ವಿಶ್ವ ಋತುಚಕ್ರ ನೈರ್ಮಲ್ಯ ಜಾಗೃತಿ ದಿನಾಚರಣೆ
ಬಳ್ಳಾರಿ 28: ಋತುಚಕ್ರವು ಹೆಣ್ಣುಮಕ್ಕಳಲ್ಲಿ ಕಂಡುಬರುವ ಸಹಜ ಕ್ರಿಯೆಯಾಗಿರುವುದರಿಂದ ಕುಟುಂಬದ ಸದಸ್ಯರು ಅವರನ್ನು ಈ ಅವಧಿಯಲ್ಲಿ ದೂರವಾಗಿಡದೇ, ಯಾವುದೇ ಅಳುಕಿಲ್ಲದೆ ಎಲ್ಲರೊಂದಿಗೆ ದೈನಂದಿನ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಆರ್ ಅನಿಲಕುಮಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಿಲ್ಲಪೇಟೆ ನಗರ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀರಾಂಪುರ ಕಾಲೋನಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಮುಟ್ಟಿನ ಒಗ್ಗಟ್ಟು ಎಂಬ ಘೋಷವಾಕ್ಯದೊಂದಿಗೆ ವಿಶ್ವ ಋತುಚಕ್ರ ನೈರ್ಮಲ್ಯ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬರುವುದನ್ನು ನಾವು ಋತುಮತಿ ಎಂದು ಕರೆಯುತ್ತೆವೆ. ಸಾಮಾನ್ಯವಾಗಿ ಪ್ರತಿ 28 ದಿನಗಳಿಗೊಮ್ಮೆ ಋತುಚಕ್ರ ಉಂಟಾಗುವುದು ವಾಡಿಕೆ. ಒಂದುವೇಳೆ 28 ದಿನಗಳಿಗಿಂತ ಹೆಚ್ಚು ದಿನಗಳು ಆಥವಾ ಕಡಿಮೆ ದಿನಗಳಿಗೊಮ್ಮೆ ಋತುಚಕ್ರ ಉಂಟಾದರೆ ಗಾಬರಿಯಾಗುವ ಅವಶ್ಯಕತೆಯಿರುವುದಿಲ್ಲ. ಪ್ರತಿ ಗುರುವಾರ ಹದಿಯರೆಯದವರ ಆರೋಗ್ಯ ಜಾಗೃತಿಗಾಗಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸ್ನೇಹ ಕ್ಲಿನಿಕ್ ಮೂಲಕ ಸಲಹೆ ಸಮಾಲೋಚನೆಗೆ ಅವಕಾಶವಿದ್ದು ಇದರ ಹೊರತಾಗಿಯೂ ಪ್ರತಿದಿನ ಸಹ ಹತ್ತಿರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಔಷಧೋಪಚಾರ ಪಡೆಯುವ ಜೊತೆಗೆ ಮದುವೆ ನಂತರದ ತಾಯ್ತತನದ ಅವಧಿಯಲ್ಲಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು .
ನಂತರದಲ್ಲಿ ವೈದ್ಯಾಧಿಕಾರಿ ಡಾ.ಸೌಜನ್ಯ ಅವರು ಮಾತನಾಡಿ, ಹೆಣ್ಣಿನ ಕೆಳಹೊಟ್ಟೆಯಯಲ್ಲಿ ಗರ್ಭಕೋಶವಿರುತ್ತದೆ ಅದರ ಪಕ್ಕದಲ್ಲಿ ಅಂಡಾಶಯದಲ್ಲಿ ಅಂಡಾಣು ಉತ್ಪತ್ತಿಯಾಗಿ ಅಂಡನಾಳ, ಗರ್ಭಕೋಶ ಮೂಲಕ ಯೋನಿಯಿಂದ ಪ್ರತಿ 28 ದಿನಗಳಿಗೊಮ್ಮೆ ರಕ್ತ ಮಿಶ್ರಣದೊಂದಿಗೆ ಹೊರಬರುತ್ತದೆ. ಇದನ್ನು ನಾವು ರಕ್ತಸ್ರಾವ ಸಹ ಎಂದು ಕೆರಯುತ್ತೇವೆ. ಇದು ಅವರ ವೈಯಕ್ತಿಕ ಆರೋಗ್ಯದ ಹಿನ್ನಲೆಯಲ್ಲಿ 03 ರಿಂದ 07 ದಿನಗಳ ಕಾಲ ರಕ್ತಸ್ರಾವವಾಗಬಹುದು. ಈ ಅವಧಿಯಲ್ಲಿ ಶುಭ್ರವಾದ ಹತ್ತಿಯಿಂದ ಸಿದ್ದಪಡಿಸಿದ ಪ್ಯಾಡ್ಗಳನ್ನು ಬಳಸುವುದು ಸೂಕ್ತ ಎಂದರು.
ಒಮ್ಮೆ ಬಳಸಿದ ಪ್ಯಾಡಗಳನ್ನು ಗಂಟೆಗಳ ಕಾಲ ಬಳಸಿ ಸೂಕ್ತ ವಿಲೆವಾರಿ ಮಾಡಲು ಮರೆಯಬಾರದು ಅಲ್ಲದೆ ಬಟ್ಟೆಯನ್ನು ಬಳಸುತ್ತಿದ್ದರೆ ಪ್ರತಿ ಬಳಕೆ ನಂತರ ಚೆನ್ನಾಗಿ ಸೋಪು ನೀರಿನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸಬೇಕು. ಅಲ್ಲದೆ ಇವುಗಳನ್ನು 04 ತಿಂಗಳಗಳವರೆಗೆ ಬಳಸಬಹುದು ಆದರೆ ಸೂಕ್ತ ಜಾಗೃತೆ ಅವಶ್ಯಕ. ಅಲ್ಲದೆ ಈ ಅವಧಿಯಲ್ಲಿ 15 ರಿಂದ 60 ಮಿಲಿ ಲೀಟರ್ನಷ್ಟು ರಕ್ತಸ್ರಾವವಾಗುವುದರಂದ ಬೆಳೆಕಾಳು ತರಕಾರಿ ಹಾಲು ಮೀನು ಮೊಟ್ಟೆ ಮುಂತಾದವುಗಳನ್ನು ಆಹಾರದಲ್ಲಿ ಸೇವಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಶಾಲಾ ಮುಖ್ಯಗುರುಗಳಾದ ಅನಂತ ನಾಯ್ಕ, ಶಿಕ್ಷಕರಾದ ರಮೇಶ, ಲಕುಮಾ ಬಾಯಿ, ಸಿಬ್ಬಂದಿಯವರಾದ ನಾಗಮಣಿ, ಪ್ರತೀಭಾ, ಆಶಾ ಕಾರ್ಯಕತರ್ೆಯರಾದ ಭಾಗ್ಯಮ್ಮ, ಆಪ್ರೋಜ್, ಲೀಲಾವತಿ, ಯಲ್ಲಮ್ಮ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು