ಡೌನ ಷೋಷಣೆಯಾಯಿತು. ನಂತರ ಮತ್ತೇ ಲಾಕ್ಡೌನ್ ವಿಸ್ತರಿಸಿದ್ದರಿಂದ ಸಮಸ್ಯೆಗಳು ಜಾಸ್ತಿಯಾದವು.
ಜ್ಯೋತಿಯ ತಂದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅನಾರೋಗ್ಯದಿಂದ ಅಟೋ ಓಡಿಸುವದನ್ನು ನಿಲ್ಲಿಸಿದ್ದರು. ಆದಾಯ ಶೂನ್ಯವಾಗಿತ್ತು. ಬಾಡಿಗೆ ನೀಡದ ಕಾರಣ ಮನೆಯ ಮಾಲಿಕರು ಕರೆಂಟ್ ನಿಲುಗಡೆ ಮಾಡಿದರು. ಮನೆಯಲ್ಲಿ ರೇಷನ್ನು ಕಿಂಚಿತ್ತು ಇರಲಿಲ್ಲ. ಅಲ್ಲದೇ ಮಾಲಕರು ಮನೆ ತೆರವು ಮಾಡಲು ಸೂಚಿಸಿದರು. ಜ್ಯೋತಿಗೆ ದಿಕ್ಕೇ ತೋಚದಾಯಿತು. ಆದರೂ ಧೈರ್ಯದಿಂದ ಎಲ್ಲವನ್ನೂ ನಿಭಾಯಿಸಿದಳು. ಅಪ್ಪನ ಬ್ಯಾಂಕ್ ಖಾತೆಗೆ 1000 ರೂ. ಜಮೆ ಆಗಿತ್ತು. ಅದನ್ನು ತೆಗೆದುಕೊಂಡು ಸೈಕಲ್ ಅಂಗಡಿಗೆ ತೆರಳಿದರು. ಅಲ್ಲಿ ಸೈಕಲ್ಗೆ 1600/- ರೂ.ಗಳೆಂದು ಗೊತ್ತಾಯಿತು. ಸೈಕ್ಲ್ ಅಂಗಡಿಯವನಿಗೆ ರೂ.500 ರೂಪಾಯಿಗಳನ್ನು ನೀಡಿ, ಉಳಿದ ಹಣವನ್ನು ಬಂದ ಮೇಲೆ ನೀಡುವದಾಗಿ ವಿನಂತಿಸಿ ಸೈಕಲ್ ಖರೀದಿಸಿದಳು. ಆದರೇ ಅಪ್ಪ ಮೋಹನ ಸೈಕಲ್ ಮೇಲೆ ಬರಲು ನಿರಾಕರಿಸಿದರು. ಕೊನೆಗೂ ಅಪ್ಪನನ್ನು ಒಪ್ಪಿಸಿ, ಎರಡನೆಯ ಯೋಚನೆ ಮಾಡದೆ ಮೇ 8ರಂದು ಸೈಕಲ್ ಏರಿ 1200 ಕಿ.ಮೀ. ಪ್ರಯಾಣ ಶುರು ಮಾಡಿಯೇ ಬಿಟ್ಟಳು 15ರ ಹರೆಯದ ಜ್ಯೋತಿ.
ತನ್ನ ತಂದೆಯನ್ನು ಸೈಕಲ್ ಕ್ಯಾರಿಯರ್ನಲ್ಲಿ ಕೂರಿಸಿಕೊಂಡು ಬಿಹಾರದ ದರ್ಭಂಗಕ್ಕೆ ಬದುಕಿನ ಯಾತ್ರೆ ಪ್ರಾರಂಭಿಸಿದಳು. ದಿನವೊಂದಕ್ಕೆ ಸರಾಸರಿಯಂತೆ 100-120 ಕಿ.ಮೀ. ಸೈಕಲ್ ಪೆಡಲ್ ತುಳಿಯುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ರಸ್ತೆ ಬದಿಯ ಪೆಟ್ರೋಲ್ ಬಂಕ್ಗಳಲ್ಲಿ ವಾಸ್ತವ್ಯ ಮಾಡಿ ನಿದ್ರಿಸುತ್ತಿದ್ದರು. ಅಲ್ಲಿ ಅನೇಕ ಜನರು ಇವರಿಗೆ ಊಟ ಮತ್ತು ನೀರು ನೀಡಿ ಉಪಚರಿಸಿದ್ದಾರೆ. ಅಲ್ಲದೇ ಮಾರ್ಗ ಮಧ್ಯದಲ್ಲಿ ಲಾರಿ ಚಾಲಕರೊಬ್ಬರು ಕೆಲವು ಕಿ.ಮೀರವೆಗೆ ಇವರನ್ನು ಕರೆದುಕೊಂಡು ಹೋಗಿದ್ದಾರೆ. ಲಾರಿ ಬೇರೆ ಮಾರ್ಗದಲ್ಲಿ ಸಾಗಿದಾಗ ಜ್ಯೋತಿ ಅನಿವಾರ್ಯವಾಗಿ ಮತ್ತೆ ಸೈಕಲ್ ಪೆಡಲ್ ತುಳಿದು ಪ್ರಯಾಣ ಬೆಳೆಸಿದ್ದಾರೆ. ಅಂತಿಮವಾಗಿ ಹತ್ತು ದಿನಗಳ ಸುದೀರ್ಘ ಪ್ರಯಾಣದ ನಂತರ ಮೇ 17ರಂದು ರಾತ್ರಿ 9 ಗಂಟೆಗೆ ಬಿಹಾರದ ದರ್ಭಂಗವನ್ನು ತಲುಪುತ್ತಾಳೆ. ದಿಟ್ಟತನದ ಜ್ಯೋತಿ ಹಿಂಬದಿಯ ಕ್ಯಾರಿಯರ್ನಲ್ಲಿ ಅಪ್ಪನನ್ನು ಕೂರಿಸಿಕೊಂಡು ಹರಿಯಾಣದ ಗುರುಗ್ರಾಮದಿಂದ ಬಿಹಾರದ ದರ್ಭಂಗವರೆಗೆ ಅಂದಾಜು 1200 ಕಿ.ಮೀ. ತನಕ ಸೈಕಲ್ ತುಳಿದು ಪ್ರಯಾಣಿಸುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದಳು.
ಹೀಗಾಗಿ 15ರ ಹರೆಯದ ಬಾಲಕಿ ಜ್ಯೋತಿಯ ಸಾಹಸವನ್ನು ದೇಶ, ವಿದೇಶಗಳ ಪ್ರತಿನಿಧಿಗಳು ಶ್ಲಾಘಿಸಿವೆ. ಅಮೇರಿಕೆಯ ಅಧ್ಯಕ್ಷ ಡೊನ್ಡಾಲ್ ಟ್ರಂಪ್ ಅವರ ಪುತ್ರಿ ಇವಾಂಕ್ ಟ್ರಂಪ್ ಜ್ಯೋತಿಯ ದಿಟ್ಟತನ ಮತ್ತು ಸಾಹಸವನ್ನು ಟ್ವೀಟ್ದಲ್ಲಿ ಮುಕ್ತವಾಗಿ ಶ್ಲಾಘಿಸಿದ್ದಾರೆ. ಜ್ಯೋತಿಯ ಸಾಧನೆ ಯಾವದೇ ಒಲಂಪಿಕ್ಸ್ ಪದಕ ವಿಜೇತರ ಸಾಧನೆಗಿಂತ ಕಡಿಮೆಯೇನೂ ಇಲ್ಲ. ಭಾರತದ ಸೈಕ್ಲಿಂಗ್ ಫೆಡರೇಶನ್ ಅಧ್ಯಕ್ಷ ಓಂಕಾರ ಸಿಂಗ್ ಅವರು 'ಜ್ಯೋತಿಯ ಸಾಮಥ್ರ್ಯದಿಂದ ನಾವೆಲ್ಲ ಪ್ರಭಾವಿತರಾಗಿದ್ದೇವೆ. ಬಾಲಕಿಗೆ ತನ್ನ ಸಾಮಥ್ರ್ಯ ಪ್ರದಶರ್ಿಸಲು ನಾವು ಅವಕಾಶ ನೀಡುತ್ತೇವೆ' ಎಂದು ತಿಳಿಸಿದ್ದಾರೆ. ಸೈಕ್ಲಿಂಗ್ ಫೆಡರೇಶನ್ದವರು 14-15ರ ವಯೋಮಾನ ಗುಂಪಿನಲಿರುವ 10 ಸೈಕ್ಲಿಸ್ಟ್ಗಳನ್ನು ಗುರುತಿಸಿ ತರಬೇತಿ ನೀಡುತ್ತಾರೆ. ಹಾಗೆಯೇ ಇವರ ಪ್ರತಿಭೆಯನ್ನು ಪರೀಕ್ಷಿಸುವ ಮೂಲಕ ರಾಷ್ಟ್ರೀಯ ತಂಡಕ್ಕಾಗಿ ಫೆಡರೇಶನ್ ದೊಡ್ಡ ಕೊಡುಗೆಯನ್ನೇ ನೀಡಿದೆ.
