ತಾಳಿಕೋಟಿ

ವಿಶ್ವ ಗುಬ್ಬಚ್ಚಿ ದಿನ

ವಿಶ್ವ ಗುಬ್ಬಚ್ಚಿ ದಿನ

ತಾಳಿಕೋಟೆ21: ಪಟ್ಟಣದ ಹಸಿರು ಸಂಪದ ಬಳಗದ ನೇತೃತ್ವದಲ್ಲಿ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಪಕ್ಷಿ ಸಂಕುಲಗಳ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

ಸೋಮವಾರ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಇನ್ನೂರಕ್ಕೂ ಹೆಚ್ಚು ಮಣ್ಣಿನ ತಟ್ಟೆಗಳನ್ನ ಗುಬ್ಬಚ್ಚಿ ಸೇರಿದಂತೆ ಪಕ್ಷಿಗಳಿಗೆ ಕಾಳು ನೀರು ಇಟ್ಟು ಪೋಷಿಸಲು ಸಾರ್ವಜನಿಕರಿಗೆ ಇಂದು ವಿತರಿಸಲಾಯಿತು. ಪಟ್ಟಣದ ಹಳೇ ಹುಡ್ಕೋ ಕಾಲೋನಿಯಲ್ಲಿನ ಉದ್ಯಾನವನದಲ್ಲಿ ಮಣ್ಣಿನ ತಟ್ಟೆಗಳನ್ನ ವಿತರಿಸುವ ಮೂಲಕ ವಿಶ್ವ ಗುಬ್ಬಚ್ಚಿ ದಿನದ ಕುರಿತಾಗಿ ಜಾಗೃತಿ ಮೂಡಿಸಲಾಯಿತು. ಮುಂಚಿತವಾಗಿಯೇ ಸಭೆ ಸೇರಿ ದಾನಿಗಳಿಂದ ಮಣ್ಣಿನ ತಟ್ಟೆಗಳನ್ನ ಸಂಗ್ರಹಿಸಿ ಇಂದು ವಿತರಿಸಲಾಯಿತು. ಹಸಿರು ಸಂಪದ ಬಳಗ ಈ ಮುಂಚೆಯೂ ಸಹ ಪಟ್ಟಣದಲ್ಲಿ ಪರಿಸರ ಸಂರಕ್ಷಣೆ ಕುರಿತಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ.

ಮಣ್ಣಿನ ಪಾತ್ರೆಯನ್ನು ವಿತರಿಸಿ ಮಾತನಾಡಿದ ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವ್ಹಿ.ಎಸ್.ಕಾಚರ್ಿ, ಬಳಗದ ಸದಸ್ಯರುಗಳಾದ ಚಿದಂಬರ ಕರಮಳಕರ, ಗುಂಡುರಾವ್ ಧನಪಾಲ, ಪಕ್ಷಿ ಸಂಕುಲ ಅಳಿವಿನಂಚಿನಲ್ಲಿದೆ. ಆಧುನಿಕತೆಯ ಭರಾಟೆಯಲ್ಲಿ ಕಾಂಕ್ರಿಟ್ ಕಾಡುಗಳ ಸಂಖ್ಯೆ ಹೆಚ್ಚಿದಂತೆ ಪಕ್ಷಿ ಸಂಕುಲ ತನ್ನ ಆಹಾರ, ನೀರು, ಆವಾಸಸ್ಥಾನಗಳಿಂದ ವಂಚಿತವಾಗುತ್ತ ನಡೆದಿದೆ. ಬೇಸಿಗೆಯಲ್ಲಿ ಪಕ್ಷಿ ಸಂಕುಲ ನೀರು ಆಹಾರಕ್ಕೆ ಪರಿತಪಿಸುತ್ತವೆ. ಈ ಹಿನ್ನೆಲೆಯಲ್ಲಿ ತಾಳಿಕೋಟೆ ಪಟ್ಟಣದ ಹಸಿರು ಸಂಪದ ಬಳಗವು ಗುಬ್ಬಚ್ಚಿ ದಿನದಂದು ಮಣ್ಣಿನ ತಟ್ಟೆ ವಿತರಣೆ ಮೂಲಕ ಜಾಗೃತಿ ಕಾರ್ಯ ಮಾಡುತ್ತಿದೆ ಎಂದರು.

ಬಳಗದ ಸಂಚಾಲಕ ಶರಣು ಶಿ ಗಡೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಸದಸ್ಯರುಗಳಾದ ರಾಜು ಹಂಚಾಟೆ, ಅಶೋಕ ಹಂಚಲಿ, ಪ್ರಶಾಂತ ಜನಾದ್ರಿ, ಕಲ್ಲಪ್ಪ ಬುಜರಿ, ಶಫೀಕ ಇನಾಮದಾರ, ಅನಿಲ ಇರಾಜ, ಎಂ.ಎಸ್.ಹುಲ್ಲೂರ, ಸದ್ದಾಂ ಕಕನೋಡಿ,  ಆರ್.ಎಫ್.ಹಿರೇಮಠ ಸೇರಿದಂತೆ ಇತರರು ಇದ್ದರು.



ಸುದ್ದಿ ಓದಿ