ಮನರಂಜನೆ

ರಾಕಿಂಗ್ ಸ್ಟಾರ್ ಜನ್ಮದಿನ : ನಟ, ನಟಿಯರಿಂದ ಶುಭ ಹಾರೈಕೆ

ರಾಕಿಂಗ್ ಸ್ಟಾರ್ ಜನ್ಮದಿನ : ನಟ, ನಟಿಯರಿಂದ ಶುಭ ಹಾರೈಕೆ

ಬೆಂಗಳೂರು, ಜ 08 :ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದು, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನ ಹಲವಾರು ನಟ, ನಟಿಯರು ಶುಭಾಶಯ ಕೋರಿದ್ದಾರೆ. ಜನವರಿ 07 ರ ಮಧ್ಯರಾತ್ರಿ ಪ್ರೀತಿಯ ಮಡದಿ ರಾಧಿಕಾ ಜೊತೆಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಕೇಕ್ ಕತ್ತರಿಸಿ ತಿನ್ನಿಸುತ್ತಿರುವ ಚಿತ್ರವನ್ನು ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳುವುದರ ಜೊತೆಗೆ, 'ನೀನು ಹೇಗೆ ನನಗೆ ಪರ್ಫೆಕ್ಟ್ ಜೋಡಿ ಎಂದು ಆಶ್ಚರ್ಯವಾಗುತ್ತದೆ. ನಂತರ ಅರ್ಥವಾಗುತ್ತದೆ, ನೀನು, ನಿನ್ನ ಪಾಲಿನದ್ದನ್ನೂ ನನಗೇ ಕೊಟ್ಟುಬಿಡುತ್ತೀಯ ಎಂದು’ ಎಂಬುದಾಗಿ ಬರೆದುಕೊಂಡಿದ್ದು ಶುಭ ಕೋರಿದ್ದಾರೆ.

ನಟ ಪುನೀತ್ ರಾಜ್‌ಕುಮಾರ್.  ಟ್ವೀಟ್‌ ಮೂಲಕ ಶುಭ ಕೋರಿದ್ದು, ಕೆಜಿಎಫ್‌ ಟೀಸರ್ ನ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಮನೆಯ ಬಳಿ ಬಾರದಂತೆ ಹಾಗೂ ಎಲ್ಲೂ ಗುಂಪುಗೂಡಿ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡವೆಂದು ಫೇಸ್‌ಬುಕ್ ವಿಡಿಯೋ ಮೂಲಕ ಮನವಿ ಮಾಡಿದ್ದರು. ಇನ್ನು ಯಶ್ ಹುಟ್ಟುಹಬ್ಬ ಪ್ರಯುಕ್ತ ಕೆಜಿಎಫ್ 2 ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ಈ ಮೊದಲೇ ಚಿತ್ರತಂಡ ಘೋಷಿಸಿತ್ತು. ಆದರೆ ಟೀಸರ್ ಅನ್ನು ಕಿಡಿಗೇಡಿಗಳು ಲೀಕ್ ಮಾಡಿದ ಕಾರಣ, ಗುರುವಾರವೇ ಟೀಸರ್ ಅನ್ನು ತರಾತುರಿಯಲ್ಲಿ ಬಿಡುಗಡೆ ಮಾಡಲಾಯಿತು.  

  


ಸುದ್ದಿ ಓದಿ