ಜ್ಯೋತಿಯು ಮನೆಯಲ್ಲಿ ಕಾಡುತ್ತಿದ್ದ ಕಡು ಬಡತನದಿಂದ ತನ್ನ ಶಿಕ್ಷಣವನ್ನು 8ನೆಯ ತರಗತಿ ಮೊಟಕುಗೊಳಿಸಿ ಪಾಲಕರಿಗೆ ನೆರವಾಗಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳು. ಆದರೇ ಜ್ಯೋತಿಗೆ ಈಗ ಹಲವಾರು ಅವಕಾಶಗಳು ಒದಗಿ ಬರತೊಡಗಿವೆ. ಬಿಹಾರದ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಜ್ಯೋತಿಕುಮಾರಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಡತನದಲ್ಲಿರುವ ಕುಟುಂಬಕ್ಕೆ ನೆರವು ನೀಡುವದರ ಜೊತೆಗೆ ಜ್ಯೋತಿಯ ಶಿಕ್ಷಣಕ್ಕೆ ಸಂಪೂರ್ಣ ಸಹಾಯ ಮಾಡುವದಾಗಿ ತಿಳಿಸಿದ್ದಾರೆ. ಜ್ಯೋತಿಕುಮಾರಿಗೆ ಸೈಕ್ಲಿಂಗ್ ಟ್ರಯಲ್ಸ್ ಪಾಸ ಮಾಡಬೇಕಿದೆ. ನಂತರ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿರುವ 'ಸ್ಟೇಟ್ ಆಫ್ ದ ಆಟರ್್ ನ್ಯಾಷನಲ್ ಸೈಕ್ಲಿಂಗ್ ಅಕಾಡೆಮಿ' ಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾರೆ. ಇದಕ್ಕಾಗಿ ಜ್ಯೋತಿ ಯಾವದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲವೆಂದು ಫೆಡರೇಷನ್ ಅಧ್ಯಕ್ಷ ಓಂಕಾರ್ಸಿಂಗ್ ತಿಳಿಸಿದ್ದಾರೆ. ಲಾಕ್ಡೌನ್ ಮುಗಿದನಂತರ ಜ್ಯೋತಿಯನ್ನು ನವದೆಹಲಿಗೆ ಕರೆಸಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಅವರ ಪ್ರಯಾಣ ವೆಚ್ಚ, ವಸತಿ ವೆಚ್ಚ ಮತ್ತು ಅವರ ಜೊತೆಗೆ ಸಂಬಂಧಿಕರು ಉಳಿದುಕೊಳ್ಳಲು ಅವಕಾಶ ನೀಡಲಾಗುದೆಂದು ಅವರು ತಿಳಿಸಿದ್ದಾರೆ. ಜ್ಯೋತಿಕುಮಾರಿಯವರ ತಂದೆ ಮೋಹನ ಪಾಸ್ವಾನ್ರು ಭಾರತ ಲಾಕ್ಡೌನ್ ಮುಗಿದ ನಂತರ ದೆಹಲಿಗೆ ತರಬೇತಿಗೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.
ಕರೋನಾ ಲಾಕ್ಡೌನ್ ಸಮಯದಲ್ಲಿ ಜ್ಯೋತಿಯ ರೀತಿಯಲ್ಲಿಯೇ ಸ್ವಗ್ರಾಮ ತಲುಪಲು ಸಾಹಸ ಯಾತ್ರೆಗಳನ್ನು ಕೈಗೊಂಡ ಹಲವು ಕಾಮರ್ಿಕರ ಕಥೆಗಳು ಮನಕಲಕುತ್ತವೆ. ಇದಕ್ಕೆ ಕಾರಣ ವಾದ ನೈಜ ಸಂಗತಿಗಳು ವಾಸ್ತವಿಕತೆಯ ಅರಿವನ್ನು ಮೂಡಿಸುತ್ತವೆ. ಜ್ಯೋತಿಗೆ ಇಂತಹ ಅನಿವಾರ್ಯ ಸ್ಥಿತಿ ಬರಲು ಕಾರಣವೇನು ಎಂಬುದು ಮುಖ್ಯವಾಗುತ್ತದೆ. ಅವಳ ತಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮನೆ ಸೇರಿದ್ದರು. ಆದಾಯ ಶೂನ್ಯವಾಗಿತ್ತು. ದಿನನಿತ್ಯದ ಬಳಕೆಗೆ ಕೂಡಿಟ್ಟಿದ ಹಣ ಸಂಪೂರ್ಣ ಖಾಲಿಯಾಗಿತ್ತು. ರೇಷನ್ ಖಾಲಿಯಾಗಿತ್ತು, ಮನೆಯ ಮಾಲೀಕ ಬಾಡಿಗೆ ನೀಡಿ ಇಲ್ಲವೇ ಮನೆ ಖಾಲಿ ಮಾಡಿ ಎಂದು ಒತ್ತಾಯಿಸಿದ್ದರು. ಅನಾರೋಗ್ಯಕ್ಕೆ ತುತ್ತಾದ ತಂದೆ ಹಾಗೂ ತಾನೂ ಹೊತ್ತಿನ ಊಟಕ್ಕೂ ಪರಿತಪಿಸುವಂತಹ ಪರಿಸ್ಥಿತಿ ಎದುರಾಯಿತು. ಇವೆಲ್ಲವುಗಳು ಜ್ಯೋತಿಗೆ ಕಠಿಣ ನಿಧರ್ಾರ ತೆಗೆದುಕೊಳ್ಳಲು ಕಾರಣಗಳಾದವು. ಹಾಗಾದರೇ ನಮ್ಮ ಸಕರ್ಾರದ ಮಾರ್ಗಸೂಚಿಗಳೆಲ್ಲ ಎನಾದವು ? ಅವುಗಳೆಲ್ಲ ಎಷ್ಟರಮಟ್ಟಿಗೆ ಜಾರಿಯಾಗಿ ಅನುಸರಣೆಯಾಗಿವೆ ಎಂಬುದಕ್ಕೆ ಜ್ಯೋತಿ ಒಂದು ಉದಾಹರಣೆಯಾಗುತ್ತಾರೆ. 'ದಿ ನ್ಯೂಯಾರ್ಕ ಟೈಮ್ಸ್' ಈ ಕಥೆಯ ಕುರಿತು ಹೀಗೆ ಹೇಳಿದೆ ' ಇದು ಭಯಾನಕ ದುಃಖದ ಕಥೆಯಾಗಿದ್ದು, ಅದು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತದೆ.
- ಸುರೇಶ ಗುದಗನವರ
ಬೆಳಗಾವಿ
ಮೊ.9449294694