ವೇದಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ: ಶಾಸಕ ಬಿ.ನಾಗೇಂದ್ರ ಸಾಂತ್ವನ
ಬಳ್ಳಾರಿ:ಡಿ(18)ರಂದು ತಾಲೂಕಿನ ವೇದಾವತಿ(ಹಗರಿ) ನದಿಯಲ್ಲಿ ಸಿಡಿಗಿನಮೊಳ ಗ್ರಾಮದ ಹೊನ್ನೂರ ಸ್ವಾಮಿ ಅವರ ಪುತ್ರ ಧನಂಜಯ್ 21 ವರ್ಷದ ಯುವಕ ಎಮ್ಮೆಗಳನ್ನು ಮೇಯಿಸಲು ಹೋಗುವ ಸಂದರ್ಭದಲ್ಲಿ ನೀರಿನ ಮಟ್ಟ ಕಡಿಮೆ ಇದ್ದು ಎಮ್ಮೆಗಳನ್ನು ಮೇಯಿಸಿಕೊಂಡು ಹಿಂತಿರುಗಿ ಮನೆಗೆ ವಾಪಸ್ಸು ಬರುವಾಗ ವೇದವತಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗಿರುವುದು ತಿಳಿಯದೆ ಎಮ್ಮೆಗಳನ್ನು ಹೊಡೆದುಕೊಂಡು ವೇದವತಿ ನದಿಯಲ್ಲಿ ಸಂಜೆ 4 ಗಂಟೆಗೆ ಬರುವ ಸಂದರ್ಭದಲ್ಲಿ ನೀರಿನ ರಭಸ ಜಾಸ್ತಿಯಾಗಿ ಕೊಚ್ಚಿಕೊಂಡು ಹೋಗಿರುತ್ತಾನೆ.
ಈ ಘಟನೆ ಸುದ್ದಿ ತಿಳಿದ ನಂತರ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ನಿನ್ನೆ ರಾತ್ರಿ 11 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆಗೆ ನಿರಂತರವಾಗಿ ಹುಡುಕಾಟದಲ್ಲಿ ತೊಡಗಿದ್ದರೂ ಯುವಕ ಪತ್ತೆಯಾಗಿಲ್ಲ. ನಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಬೆಳಿಗ್ಗೆ 6 ಗಂಟೆಗೆ ಬೋಟ್, ನಿಪುಣ ಈಜುಗಾರರನ್ನು ಮತ್ತು ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕಳುಹಿಸಿ ಕಾಯರ್ಾಚರಣೆ ನಡೆಸಲು ಸೂಚನೆ ನೀಡಿದರು.
ಶಾಸಕ ಬಿ.ನಾಗೇಂದ್ರ ಅವರು ಬಾಲಕ ತಂದೆ ಹೊನ್ನೂರ ಸ್ವಾಮಿ ಅವರಿಗೆ ಸಾಂತ್ವನ ಹೇಳಿದರು. ಶಾಸಕರ ಜೊತೆಯಲ್ಲಿ ಪಿ.ಡಿ ಹಳ್ಳಿ ಠಾಣೆಯ ಪಿಎಸ್ಐ ಶಶಿಧರ ತಿಮ್ಮಪ್ಪ ಅವರು ಮೋಕ ಠಾಣೆಯ ಪಿಎಸ್ಐ ಶಂಕ್ರಪ್ಪ ಅವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ವೆಂಕಟೇಶ್ ಪ್ರಸಾದ್, ಅಣ್ಣ ನಾಗರಾಜ್, ಬೆಣಕಲ್ ಬಸವರಾಜ್ ಗೌಡ, ಯೂನಿಸ್ ಬಾಯ್, ಶ್ರೀನಾಥ್, ಗೋನಾಳ್ ನಾಗಭೂಷಣ ಗೌಡ, ದುರುಗಣ್ಢ ಸೇರಿದಂತೆ 200 ರಿಂದ 250 ಸಿಡಿಗಿನಮೊಳ ಗ್ರಾಮಸ್ಥರು ಹಾಜರಿದ್ದರು.